ಹೊಸ ಸರ್ಕಾರ ತನ್ನ ಭರವಸೆ ಈಡೇರಿಸಲಿ; ಸಿಎಂ ನಿತೀಶ್ ಕುಮಾರ್​ಗೆ ತೇಜಸ್ವಿ ಯಾದವ್ ಅಭಿನಂದನೆ

ಬಿಹಾರದಲ್ಲಿ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ಅವರಿಗೆ ಇಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಿತೀಶ್ ಕುಮಾರ್ ಸತತ ಮತ್ತೊಂದು ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಆಡಳಿತಾರೂಢ ಎನ್‌ಡಿಎ ಬಣವನ್ನು ಅಭಿನಂದಿಸಿದ್ದಾರೆ.

ಹೊಸ ಸರ್ಕಾರ ತನ್ನ ಭರವಸೆ ಈಡೇರಿಸಲಿ; ಸಿಎಂ ನಿತೀಶ್ ಕುಮಾರ್​ಗೆ ತೇಜಸ್ವಿ ಯಾದವ್ ಅಭಿನಂದನೆ
Tejashwi Yadav

Updated on: Nov 20, 2025 | 3:20 PM

ಪಾಟ್ನಾ, ನವೆಂಬರ್ 20: ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದ ನಂತರ ಹಂಚಿಕೊಂಡ ಸಂದೇಶದಲ್ಲಿ ಆರ್‌ಜೆಡಿ ನಾಯಕ ನಿತೀಶ್ ಕುಮಾರ್ (Nitish Kumar) ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಹೊಸ ಆಡಳಿತವು ತನ್ನ ಬದ್ಧತೆಗಳನ್ನು ಪೂರೈಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ತೇಜಸ್ವಿ ಯಾದವ್ (Tejashwi Yadav) ಹೊಸ ಸರ್ಕಾರವು ಜನರ ನಿರೀಕ್ಷೆಗಳನ್ನು ಪೂರೈಸಲಿ ಮತ್ತು ಬಿಹಾರಕ್ಕೆ ಸಕಾರಾತ್ಮಕ ಮತ್ತು ಬದಲಾವಣೆಗಳನ್ನು ತರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಬಿಹಾರದ ನಿವಾಸಿಗಳು ಸರ್ಕಾರದ ರಚನೆಗೆ ಮುಂಚಿತವಾಗಿ ನೀಡಿದ ಭರವಸೆಗಳು ಮತ್ತು ಘೋಷಣೆಗಳನ್ನು ಈಡೇರಿಸಲಿದೆ ಎಂದು ನಿರೀಕ್ಷಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಹಾಗೇ, ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಎಲ್ಲಾ ಸಚಿವರನ್ನು ತೇಜಸ್ವಿ ಯಾದವ್ ಅಭಿನಂದಿಸಿದ್ದಾರೆ. “ಹೊಸ ಸರ್ಕಾರವು ಜವಾಬ್ದಾರಿಯುತ ನಾಗರಿಕರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತದೆ, ತನ್ನ ಭರವಸೆಗಳು ಮತ್ತು ಘೋಷಣೆಗಳನ್ನು ಪೂರೈಸುತ್ತದೆ. ಬಿಹಾರದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Nitish Kumar Swearing-In: ಹತ್ತನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ, ಪ್ರಧಾನಿ ಮೋದಿ ಭಾಗಿ

ನಿತೀಶ್ ಕುಮಾರ್ ಐತಿಹಾಸಿಕ ಐದನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಅವರು ರಾಜ್ಯದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಯಾದರು ಮತ್ತು ದಾಖಲೆಯ 10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖ ಎನ್‌ಡಿಎ ನಾಯಕರ ಸಮ್ಮುಖದಲ್ಲಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಬಿಹಾರ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ