ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: 7 ಜನರು ಸಾವು, ಹಲವರಿಗೆ ಗಂಭೀರ ಗಾಯ

ಭೀಕರ ರಸ್ತೆ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವಂತಹ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಲೆ ಪಟ್ಟಣದ ಬಳಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ: 7 ಜನರು ಸಾವು, ಹಲವರಿಗೆ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ
Edited By:

Updated on: Oct 31, 2022 | 11:15 PM

ಮುಂಬೈ: ಭೀಕರ ರಸ್ತೆ ಅಪಘಾತದಲ್ಲಿ 7 ಜನರು ಸಾವನ್ನಪ್ಪಿರುವಂತಹ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಂಗೋಲೆ ಪಟ್ಟಣದ ಬಳಿ ನಡೆದಿದೆ. ಇನ್ನು ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಸುಮಾರು 32 ಯಾತ್ರಾರ್ಥಿಗಳ ತಂಡವು ಕೊಲ್ಹಾಪುರ ಜಿಲ್ಲೆಯ ಜಥರ್ವಾಡಿಯಿಂದ ಪಂಢರಪುರಕ್ಕೆ ಧಾರ್ಮಿಕ ನಡಿಗೆ (ದಿಂಡಿ) ನಲ್ಲಿದ್ದಾಗ ವೇಗವಾಗಿ ಬಂದ ಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಸೊಲ್ಲಾಪುರ ಎಸ್ಪಿ ಶಿರೀಶ್ ಸರ್ದೇಶಪಾಂಡೆ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 390 ಕಿಮೀ ದೂರದಲ್ಲಿರುವ ಸಂಗೋಲಾ ಪಟ್ಟಣದ ಬಳಿ ಸಂಜೆ 6.45 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

ಇನ್ನು ರಸ್ತೆ ಅಪಘಾತದ ಬಗ್ಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ತಕ್ಷಣ ಘೋಷಿಸಿದ್ದಾರೆ.

ಪಿಟಿಐ ವರದಿಗಳ ಪ್ರಕಾರ ಈ ಧಾರ್ಮಿಕ ನಡಿಗೆ ಯಾತ್ರಾರ್ಥಿಗಳ ತಂಡವು ಕಳೆದ ಮೂರು ದಿನಗಳ ಹಿಂದೆ ಕೊಲ್ಲಾಪುರದಿಂದ ಆರಂಭಿಸಿದ್ದು, ಇಂದು ಸಂಜೆ ಹೊತ್ತಿಗೆ ಸಂಗೋಲೆ ಪಟ್ಟಣ ತಲುಪಿದೆ. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:48 pm, Mon, 31 October 22