‘ಅಪ್ಪ ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ’: 8 ಪುಟದ ಡೆತ್‌ನೋಟ್ ಬರೆದಿಟ್ಟು ಮಗಳು ಆತ್ಮಹತ್ಯೆಗೆ ಶರಣು
ಹಾಸನ ಮೂಲದ ವಿದ್ಯಾರ್ಥಿನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಪಿಜಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಇದು ಕುಟುಂಬದವರಿಗೆ ಆಘಾತ ತರಿಸಿದೆ. ಸಾವಿಗೂ ಮುನ್ನ 8 ಪುಟದ ಡೆತ್‌ನೋಟ್ ಬರೆದಿದ್ದು, ತಂದೆ ಬಗೆಗೆ ಬರೆದ ಸಾಲುಗಳು ಮನಕಲಕುವಂತಿವೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ, ನವೆಂಬರ್ 30: ಆ ಪ್ರತಿಭಾವಂತ ವಿದ್ಯಾರ್ಥಿನಿ (Student), ನೂರಾರು ಕನಸುಗಳನ್ನ ಕಟ್ಟಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಲು ಹಾಸನದಿಂದ ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ವ್ಯಾಸಾಂಗ ಮಾಡುತ್ತಿದ್ದು, ಶನಿವಾರ ಮಧ್ಯಾಹ್ನ ಯಾರೂ ಇಲ್ಲದ ವೇಳೆ ಪಿಜಿಯಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ತಂದೆಗೆ 8 ಪುಟದ ಭಾವನಾತ್ಮಕ ಡೆತ್‌ನೋಟ್ ಬರೆದಿದ್ದು, ಪತ್ರದ ಸಾಲುಗಳು ಮನಕಲಕುವಂತಿವೆ.
ಪಿಜಿಯಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು ಹೊರವಲಯ ಹೆಸರುಘಟ್ಟ ರಸ್ತೆಯ ಆಚಾರ್ಯ ಕಾಲೇಜು ವಿಧ್ಯಾರ್ಥಿನಿ ವತ್ಸಲಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹಾಸನದ ಹೆಸರಘಟ್ಟದ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನಲ್ಲಿ ಓದುತ್ತಿದ್ದಳು.
ಇದನ್ನೂ ಓದಿ: ಪತಿ ಮನೆಯವರ ಕಿರುಕುಳಕ್ಕೆ ನವವಿವಾಹಿತೆ ಆತ್ಮಹತ್ಯೆ: ಅಳಿಯನ ನಿಜಬಣ್ಣ ಕಳಚಿದ ಸಂಬಂಧಿ
ಪೆಟಲ್ಸ್ ಗರ್ಲ್ಸ್ ಪಿಜಿಯಲ್ಲಿ ವಾಸವಿದ್ದಳು. ಆದರೆ, ಪಿಜಿಯ 3ನೇ ಮಹಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಸಾವಿಗೂ ಮುನ್ನ 8 ಪುಟದ ಡೆತ್‌ನೋಟ್ ಬರೆದಿದ್ದು, ತಂದೆ ಬಗೆಗೆ ಬರೆದ ಸಾಲುಗಳು ಮನಕಲಕುವಂತಿವೆ.
ಅಪ್ಪ ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ
ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಕೇಳಿದ್ದನ್ನೆಲ್ಲ ಕೊಡಿಸಿದ್ದೀರಿ. ನಿಮ್ಮ ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ. ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯವೂ ನನಗಿಲ್ಲ. ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಇಷ್ಟವಿಲ್ಲ. ನಾನು ಸಾವಿಗೆ ಶರಣಾಗುತ್ತಿದ್ದೇನೆ. ನಿಮ್ಮ ಅಕ್ಕರೆಯ ಮಗಳು ವತ್ಸಲಾ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್ಗೆ ನಾಲೆಗೆ ಹಾರಿದ ಮಹಿಳೆ
ಹಾಸನ ಮೂಲದ ವತ್ಸಲಾ ಬೆಂಗಳೂರಿಗೆ ಓದಲೆಂದು ಬಂದಿದ್ದಳು. ಆದರೆ ಏನಾಯ್ತೋ ಗೊತ್ತಿಲ್ಲ. ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದು ಕುಟುಂಬದವರಿಗೆ ಆಘಾತ ತರಿಸಿದೆ. ಸೋಲದೇವನಹಳ್ಳಿ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿ: ಮಂಜುನಾಥ್ ಟಿವಿ9ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




