Video: ನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಹೊಡೆದು, ತುಳಿದು ಕೊಂದ ಶಾಲಾ ಸಿಬ್ಬಂದಿ

ತಾಯಿಯ ಮೇಲಿನ ದ್ವೇಷಕ್ಕೆ ಮುದ್ದು ಮಗುವನ್ನು ಶಾಲಾ ಸಿಬ್ಬಂದಿ ಕೊಲೆ ಮಾಡಿರುವ ಅಮಾನವೀಯ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲ ನಡೆಸಿದ್ದಾರೆ. ಆಕೆಯ ಮೇಲೆ ಕಾಲಿನಿಂದ ತುಳಿದಿದ್ದಾಳೆ.ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ನೆಲಕ್ಕೆ ತಳ್ಳಿ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಆರೋಪಿಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.

Video: ನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಹೊಡೆದು, ತುಳಿದು ಕೊಂದ ಶಾಲಾ ಸಿಬ್ಬಂದಿ
ವಿದ್ಯಾರ್ಥಿ

Updated on: Dec 01, 2025 | 9:56 AM

ಹೈದರಾಬಾದ್, ಡಿಸೆಂಬರ್ 01: ಶಾಲಾ ಮಹಿಳಾ ಸಹಾಯಕ ಸಿಬ್ಬಂದಿಯೊಬ್ಬರು 4 ವರ್ಷದ ನರ್ಸರಿ ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಹೊಡೆದು, ತುಳಿದು ಕೊಲೆ(Murder) ಮಾಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ತೀವ್ರ ಆತಂಕವನ್ನು ಹುಟ್ಟುಹಾಕಿದೆ. ಸಿಬ್ಬಂದಿಯೊಬ್ಬರು ಮಗುವನ್ನು ಕ್ರೂರವಾಗಿ ಥಳಿಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಶನಿವಾರ ಮಗುವನ್ನು ಆರೋಪಿ ಶೌಚಾಲಯಕ್ಕೆ ಕರೆದೊಯ್ದಾಗ ಈ ಘಟನೆ ನಡೆದಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲ ನಡೆಸಿದ್ದಾರೆ. ಆಕೆಯ ಮೇಲೆ ಕಾಲಿನಿಂದ ತುಳಿದಿದ್ದಾಳೆ.ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ನೆಲಕ್ಕೆ ತಳ್ಳಿ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಆರೋಪಿಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.

ಮಗುವಿಗೆ ಥಳಿಸುತ್ತಿರುವ ವಿಡಿಯೋ

ಶಾಲಾ ಸಮಯದ ನಂತರ ಅದೇ ಶಾಲೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಮಗಳು ಶಾಲೆಯ ಆವರಣದೊಳಗೆ ಇದ್ದಳು.

ಮತ್ತಷ್ಟು ಓದಿ: ‘ಅಪ್ಪ ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ’: 8 ಪುಟದ ಡೆತ್‌ನೋಟ್​ ಬರೆದಿಟ್ಟು ಮಗಳು ಆತ್ಮಹತ್ಯೆಗೆ ಶರಣು

ಜೀಡಿಮೆಟ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ, ಮಗುವಿನ ತಾಯಿ ಹಾಗೂಈ ಸಿಬ್ಬಂದಿ ನಡುವೆ ದ್ವೇಷ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬಾಲಕಿಯ ತಾಯಿ ತನ್ನ ಕೆಲಸವನ್ನು ಕಸಿದುಕೊಳ್ಳಬಹುದು ಎನ್ನುವ ಭಯ ಆಕೆಗೆ ಇರಬಹುದು ಎನ್ನಲಾಗಿದೆ. ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬೇರೆ ಯಾವುದೇ ಪೋಷಕರು ಇದೇ ರೀತಿಯ ಹಲ್ಲೆಗಳನ್ನು ವರದಿ ಮಾಡಿಲ್ಲ ಮತ್ತು ಇದು ಒಂದು ಪ್ರತ್ಯೇಕ ಘಟನೆಯಂತೆ ಕಾಣುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಮತ್ತೊಂದು ಘಟನೆ

ನಾಲ್ಕು ನಿಮಿಷಗಳಲ್ಲಿ 52 ಬಾರಿ ಕ್ಷಮೆ ಕೇಳಿ ಬಳಿಕ ಶಾಲಾ ಕಟ್ಟಡದಿಂದ ಜಿಗಿದ 8ನೇ ತರಗತಿ ಬಾಲಕ
ಎಂಟನೇ ತರಗತಿ ಬಾಲಕನೊಬ್ಬ ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆ(Suicide)ಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ. ಆತ ಹಾರುವ ಮೊದಲು ನಾಲ್ಕು ನಿಮಿಷಗಳಲ್ಲಿ 52 ಬಾರಿ ಕ್ಷಮೆ ಕೇಳಿದ್ದ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಶಾಲೆಯ ಆಡಳಿತ ಮಂಡಳಿ ಹೇಳಿರುವ ಪ್ರಕಾರ, ವಿದ್ಯಾರ್ಥಿ ಗುರುವಾರ ಮೊಬೈಲ್​ ಅನ್ನು ಶಾಲೆಗೆ ತಂದಿದ್ದ, ಅಷ್ಟೇ ಅಲ್ಲದೆ ತರಗತಿಯ ವಿಡಿಯೋವನ್ನು ರೆಕಾರ್ಡ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ.

ಶಾಲಾ ಆಡಳಿತ ಮಂಡಳಿಯು ವೀಡಿಯೊವನ್ನು ನೋಡಿ ಶುಕ್ರವಾರ ಅವನ ಪೋಷಕರಿಗೆ ಕರೆ ಮಾಡಿ ಶಾಲಾ ನಿಯಮಗಳ ಉಲ್ಲಂಘನೆಯ ಬಗ್ಗೆ ಮಾತನಾಡಿತ್ತು. ಈಗ ತನಿಖೆಯ ಭಾಗವಾಗಿ ವಿದ್ಯಾರ್ಥಿ ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.ಸುಮಾರು ನಾಲ್ಕು ನಿಮಿಷಗಳ ಕಾಲ ತನ್ನ ತಪ್ಪಿಗೆ ಪದೇ ಪದೇ ಕ್ಷಮೆಯಾಚಿಸುತ್ತಾ, ಭಯ ಮತ್ತು ಹತಾಶೆಯಿಂದ 52 ಬಾರಿ ಕ್ಷಮಿಸಿ ಎಂದು ಹೇಳಿದ್ದ.

ಪ್ರಾಂಶುಪಾಲರು ನನ್ನ ಆಸೆ, ಆಕಾಂಕ್ಷೆಗಳನ್ನು ಚಿವುಟುವುದಾಗಿ ಜತೆಗೆ ಅವನನ್ನು ಶಾಲೆಯಿಂದ ಅಮಾನತುಗೊಳಿಸುವುದಷ್ಟೇ ಅಲ್ಲದೆ, ಆತ ಪಡೆದಿರುವ ಪದಕಗಳನ್ನು ಕೂಡ ಹಿಂದಕ್ಕೆ ಪಡೆಯುತ್ತೇವೆ ಎಂದು ಬೆದರಿಸಿದ ಪರಿಣಾಮ ಈ ತಪ್ಪಿನ ಹೆಜ್ಜೆಯನ್ನಿಟ್ಟಿದ್ದಾನೆ. ಆತ ಸ್ಕೇಟಿಂಗ್​ ಅಲ್ಲಿ ತುಂಬಾ ಹೆಸರು ಮಾಡಿದ್ದ, ಎರಡ ಬಾರಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ್ದ ಬಾಲಕ ಪ್ರಾಂಶುಪಾಲರ ಮಾತು ಕೇಳಿ ಕುಸಿದುಬಿದ್ದಿದ್ದ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ