ಹೈದರಾಬಾದ್ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಚುರುಕಿನ ಮತದಾನ

|

Updated on: Dec 01, 2020 | 12:00 PM

ನಾಲ್ಕು ಜಿಲ್ಲೆಗಳ 150 ವಿಭಾಗಗಳಿಂದ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಒಟ್ಟಾರೆ 52,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹೈದರಾಬಾದ್ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಚುರುಕಿನ ಮತದಾನ
ಮತಗಟ್ಟೆಯೊಂದರ ಬಳಿ ಪೊಲೀಸ್​ ಸಿಬ್ಬಂದಿ..
Follow us on

ಹೈದರಾಬಾದ್: ಗ್ರೇಟರ್​ ಹೈದರಾಬಾದ್ ಮುನ್ಸಿಪಲ್​ ಕಾರ್ಪೋರೇಶನ್ (GHMC) ಚುನಾವಣೆ ಇಂದು (ಡಿ.1) ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ನಾಲ್ಕು ಜಿಲ್ಲೆಗಳ 150 ವಿಭಾಗಗಳಿಂದ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಒಟ್ಟಾರೆ 52,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 48,000 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಂದಿನ ಚುನಾವಣೆಯ ವೈಶಿಷ್ಟ್ಯವೆಂದರೆ ಎಲ್ಲಿಯೂ ಇವಿಎಂ ಬಳಸುತ್ತಿಲ್ಲ. ಬದಲಿಗೆ ಹಳೇ ಕಾಲದ ಮತಪತ್ರದ ಮೂಲಕ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯ ವೇಳೆಗೆ ಶೇ 3.96ರಷ್ಟು  ಮತದಾನ ಆಗಿತ್ತು. ಹಿರಿಯ ನಾಗರಿಕರೂ ಆಗಮಿಸಿ ಮತ ಚಲಾಯಿಸುತ್ತಿರುವುದು ವಿಶೇಷವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಹಾಗೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ತೆಲಂಗಾಣದ ಟಿಆರ್​ಎಸ್​ ಮುಖಂಡ, ಸಚಿವ ಕೆ.ಟಿ.ರಾಮರಾವ್, ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಜಿ.ಕಿಶನ್​ ರೆಡ್ಡ ​ಇತರರು ಈಗಾಗಲೇ ಮತ ಚಲಾಯಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಅಂಜನಿ ಕುಮಾರ್​ ಮಾತನಾಡಿ, ಮತದಾನ ನಡೆಯುತ್ತಿರುವ ಎಲ್ಲ ಪ್ರದೇಶಗಳಲ್ಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ಪಡೆಗಳ ಕಾವಲು ಇದೆ. ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಕಾವಲು ನಿಯೋಜಿಸಲಾಗಿದೆ. ಹಾಗೇ ತುರ್ತು ತಂಡವೂ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.

 

ಇದನ್ನೂ ಓದಿ: GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಆರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ

Published On - 11:52 am, Tue, 1 December 20