ಪತ್ನಿ ಆತ್ಮಹತ್ಯೆ ಸುದ್ದಿಕೇಳಿ ಕ್ರಿಮಿನಾಶಕ ಸೇವಿಸಿದ ಪತಿ

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಪತ್ನಿ ಆತ್ಮಹತ್ಯೆ ಸುದ್ದಿಕೇಳಿ ಕ್ರಿಮಿನಾಶಕ ಸೇವಿಸಿದ ಪತಿ
ಪ್ರಾತಿನಿಧಿಕ ಚಿತ್ರ
Edited By:

Updated on: Dec 20, 2020 | 2:24 PM

ಹೈದರಾಬಾದ್: ಪತ್ನಿ ಆತ್ಮಹತ್ಯೆ ಮಾಹಿತಿ ಕೇಳಿ ಪತಿ ಕ್ರಿಮಿನಾಶಕ ಸೇವಿಸಿದ ಘಟನೆ ಕರ್ನೂಲು ಜಿಲ್ಲೆಯ ಕೋವಲಕುಂಟ್ಲ ಮಂಡಲದ ರೇವನೂರಿನಲ್ಲಿ ನಡೆದಿದೆ.

ನವ ವಿವಾಹಿತೆ ರಾಮಲಕ್ಷ್ಮಿ‌ ನೇಣು ಹಾಕಿಕೊಂಡು ಜೀವ ಕಳೆದುಕೊಂಡಿದ್ದು, ಈ ವಿಷಯ ತಿಳಿಯುತ್ತಿದಂತೆ ಗಂಡ ವೆಂಕಟರಾಮುಡು ಅಘಾತಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತಿಯ ಪರಿಸ್ಥಿತಿ ಗಂಭೀರವಾದ್ದರಿಂದ ನಂದ್ಯಾಲ‌ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಕೋವಲಕುಂಟ್ಲ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಸಾವಿನಲ್ಲೂ ಒಂದಾದ ದಂಪತಿ, ಪತಿಯ ಜೊತೆ ಜಗಳವಾಡಿದ್ದ ಪತ್ನಿಯೂ ಆತ್ಮಹತ್ಯೆ