ರಾಷ್ಟ್ರ ರಾಜಧಾನಿ ದೆಹಲಿಯ ರಸ್ತೆಯೊಂದರಲ್ಲಿ ಕುದುರೆ ಗಾಡಿ ಓಟ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿ, 4 ಕುದುರೆಗಳನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ 2 ದ್ವಿಚಕ್ರ ವಾಹನಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಕುದುರೆಗಳನ್ನು ಎಂಸಿಡಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕಲಂ 289/268/188/34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಂದು ಮುಂಜಾನೆ ರಾಜ್‌ಘಾಟ್‌ನಿಂದ ದೆಹಲಿ ಗೇಟ್, ಸಿವಿಕ್ ಸೆಂಟರ್ ಕಡೆಗೆ ಜವಾಹರಲಾಲ್ ನೆಹರು ಮಾರ್ಗದಲ್ಲಿ ಕುದುರೆ-ಗಾಡಿ ರೇಸಿಂಗ್‌ನಲ್ಲಿ ತೊಡಗಿದ್ದ ಹತ್ತು ಜನರನ್ನು ಬಂಧಿಸಲಾಗಿದೆ. ಉತ್ತರ ದೆಹಲಿಯ ಪ್ರಮುಖ ಶಾಪಿಂಗ್ ಸೆಂಟರ್ ಕಮಲಾ ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಹೆಲ್ಮೆಟ್ ಇಲ್ಲದ ಇಬ್ಬರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಾ, ಕುದುರೆ ಗಾಡಿಯನ್ನು ವೇಗವಾಗಿ ಓಡಿಸುವಂತೆ ಪ್ರಚೋದನೆ ನೀಡುತ್ತಿರುವುದು ಕಂಡು ಬಂದಿದೆ.
ಮತ್ತಷ್ಟು ಓದಿ: Cheetah: ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿದ್ದ ಮತ್ತೊಂದು ಚೀತಾ ಸಾವು
ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಇಂತಹ ಸ್ಪರ್ಧೆಗಳನ್ನು ನಡೆಸುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ, ಅವರು ತಲುಪ ಬೇಕಾದ ಸ್ಥಳವನ್ನು ತಲುಪುವಲ್ಲಿ ವಿಳಂಬವಾಗುತ್ತದೆ. ಹಾಗೆಯೇ ಅನುಮತಿ ಇಲ್ಲದೆ ಹೀಗೆ ರಸ್ತೆಯಲ್ಲಿ ರೇಸ್ಗಳನ್ನು ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ