ಬಂದೂಕು ಹಿಡಿದ ವ್ಯಕ್ತಿಯೊಬ್ಬ ಏಕಾಏಕಿ ಪಶ್ಚಿಮ ಬಂಗಾಳದ ಶಾಲೆಯೊಂದಕ್ಕೆ ನುಗ್ಗಿ ಬಾಗಿಲು ಮುಚ್ಚಿ ಮಕ್ಕಳ ಹಣೆಗೆ ಗನ್ ಇಟ್ಟು, ಅವರನ್ನು ಒತ್ತೆಯಾಳಾಗಿರಿಸಿಕೊಳ್ಳಲು ಪ್ರಯತ್ನ ನಡೆಸಿರುವ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಮುಚ್ಚಯಾ ಆಂಚಲ್ ಚಂದ್ರ ಮೋಹನ್ ಪ್ರೌಢಶಾಲೆಯ ತರಗತಿಗೆ ಬಂದೂಕು ಹಿಡಿದು ವ್ಯಕ್ತಿಯೊಬ್ಬ ಪ್ರವೇಶಿಸಿದ್ದ, ವ್ಯಕ್ತಿ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಳ್ಳಲು ಪ್ರಯತ್ನಿಸಿದ್ದ, ಬಳಿಕ ಪೊಲೀಸರು ಮಕ್ಕಳನ್ನು ರಕ್ಷಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ, ಪೊಲೀಸ್ ತನಿಖೆ ನಡೆಯುತ್ತಿದೆ, ಸ್ಥಳೀಯರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ಬಂದೂಕು ಹಿಡಿದು ಮಕ್ಕಳು ಮತ್ತು ಶಿಕ್ಷಕರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಆರೋಪಿಯನ್ನು ದೇಬ್ ಬಲ್ಲಭ್ ಎಂದು ಗುರುತಿಸಲಾಗಿದೆ, ಆರೋಪಿಯಿಂದ ಬಂದೂಕು, ಎರಡು ಬಾಟಲಿ ಮದ್ಯ ಹಾಗೂ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ವಿದ್ಯಾರ್ಥಿಗಳನ್ನು ಕಾಪಾಡಿದ್ದು ಹೇಗೆ?
ನಿನ್ನೆ ಮಧ್ಯಾಹ್ನದ ಹೊತ್ತಿಗೆ 71 ವಿದ್ಯಾರ್ಥಿಗಳಿರುವ ತರಗತಿಯೊಂದಕ್ಕೆ ಮುಸುಕುಧಾರಿಯೊಬ್ಬ ನುಗ್ಗಿ, ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಳ್ಳಲು ಮುಮದಾಗಿದ್ದ. ಶಿಕ್ಷಕರು ಹಾಗೂ ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಕುಮಾರ್ ಯಾದವ್ ನೇತೃತ್ವದಲ್ಲಿ ಭಾರಿ ಪೊಲೀಸ್ ಪಡೆ ಶಾಲೆಯತ್ತ ಧಾವಿಸಿತು.
ಮತ್ತಷ್ಟು ಓದಿ: ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ
ಒಂದೊಮ್ಮೆ ಪೊಲೀಸರು ಕೊಠಡಿಯೊಳಗೆ ಬರಲು ಪ್ರಯತ್ನಿಸಿದರೆ ಗುಂಡು ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದ. ಹಾಗಾಗಿ ಈ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಆಗ ಡಿಎಸ್ಪಿ ಅಜರುದ್ದೀನ್ ಖಾನ್ ಅವರು ಪೊಲೀಸ್ ಸಮವಸ್ತ್ರವನ್ನು ತೆಗೆದು ಸಾಮಾನ್ಯ ಬಟ್ಟೆಯಲ್ಲಿ ಧರಿಸಿದರು.
#WATCH | Malda, WB | A gun-wielding man, Deb Ballabh, tried to hold hostage students in a classroom of Muchia Anchal Chandra Mohan High School. He was later overpowered & arrested by Police. No one was injured in the incident. A police probe is underway
(Note: Abusive language) pic.twitter.com/86OU8Cw8Np
— ANI (@ANI) April 26, 2023
ಅಜರುದ್ದೀನ್ ಟೀ ಶರ್ಟ್ ಮತ್ತು ಚಪ್ಪಲ್ ಧರಿಸಿ ವರದಿಗಾರನಂತೆ ತರಗತಿಗೆ ಪ್ರವೇಶಿಸಿದ್ದರು ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಅವರು ಬಲ್ಲವ್ಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದರು, ಮೊಬೈಲ್ನಲ್ಲಿ ಎಲ್ಲವೂ ರೆಕಾರ್ಡ್ ಆಗುತ್ತಿತ್ತು. ಸಂಭಾಷಣೆ ನಡೆಯುತ್ತಿದ್ದಾಗ ಮತ್ತೊಬ್ಬ ಪೊಲೀಸರ ಸಹಾಯದಿಂದ ಅವರಬಳಿ ಇದ್ದ ಬಂದೂಕ್ನ್ನು ವಶಪಡಿಸಿಕೊಂಡು ಬಂಧಿಸಿದರು.
ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದ ಪೊಲೀಸರ ಧೈರ್ಯವನ್ನು ಶ್ಲಾಘಿಸಿದ್ದಾರೆ.
ನನ್ನ ಮೊದಲ ಹಾಗೂ ಏಕೈಕ ಆದ್ಯತೆ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿಸುವುದಾಗಿತ್ತು, ಯಾವುದೇ ವಿದ್ಯಾರ್ಥಿಗೆ ಏನೇ ಆಗಿದ್ದರೂ ನನ್ನನ್ನು ನಾನು ಕ್ಷಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಜರುದ್ದೀನ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ