ಗಂಡನನ್ನು ಒಂಟಿಯಾಗಿ ಬಿಟ್ಟು ಹೋದ ಹೆಂಡತಿ… ಗಂಡ ಮಾಡಿದ್ದೇನು ನೋಡಿ?

|

Updated on: Sep 27, 2024 | 1:52 PM

Statues for Wife: ಮೇದಾರ ಬಸ್ತಿ ನಿವಾಸಿ ವೇಂಕಟೇಶ್ವರಲು ಅವರ ಪತ್ನಿ ಅರುಣಾ ಅವರು ಕೊರೋನಾದಿಂದ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಜೋಡಿ ಮೂರ್ತಿಗಳನ್ನು ಜೋಡಿಸಲಾಗಿದೆ ಎಂದು ಅರುಣಾ ಪತಿ ತಿಳಿಸಿದ್ದಾರೆ. ನಾವು ಅವಳನ್ನು ವಾಪಸ್​​ ಮನೆಗೆ ಕರೆತರುವುದಕ್ಕೆ ಆಗದಿದ್ದರೂ ನಾನು ಅವಳನ್ನು ನೋಡಿದಾಗಲೆಲ್ಲಾ ಅವಳ ಸಿಹಿ ನೆನಪಿನಲ್ಲಿ ಜೀವನ ಮುಗಿಸುವೆ ಎಂದು ತೇವಗೊಂಡ ತಮ್ಮ ಕಣ್ಣಾಲಿಗಳನ್ನು ಒರೆಸಿಕೊಳ್ಲುತ್ತಾ ವೇಂಕಟೇಶ್ವರಲು ಹೇಳಿದರು.

ಗಂಡನನ್ನು ಒಂಟಿಯಾಗಿ ಬಿಟ್ಟು ಹೋದ ಹೆಂಡತಿ... ಗಂಡ ಮಾಡಿದ್ದೇನು ನೋಡಿ?
ಗಂಡನನ್ನು ಒಂಟಿಯಾಗಿ ಬಿಟ್ಟು ಹೋದ ಹೆಂಡತಿ... ಗಂಡ ಮಾಡಿದ್ದೇನು ನೋಡಿ?
Follow us on

ಇಷ್ಟಪಟ್ಟು ಮನಸಾರೆ ನಿರ್ಮಿಸಲಾದ ಕಟ್ಟಡ. ಅಷ್ಟರಲ್ಲಿ ಥಟ್ಟನೆ ಆ ದೇವರಿಗೆ ಏನನ್ನಿಸಿತೋ ಆ ಮನೆಯೊಡತಿಯನ್ನು ತನ್ನ ಮಡಿಲಿಗೆ ಸೇರಿಸಿಕೊಂಡುಬಿಟ್ಟ. 2021 ರ ಕೊರೋನಾ ಸಮಯದಲ್ಲಿ, ಅರುಣಾ ಎಂಬ ಮಹಿಳೆ ಮಾರಕ ಸಾಂಕ್ರಾಮಿಕ ರೋಗದಿಂದ ಬಳಲತೊಡಗಿದರು. ಕೊರೋನಾ ಕಾಯಿಲೆಯಿಂದ ಬಹಳ ದಿನ ಬಳಲಿದರು. ಎಷ್ಟೇ ಪ್ರಯತ್ನಪಟ್ಟರೂ, ಎಷ್ಟೇ ಖರ್ಚು ಮಾಡಿದರೂ ಜೀವ ಉಳಿಸಿಕೊಳ್ಳಲಾಗಲಿಲ್ಲ. ಇತ್ತ ಪತಿ ಕೊಂಡ್ಲ ವೇಂಕಟೇಶ್ವರಲುಗೆ ತನ್ನ ಮಡದಿಯ ಸಾವನ್ನು ಅರಗಿಸಿಕೊಳ್ಳಲಾಗಲಿಲ್ಲ. ಆದರೆ ಅವಳನ್ನು ಸದಾ ತನ್ನ ಕಣ್ಣ ಮುಂದೆಯೇ ನೋಡಬೇಕೆಂದು ಬಯಸಿದನು. ಪತಿ ವೇಂಕಟೇಶ್ವರಲು ಕೊರೋನಾಗೆ ಬಲಿಯಾದ ತನ್ನ ಹೆಂಡತಿಯ ಮೂರ್ತಿ ಮಾಡಿಸಿ ಅದನ್ನು ತಮ್ಮ ಮನೆಯ ಅಂಗಳದಲ್ಲಿ ಹಾಕಿಸಿ, ತನ್ನ ಪತ್ನಿಯ ನೆನಪು ಸದಾ ಜೀವಂತವಾಗಿರುವಂತೆ ಮಾಡಿದರು. ಅವರೀಗ ಯಾವಾಗಲೂ ಮನೆಯ ಮುಂದಿರುವ ಮಡದಿಯ ಪುಟ್ಟ ಮೂರ್ತಿಗಳನ್ನು ನೋಡಿಕೊಂಡು ತುಸು ನೆಮ್ರಮದಿಯ ಜೀವನ ನಡೆಸುತ್ತಿದ್ದಾರೆ.

ವೇಂಕಟೇಶ್ವರಲು ಅವರ ಹೆಂಡತಿ ದೈಹಿಕವಾಗಿ ದೂರವಾಗಿದ್ದಾಳೆ. ಆದರೆ ಆಕೆಯ ಪ್ರತಿರೂಪವನ್ನು ಪತಿ ನಿರಂತರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ. ಆ ಐಡಿಯಾ ಅವರಿಗೆ ಬಂದಿದ್ದೇ ತಡ… ಸುಮಾರು ಮೂರು ಅಡಿ ಎತ್ತರ ಹಾಗೂ ಇಪ್ಪತ್ತು ಅಡಿ ಅಗಲದ ವಿಗ್ರಹಗಳನ್ನು 1.5 ಲಕ್ಷ ರೂ. ಖರ್ಚು ಮಾಡಿ, ಕೋಲ್ಕತ್ತಾದಿಂದ ತರಿಸಿಬಿಟ್ಟರು. ಮೂರ್ತಿಗಳನ್ನು ತಯಾರಿಸಲು ಎರಡು ತಿಂಗಳು ಬೇಕಾಯಿತು ಎಂದು ಅವರು ತಿಳಿಸಿದರು. ಕೆಲ ದಿನಗಳ ಹಿಂದೆ ಅವರ ನಿವಾಸದ ಮುಖ್ಯ ದ್ವಾರದ ಎರಡೂ ಬದಿಯ ಕಂಬಗಳಲ್ಲಿ ಅದನ್ನು ಪ್ರತಿಷ್ಠಾಪಿಸಲಾಗಿದೆ. ಅದಕ್ಕೂ ಕೆಲವು ದಿನಗಳ ಹಿಂದೆ, ಮಹಡಿಯಲ್ಲಿ ಮಡದಿಯ ಸುಂದರವಾದ ಚಿತ್ರವನ್ನು ಬಿಡಿಸಿದ್ದಾರೆ. ಅದಕ್ಕೆಲ್ಲಾ ಈಗ ಪ್ರತಿದಿನ ಹೂವುಗಳಿಂದ ಅಲಂಕರಿಸಲಾಗುತ್ತಿದೆ.

ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯ ಕೊತ್ತಗೂಡೆಂ ಮೇದಾರ ಬಸ್ತಿ ನಿವಾಸಿ ಕೊಂಡ್ಲ ವೇಂಕಟೇಶ್ವರಲು ಅವರ ಪತ್ನಿ, 50 ವರ್ಷದ ಅರುಣಾ ಅವರು 2021ರಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಈ ಜೋಡಿ ಮೂರ್ತಿಗಳನ್ನು ಜೋಡಿಸಲಾಗಿದೆ ಎಂದು ಅರುಣಾ ಅವರ ಪತಿ ವೇಂಕಟೇಶ್ವರಲು ತಿಳಿಸಿದ್ದಾರೆ. ನಾವು ಅವಳನ್ನು ವಾಪಸ್​​ ಮನೆಗೆ ಕರೆತರುವುದಕ್ಕೆ ಆಗದಿದ್ದರೂ ನಾನು ಅವಳನ್ನು ನೋಡಿದಾಗಲೆಲ್ಲಾ ಅವಳ ಸಿಹಿ ನೆನಪುಗಳ ಮಹಾಪೂರ ಹರಿದುಬರುತ್ತದೆ. ಅದೇ ಸಿಹಿ ನೆನಪಿನಲ್ಲಿ ಜೀವನ ಮುಗಿಸುವೆ ಎಂದು ತೇವಗೊಂಡ ತಮ್ಮ ಕಣ್ಣಾಲಿಗಳನ್ನು ಒರೆಸಿಕೊಳ್ಲುತ್ತಾ ವೇಂಕಟೇಶ್ವರಲು ಹೇಳಿದರು.