ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ

Taliban: ಅಖುಂಡಜಾದ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. "ಅವರು ಸ್ವಲ್ಪ ಸಮಯದಿಂದ ಕಾಣಿಸಿಕೊಂಡಿಲ್ಲ ಅಥವಾ ಅವರ ಬಗ್ಗೆ ಕೇಳಿಲ್ಲ. ಅವರು ಸತ್ತಿದ್ದಾರೆ ಎಂದು ಅನೇಕ ವದಂತಿಗಳಿವೆ" ಎಂದು ದಿ ಸ್ಪೆಕ್ಟೇಟರ್ ವರದಿ ಮಾಡಿದೆ

ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ
ಮುಲ್ಲಾ ಬರದಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 21, 2021 | 11:43 AM

ಕಾಬೂಲ್: ತಾಲಿಬಾನ್‌ನ ಅಧಿಕಾರಕ್ಕಾಗಿರುವ ಕಿತ್ತಾಟದಲ್ಲಿ ಉಪಪ್ರಧಾನಿ ಮುಲ್ಲಾ ಬರದಾರ್ (Mullah Baradar ) ಒತ್ತೆಯಾಳು ಆಗಿದ್ದು ಗುಂಪಿನ ಆಧ್ಯಾತ್ಮಿಕ ನಾಯಕ ಹೈಬತುಲ್ಲಾ ಅಖುಂಡಜಾದ (Haibatullah Akhundzada) ಸಾವಿಗೀಡಾಗಿದ್ದಾರೆ ಎಂದು ಬ್ರಿಟನ್ ಮೂಲದ ನಿಯತಕಾಲಿಕೆ ದಿ ಸ್ಪೆಕ್ಟೇಟರ್ ಸೋಮವಾರ ವರದಿ ಮಾಡಿದೆ. ಬರದಾರ್ ಬಣ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವಿನ ಸರ್ಕಾರ ರಚನೆಯ ಮಾತುಕತೆಯ ಸಂದರ್ಭದಲ್ಲಿ ಈ ಘರ್ಷಣೆ ನಡೆದಿದೆ  ಎಂದು ವರದಿ ಉಲ್ಲೇಖಿಸಿದೆ. ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮುಖ್ಯಸ್ಥರು ಹಕ್ಕಾನಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದಿದೆ. ಎಲ್ಲಾ ಪ್ರಮುಖ ಹುದ್ದೆಗಳು ಪಾಕಿಸ್ತಾನದ ನಿಷ್ಠಾವಂತರಿಗೆ, ಮುಖ್ಯವಾಗಿ ಹಕ್ಕಾನಿ ನೆಟ್‌ವರ್ಕ್‌ನವರಿಗೆ ನೀಡಲಾಗಿದೆ ಎಂದು ದಿ ಸ್ಪೆಕ್ಟೇಟರ್ ವರದಿ ಮಾಡಿದೆ.

ಸೆಪ್ಟೆಂಬರ್ ಆರಂಭದಲ್ಲಿ ನಡೆದ ಘರ್ಷಣೆಗಳು ಉಂಟಾಗಿದೆ ಎಂದು ದಿ ಸ್ಪೆಕ್ಟೇಟರ್ ಹೇಳಿದೆ. ಸಭೆಯಲ್ಲಿ ಹಕ್ಕಾನಿ ನೆಟ್ವರ್ಕ್ ನಾಯಕ ಖಲೀಲ್-ಉಲ್-ರೆಹಮಾನ್ ಹಕ್ಕಾನಿ ತನ್ನ ಕುರ್ಚಿಯಿಂದ ಎದ್ದು ಬರದಾರ್​​ಗೆ ಹೊಡೆದಿದ್ದಾರೆ ಎಂದು ದಿ ಸ್ಪೆಕ್ಟೇಟರ್ ವರದಿ ಹೇಳಿದೆ. ಬರದಾರ್ ತಾಲಿಬಾನ್ ಅಲ್ಲದ ನಾಯಕರು ಮತ್ತು ಅಲ್ಪಸಂಖ್ಯಾತ ಜನಾಂಗದವರನ್ನು ಒಳಗೊಂಡ ಸಚಿವಸಂಪುಟಕ್ಕೆ ಒತ್ತಾಯಿಸಿದ್ದು, ಇದು ಪ್ರಪಂಚದ ಇತರ ಭಾಗಗಳಿಗೆ ಹೆಚ್ಚು ಸ್ವೀಕಾರಾರ್ಹವಾಗಿದೆ.

ಘರ್ಷಣೆಯ ನಂತರ ಅವರು ಸ್ವಲ್ಪ ಸಮಯದವರೆಗೆ ಕಣ್ಮರೆಯಾದರು ಮತ್ತು ಕಂದಹಾರ್‌ನಲ್ಲಿ ಮತ್ತೆ ಕಾಣಿಸಿಕೊಂಡರು. ಅವರು ತಮ್ಮನ್ನು ಬೆಂಬಲಿಸುತ್ತಿರುವ ಬುಡಕಟ್ಟು ನಾಯಕರ ಸಭೆಯನ್ನು ನಡೆಸಿದರು. ಆದರೆ ತಾಲಿಬಾನ್ ನಿಯಂತ್ರಣದಲ್ಲಿರುವ ಸರ್ಕಾರಿ ಟಿವಿ ನೆಟ್‌ವರ್ಕ್‌ನಲ್ಲಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಲು ಒತ್ತಾಯಿಸಲಾಯಿತು. ಸಂದೇಶವು “ಒತ್ತೆಯಾಳು ವಿಡಿಯೊದಂತೆ ಕಾಣುತ್ತದೆ” ಎಂದು  ದಿ ಸ್ಪೆಕ್ಟೇಟರ್ ವರದಿ ಮಾಡಿದೆ.

ಅಖುಂಡಜಾದ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. “ಅವರು ಸ್ವಲ್ಪ ಸಮಯದಿಂದ ಕಾಣಿಸಿಕೊಂಡಿಲ್ಲ ಅಥವಾ ಅವರ ಬಗ್ಗೆ ಕೇಳಿಲ್ಲ. ಅವರು ಸತ್ತಿದ್ದಾರೆ ಎಂದು ಅನೇಕ ವದಂತಿಗಳಿವೆ” ಎಂದು ದಿ ಸ್ಪೆಕ್ಟೇಟರ್ ವರದಿ ಮಾಡಿದೆ. ಈ ಖಾಲಿತನವು ತಾಲಿಬಾನ್ ಬಣಗಳ ನಡುವಿನ ವಾದಗಳಿಗೆ ಅವಕಾಶ ಮಾಡಿಕೊಟ್ಟಿದೆ – ಇದು ಎರಡು ದಶಕಗಳ ಹಿಂದೆ ಅವರ ಹಿಂದಿನ ಆಡಳಿತದಲ್ಲಿ ಕಂಡುಬಂದಿಲ್ಲ ಎಂದು ವರದಿ ಹೇಳಿದೆ.

ತಾಲಿಬಾನ್ ಮತ್ತು ಹಕ್ಕಾನಿ ಗುಂಪುಗಳು ಸುಮಾರು 2016 ರಲ್ಲಿ ವಿಲೀನಗೊಂಡವು.  ದೋಹಾ ಮಾತುಕತೆಯಲ್ಲಿ ಭಾಗಿಯಾಗಿದ್ದ ಬರದಾರ್ ಮತ್ತುಇತರರು ತಾಲಿಬಾನ್‌ನ ಸಾಮಾನ್ಯ ಚಿತ್ರಣವನ್ನು ತೋರಿಸಲು ಪ್ರಯತ್ನಿಸುತ್ತಿದ್ದರು. ಆದರೆ ಹಕ್ಕಾನಿಗಳು ಆತ್ಮಹತ್ಯಾ ದಾಳಿಗಳನ್ನು ಶ್ಲಾಘಿಸಿದ್ದಾರೆ. ಅಫ್ಘಾನಿಸ್ತಾನದ ನಿರಾಶ್ರಿತರ ಮಂತ್ರಿ ಖಲೀಲ್ ಹಕ್ಕಾನಿ ವಿಶ್ವಸಂಸ್ಥೆಯ ನಿರ್ಬಂಧಗಳ ಪಟ್ಟಿಯಲ್ಲಿದ್ದಾರೆ ಮತ್ತು ಅವರ ಮಿಲಿಟರಿ ಕಾರ್ಯಾಚರಣೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.  ಹಕ್ಕಾನಿಗಳು ಪಾಕಿಸ್ತಾನದ ಭದ್ರತಾ ಸಾಧನದಲ್ಲಿ ಸಂಪರ್ಕ ಹೊಂದಿದ್ದು  ಇಸ್ಲಾಮಾಬಾದ್ ಸಮೀಪದ ದಾರುಲ್ ಉಲೂಮ್ ಹಕ್ಕಾನಿಯಾ ಮದರಸಾದಿಂದ ತಮ್ಮ ಹೆಸರನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಬೂಲ್ ನಗರದ ಮಹಿಳಾ ಉದ್ಯೋಗಿಗಳಿಗೆ ಮನೆಯಲ್ಲೇ ಇರಿ ಎಂದು ಆದೇಶಿಸಿದ ತಾಲಿಬಾನ್

(Power struggle within the Taliban Mullah Baradar held hostage Haibatullah Akhundzada dead says UK-based magazine)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ