2014ರಿಂದ 2021ರವರೆಗೆ ಯಾವ ಪಕ್ಷದಿಂದ ಎಷ್ಟು ಜನಪ್ರತಿನಿಧಿಗಳು ಪಕ್ಷಾಂತರ ಮಾಡಿದ್ದಾರೆ?
ನ್ಯಾಶನಲ್ ಎಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಶನ್ ಫಾರ್ ಡೆಮಾಕ್ರಸಿ ಎಂಬ ಸಂಸ್ಥೆಯೊಂದು 2014ರ ನಂತರ ಪಕ್ಷಾಂತರ ಮಾಡಿದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಲೆಕ್ಕ ಹಾಕಿದೆ.
2014ರ ನಂತರ ಭಾರತೀಯ ರಾಜಕಾರಣದ ದಿಕ್ಕೇ ಬದಲಾಗಿದೆ. ಭಾರತೀಯ ಜನತಾ ಪಾರ್ಟಿ ಅಧಿಕಾರದ ಒಂದೊಂದೇ ಮೆಟ್ಟಿಲು ಏರಿದಂತೆ ವೈಭವದ ಇತಿಹಾಸ ಹೊಂದಿದ್ದ ಕಾಂಗ್ರೆಸ್ಗೆ ದುರ್ದೆಸೆಯ ದಿನಗಳು ಆರಂಭವಾದವು. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ನ್ಯಾಶನಲ್ ಎಲೆಕ್ಷನ್ ವಾಚ್ ಆ್ಯಂಡ್ ಅಸೋಸಿಯೇಶನ್ ಫಾರ್ ಡೆಮಾಕ್ರಸಿ ಎಂಬ ಸಂಸ್ಥೆಯೊಂದು 2014ರ ನಂತರ ಪಕ್ಷಾಂತರ ಮಾಡಿದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಲೆಕ್ಕ ಹಾಕಿದೆ. ಈ ಲೆಕ್ಕದ ಪ್ರಕಾರ ಕಾಂಗ್ರೆಸ್ನ 3ರಲ್ಲಿ ಓರ್ವ ಶಾಸಕ ಅಥವಾ ಸಂಸದ ಬೇರೊಂದು ಪಕ್ಷದಿಂದ ಸ್ಪರ್ಧಿಸಲು ಪಕ್ಷ ತ್ಯಜಿಸಿದ್ದಾರೆ. ಜತೆಗೆ 5ರಲ್ಲಿ ಓರ್ವ ಸ್ಪರ್ಧಿಗಳು ಕಾಂಗ್ರೆಸ್ ತ್ಯಜಿಸಿ ಟಿಕೆಟ್ಗಾಗಿ ಬೇರೆ ಪಕ್ಷಕ್ಕೆ ಹಾರಿದ್ದಾರೆ. 2014ರಿಂದ 2021ರವರೆಗೆ ನಡೆದ ಚುನಾವಣೆಗಳ ಮತ್ತು ಉಪ ಚುನಾವಣೆಗಳಲ್ಲಿ ಪಕ್ಷಾಂತರ ಮಾಡಿದ ಒಟ್ಟು 1,133 ಸ್ಪರ್ಧಿಗಳ ಮತ್ತು 500 ಶಾಸಕರ/ಸಂಸದರ ಅಫಿಡವಿಟ್ಗಳನ್ನು ಈ ವರದಿ ಒಳಗೊಂಡಿದೆ. ಇವರ ಪೈಕಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವ ಕಾಂಗ್ರೆಸ್ನ 222 ಆಕಾಂಕ್ಷಿಗಳು ಪಕ್ಷಾಂತರ ಮಾಡಿದ್ದಾರೆ. ಕಾಂಗ್ರೆಸ್ನ 177 ಶಾಸಕರು/ಸಂಸದರು ಪಕ್ಷ ತೊರೆದಿದ್ದಾರೆ. ಬಿಜೆಪಿಯನ್ನು ತೊರೆದ ಅಭ್ಯರ್ಥಿಗಳ ಮತ್ತು ಜನಪ್ರತಿನಿಧಿಗಳ ಅಂಕಿಅಂಶವನ್ನು ಅವಲೋಕಿಸುವುದಾದರೆ, ಒಟ್ಟು 33 ಶಾಸಕರು/ಸಂಸದರು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಅಲ್ಲದೇ 111 ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕಮಲ ಪಾಳಯದಿಂದ ಹೊರಗೆ ಜಿಗಿದಿದ್ದಾರೆ.
ಈ ಪಟ್ಟಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೇ ಇಲ್ಲ. ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ, ಜೆಡಿಯು, ಎನ್ಸಿಪಿ ಮುಂತಾದ ಪಕ್ಷಗಳಿಂದಲೂ ಹಲವು ಜನಪ್ರತಿನಿಧಿಗಳು ಪಕ್ಷಾಂತರ ಮಾಡಿದ್ದಾರೆ.
ಇದನ್ನೂ ಓದಿ:
Exclusive: ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ವರು ವಲಸಿಗರು; ಬಿಜೆಪಿ ಲೆಕ್ಕಾಚಾರ ಬದಲಾಯಿತೇಕೆ?
(How many candidates left congress from 2014)
Published On - 3:35 pm, Fri, 10 September 21