ಹೈದರಾಬಾದ್: ಹೈದರಾಬಾದ್‌ನ (Hyderabad) ಶಾಹಿನ್ಯಾತ್‌ಗುಂಜ್‌ನಲ್ಲಿ ಒಂದೇ ಗೋತ್ರಕ್ಕೆ ಸೇರಿದ ವಧು- ವರ ಮದುವೆಯಾಗಿದ್ದು ಈ ದಂಪತಿಗೆ ಕುಟುಂಬದವರು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಪೊಲೀಸ್ ರಕ್ಷಣೆ ಕೋರಿದ್ದಾರೆ. ಈ ದಂಪತಿ ತಮ್ಮ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕಾಗಿ ಬಹಿಷ್ಕಾರ (excommunicated) ಎದುರಿಸುತ್ತಿದ್ದಾರೆ. ಜುಲೈ 2020 ರಲ್ಲಿ ಆರ್ಯ ಸಮಾಜ ದೇವಸ್ಥಾನದಲ್ಲಿ(Arya Samaj temple) ಇವರ ವಿವಾಹ ನಡೆದಿತ್ತು. 20ರ ಹರೆಯದ ಈ ದಂಪತಿ ಒಂದೇ ಜಾತಿ ಮತ್ತು ಒಂದೇ ಗೋತ್ರಕ್ಕೆ ಸೇರಿದವರಾಗಿದ್ದಾರೆ. ಒಂದೇ ಗೋತ್ರಕ್ಕೆ ಸೇರಿದವರಾಗಿರುವ ಕಾರಣ ಹುಡುಗಿಯ ಕುಟುಂಬ ಈ ವಿವಾಹವನ್ನು ಒಪ್ಪಲಿಲ್ಲ. ಇದಾದ ನಂತರ ಅವರ ಸಮುದಾಯವನ್ನು ಬಹಿಷ್ಕರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತನ್ನ ಕುಟುಂಬ ಮತ್ತು ಇತರ ಕುಟುಂಬದ ಸದಸ್ಯರು ಅಶ್ಲೀಲ ಪೋಸ್ಟ್ ಗಳನ್ನು ಹಾಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ನಮ್ಮನ್ನು ನಮ್ಮ ಕುಟುಂಬವೇ ಕೊಲೆ ಮಾಡುವ ಬೆದರಿಕೆಯೊಡ್ಡುತ್ತಿದೆ ಎಂದುತಿಳಿದ ಕೂಡಲೇ ನಾವು ಕಾನೂನಿನ ಮೊರೆ ಹೋಗಲು ಪೊಲೀಸರ ಬಳಿ ಬಂದೆವು ಎಂದು ಮಹಿಳೆ ಹೇಳಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. “ನಾವು ಸಮುದಾಯದ ಸದಸ್ಯರು ಮತ್ತು ಕುಟುಂಬದವರನ್ನು ಕೌನ್ಸೆಲಿಂಗ್‌ಗೆ ಕರೆದಿದ್ದೇವೆ. ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ” ಎಂದು ಅಫ್ಜಲ್‌ಗುಂಜ್ ಇನ್ಸ್‌ಪೆಕ್ಟರ್ ರವೀಂದರ್ ರೆಡ್ಡಿ ಉಲ್ಲೇಖಿಸಿದ್ದಾರೆ.
ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಮರ್ಯಾದಾ ಹತ್ಯೆಯಲ್ಲಿ 21 ವರ್ಷದ ಯುವಕ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ ಚಾಕುವಿನಿಂದ ಇರಿದು ಕೊಲ್ಲಲಾಯಿತು. ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:04 pm, Thu, 16 June 22