ಹೈದರಾಬಾದ್: ನೀರಿನ ಟ್ಯಾಂಕ್​ನಲ್ಲಿ ಕೈಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ

ಮಂಗಳವಾರದಿಂದ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕಿಯ ಶವ ಮನೆಯ ತಾರಸಿಯಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿದೆ. ಆಕೆಯ ಕೈಗಳು ಹಿಂದಕ್ಕೆ ಹಗ್ಗದಿಂದ ಕಟ್ಟಿದ್ದವು. ಈ ಘಟನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸರು ಮಧ್ಯ ಪ್ರವೇಶಿಸಿ ತನಿಖೆ ಆರಂಭಿಸಿದ್ದಾರೆ. ಹುಮೇನಿ ಸುಮಯ್ಯ ಎಂಬ ಬಾಲಕಿ ತನ್ನ ಹೆತ್ತವರಾದ ಮೊಹಮ್ಮದ್ ಅಜೀಂ ಮತ್ತು ಶಬಾನಾ ಬೇಗಂ ಅವರೊಂದಿಗೆ ತನ್ನ ಅಜ್ಜಿಯನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದಳು.

ಹೈದರಾಬಾದ್: ನೀರಿನ ಟ್ಯಾಂಕ್​ನಲ್ಲಿ ಕೈಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆ
ಪೊಲೀಸ್

Updated on: Oct 02, 2025 | 3:08 PM

ಹೈದರಾಬಾದ್, ಅಕ್ಟೋಬರ್ 02: ಮಂಗಳವಾರದಿಂದ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕಿಯ ಶವ ಮನೆಯ ತಾರಸಿಯಲ್ಲಿರುವ ನೀರಿನ ಟ್ಯಾಂಕ್​ನಲ್ಲಿ ಪತ್ತೆಯಾಗಿದೆ. ಆಕೆಯ ಕೈಗಳು ಹಿಂದಕ್ಕೆ ಹಗ್ಗದಿಂದ ಕಟ್ಟಿದ್ದವು. ಈ ಘಟನೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸರು ಮಧ್ಯ ಪ್ರವೇಶಿಸಿ ತನಿಖೆ ಆರಂಭಿಸಿದ್ದಾರೆ. ಹುಮೇನಿ ಸುಮಯ್ಯ ಎಂಬ ಬಾಲಕಿ ತನ್ನ ಹೆತ್ತವರಾದ ಮೊಹಮ್ಮದ್ ಅಜೀಂ ಮತ್ತು ಶಬಾನಾ ಬೇಗಂ ಅವರೊಂದಿಗೆ ತನ್ನ ಅಜ್ಜಿಯನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದಳು.

ಮಂಗಳವಾರ ಸಂಜೆ ಸುಮಯ್ಯ ನಾಪತ್ತೆಯಾಗಿದ್ದಾರೆಂದು ವರದಿಯಾಗಿದ್ದು, ಆಕೆಯ ಕುಟುಂಬ ತಕ್ಷಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹಲವಾರು ಪೊಲೀಸ್ ತಂಡಗಳು, ತನಿಖಾಧಿಕಾರಿಗಳು ಮತ್ತು ಕಾಳಜಿ ವಹಿಸಿದ ನೆರೆಹೊರೆಯವರನ್ನು ಒಳಗೊಂಡ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಹುಡುಗಿ ಪತ್ತೆಯಾಗಲಿಲ್ಲ.

ಬುಧವಾರ ಮಧ್ಯಾಹ್ನ ಸುಮಯ್ಯಳ ತಾಯಿ ಅಂತಿಮವಾಗಿ ಅಜ್ಜಿಯ  ಮನೆಯ ತಾರಸಿ ಮೇಲೆ ಹೋಗಿ ಟ್ಯಾಂಕ್ ಪರೀಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಛಾವಣಿಯ ನೀರಿನ ಟ್ಯಾಂಕ್ ಒಳಗೆ ಬಾಲಕಿ ನಿರ್ಜೀವ ದೇಹವು ತೇಲುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದರು.

ಮತ್ತಷ್ಟು ಓದಿ: ಇನ್ನೇನು ಪರೀಕ್ಷೆ ಬರೆದು ಪೊಲೀಸ್ ಆಗಬೇಕಾದವನು, ಅಪ್ಪನನ್ನು ಕೊಂದು ಜೈಲುಪಾಲಾದ

ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಘಟನಾ ಸ್ಥಳವನ್ನು ಪರೀಕ್ಷಿಸಿದ ತನಿಖಾಧಿಕಾರಿಗಳು,ಬಾಲಕಿಯ ಕೈಗಳನ್ನು ಬೆನ್ನ ಹಿಂದೆ ಕಟ್ಟಲಾಗಿತ್ತು ಎಂಬುದನ್ನು ದೃಢಪಡಿಸಿದರು. ಈ ವಿವರವು ಆಕೆ ತಾನೇ ಟ್ಯಾಂಕ್ ಒಳಗೆ ಬಿದ್ದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಈ ಘಟನೆ ಹಿಂದೆ ಯಾರ ಪಿತೂರಿ ಇದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಕೌಟುಂಬಿಕ ಕಲಹ ಸೇರಿದಂತೆ ಎಲ್ಲಾ ಕೋನಗಳಿಂದಲೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆಂಜನೇಯುಲು ಎನ್‌ಡಿಟಿವಿಗೆ ತಿಳಿಸಿದರು. ಇದು ಖಂಡಿತವಾಗಿಯೂ ಕೊಲೆ. ಯಾರಿಗೆ ಆ ಬಾಲಕಿ ಮೇಲೆ ಕೊಲೆ ಮಾಡುವಷ್ಟು ದ್ವೇಷವಿತ್ತು ಎಂಬುದನ್ನು ಬೇಗ ಪತ್ತೆಹಚ್ಚಲಾಗುತ್ತದೆ.

ಶವವನ್ನು ಟ್ಯಾಂಕ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಂಡಗಳು ಸುಳಿವುಗಳನ್ನು ಸಂಗ್ರಹಿಸಲು ಸ್ಥಳಕ್ಕೆ ಆಗಮಿಸಿವೆ. ಪೊಲೀಸರು ಅಧಿಕೃತವಾಗಿ ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಅದನ್ನು ಕೊಲೆ ಎಂದೇ ಹೇಳಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:05 pm, Thu, 2 October 25