ಪಶ್ಚಿಮ ಬಂಗಾಳ: ಹದಿಮೂರು ವರ್ಷದ ಬಾಲಕಿಯ ವಿರೂಪಗೊಂಡ ಶವ ಪತ್ತೆ, ಶಿಕ್ಷಕನ ಬಂಧನ
ಹದಿಮೂರು ವರ್ಷದ ಬಾಲಕಿಯ ಕೊಳೆತ ಶವ ಪತ್ತೆಯಾಗಿದೆ. ವಿರೂಪಗೊಂಡ ಶವ ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ನಡೆದಿದೆ.ಕಾಳಿದಂಗ ಗ್ರಾಮದ ಬಳಿಯ ಸೇತುವೆಯ ಕೆಳಗೆ ಶವವನ್ನು ಮೂರು ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡಲಾಗಿತ್ತು. ಬಾಲಕಿಯ ಅಪಹರಣ ಮತ್ತು ಕೊಲೆಯ ಶಂಕೆಯ ಮೇಲೆ ಶಾಲೆಯ ಭೌತಶಾಸ್ತ್ರ ಶಿಕ್ಷಕರನ್ನು ಬಂಧಿಸಲಾಗಿದೆ.

ಕೋಲ್ಕತ್ತಾ, ಸೆಪ್ಟೆಂಬರ್ 18: ಸುಮಾರು ಮೂರು ವಾರಗಳ ಹಿಂದೆ ಬುಡಕಟ್ಟು ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಆಕೆಯ ಕೊಳೆತ, ವಿರೂಪಗೊಂಡ ಶವ(Dead Body) ನೀರಿನ ಹೊಂಡದಲ್ಲಿ ಪತ್ತೆಯಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ನಡೆದಿದೆ.ಕಾಳಿದಂಗ ಗ್ರಾಮದ ಬಳಿಯ ಸೇತುವೆಯ ಕೆಳಗೆ ಶವವನ್ನು ಮೂರು ತುಂಡುಗಳಾಗಿ ಕತ್ತರಿಸಿ ವಿಲೇವಾರಿ ಮಾಡಲಾಗಿತ್ತು. ಬಾಲಕಿಯ ಅಪಹರಣ ಮತ್ತು ಕೊಲೆಯ ಶಂಕೆಯ ಮೇಲೆ ಶಾಲೆಯ ಭೌತಶಾಸ್ತ್ರ ಶಿಕ್ಷಕರನ್ನು ಬಂಧಿಸಲಾಗಿದೆ.
ಮೃತ ಬಾಲಕಿ ರಾಂಪುರ್ಹತ್ ಶ್ಯಾಂಪಹರಿ ಶ್ರೀ ರಾಮಕೃಷ್ಣ ಶಿಕ್ಷಪೀಠದಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಳು ಮತ್ತು ಬರೋಮೆಶಿಯಾ ಗ್ರಾಮದ ನಿವಾಸಿಯಾಗಿದ್ದಳು. ಆಗಸ್ಟ್ 28 ರಂದು ಅವಳು ಕಾಣೆಯಾಗಿದ್ದಳು. ಆಕೆ ಟ್ಯೂಷನ್ಗೆಂದು ಮನೆಯಿಂದ ಹೊರಗೆ ಹೋಗಿದ್ದಳು ಆದರೆ ಮತ್ತೆ ಹಿಂತಿರುಗಲಿಲ್ಲ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ. ಅದೇ ದಿನ ಅವರು ರಾಂಪುರ್ಹತ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ದೂರು ದಾಖಲಿಸಿದ್ದರು.
ಶಾಲೆಯ ಭೌತಶಾಸ್ತ್ರ ಶಿಕ್ಷಕ ಮನೋಜ್ ಕುಮಾರ್ ಪಾಲ್ ಆಕೆಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ಕುಟುಂಬಕ್ಕೆ ಹಲವು ದಿನಗಳಿಂದ ಪಾಲ್ ಮೇಲೆ ಅನುಮಾನವಿತ್ತು, ಆಕೆಯ ಕಣ್ಮರೆಗೆ ಕಾರಣ ಎಂದು ಆರೋಪಿಸಿದೆ, ಇದರಿಂದಾಗಿ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಉದ್ದೇಶವು ಸ್ಪಷ್ಟವಾಗಿಲ್ಲ.
ಮತ್ತಷ್ಟು ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಮೂರು ದಿನವಾದ್ರೂ ಬಾರದ ಗಂಡ
ವಿಚಾರಣೆಯ ಸಮಯದಲ್ಲಿ, ಆರೋಪಿಯ ಬಾಲಕಿಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ, ನಂತರ ಶವವನ್ನು ಮೂರು ಭಾಗಗಳಾಗಿ ಕತ್ತರಿಸಿ ನೀರಿನ ತೊಟ್ಟಿಯಲ್ಲಿ ಎಸೆದಿರುವುದಾಗಿ ಆತ ಹೇಳಿದ್ದಾಗಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಪರಾಧದ ಕುರಿತು ಹೆಚ್ಚಿನ ತನಿಖೆ ನಡೆಸಲು ಮತ್ತು ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಪಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರ ಕಸ್ಟಡಿಗೆ ಕೋರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




