ಇಳಿ ವಯಸ್ಸಿನಲ್ಲಿ ಮದುವೆ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದ ಮಹಿಳೆಯ ಬರ್ಬರ ಹತ್ಯೆ
ಜೀವನ ಮುಗಿಯುವ ಹೊತ್ತಲ್ಲಿ ಸಂಗಾತಿಯನ್ನು ಅರಸಿ ಮದುವೆಯ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭಾರತ ಮೂಲದ ಯುಕೆ ಪ್ರಜೆಯ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಅಮೆರಿಕದಿಂದ ಆತನನ್ನು ಮದುವೆಯಾಗಲು ಭಾರತದ ಪಂಜಾಬ್ಗೆ ಬಂದಿದ್ದ 72 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಲುಧಿಯಾನಾ, ಸೆಪ್ಟೆಂಬರ್ 18: ಜೀವನ ಮುಗಿಯುವ ಹೊತ್ತಲ್ಲಿ ಸಂಗಾತಿಯನ್ನು ಅರಸಿ ಮದುವೆಯ ಕನಸು ಹೊತ್ತು ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದೆ. ಭಾರತ ಮೂಲದ ಯುಕೆ ಪ್ರಜೆಯ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಅಮೆರಿಕದಿಂದ ಆತನನ್ನು ಮದುವೆಯಾಗಲು ಭಾರತದ ಪಂಜಾಬ್ಗೆ ಬಂದಿದ್ದ 72 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಯುಕೆ ಮೂಲದ 75 ವರ್ಷದ ವ್ಯಕ್ತಿಯನ್ನು ಈ ಮಹಿಳೆ ಪ್ರೀತಿಸುತ್ತಿದ್ದರು. ಮೃತ ಮಹಿಳೆಯನ್ನು ರೂಪಿಂದರ್ ಕೌರ್ ಪಂಧೇರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಚರಣ್ಜೀತ್ ಸಿಂಗ್ ಗ್ರೆವಾಲ್ ಎಂದು ಗರುತಿಸಲಾಗಿದೆ. ಆತ ರೂಪಿಂದರ್ನ ಮನವೊಲಿಸಿ ಮದುವೆಯಾಗುವುದಾಗಿ ಹೇಳಿ ಭಾರತಕ್ಕೆ ಕರೆಸಿಕೊಂಡು, ಸುಪಾರಿಕೊಟ್ಟು ಆಕೆಯ ಹತ್ಯೆ ಮಾಡಿಸಿದ್ದ.
ಜುಲೈನಲ್ಲಿ ಆಜೆ ಚರಣ್ಜೀತ್ ಆಹ್ವಾನದ ಮೇಲೆ ಭಾರತಕ್ಕೆ ಬಂದಿದ್ದರು. ಲುಧಿಯಾನ ಜಿಲ್ಲೆಯ ಕಿಲಾ ರಾಯ್‌ಪುರ ಗ್ರಾಮಕ್ಕೆ ಪ್ರಯಾಣಿಸಿದ ನಂತರ ರೂಪಿಂದರ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಕೆಯ ಸಹೋದರಿ ಪದೇ ಪದೇ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಅವರು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಂಭ್ರಮದಲ್ಲಿರಬೇಕಿದ್ದ ಕೌರ್ ನಿಗೂಢವಾಗಿ ಕಣ್ಮರೆಯಾಗಿದ್ದರು. ರೂಪಿಂದರ್ ಅವರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಇತ್ತೀಚೆಗೆ ಭಯಾನಕ ಸತ್ಯವೊಂದರ ಸುಳಿವು ಸಿಕ್ಕಿತ್ತು. ಪೊಲೀಸರು ಗ್ರೆವಾಲ್ ಮತ್ತು ಅವರ ಸಹೋದರ ಸೇರಿದಂತೆ ಪ್ರಮುಖ ಶಂಕಿತರ ಹೆಸರನ್ನು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ, ಅವರು ತಲೆಮರೆಸಿಕೊಂಡಿದ್ದಾರೆ.
ಮತ್ತಷ್ಟು ಓದಿ: ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆ; ಗುಂಡೇಟಿನ ಕ್ಷಣ, ಜನರ ಕಿರುಚಾಟದ ವಿಡಿಯೋ ಇಲ್ಲಿದೆ
ಜುಲೈ 12 ಮತ್ತು 13 ರ ಮಧ್ಯರಾತ್ರಿ ತನ್ನ ಮನೆಯ ಉಗ್ರಾಣದಲ್ಲಿ ಕೌರ್ ಕೊಲೆ ಮಾಡಿ, ಶವಕ್ಕೆ ಬೆಂಕಿ ಹಚ್ಚಿದ್ದಾಗಿ ಕಿಲಾ ರಾಯ್‌ಪುರದ ಮಲ್ಹಾ ಪಟ್ಟಿಯ ಮುಖ್ಯ ಶಂಕಿತ ಸುಖ್‌ಜೀತ್ ಸಿಂಗ್ ಅಲಿಯಾಸ್ ಸೋನು ಒಪ್ಪಿಕೊಂಡಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಹರ್ಜಿಂದರ್ ಸಿಂಗ್ ಗಿಲ್ ತಿಳಿಸಿದ್ದಾರೆ.
ರೂಪಿಂದರ್ ಹತ್ಯೆಗೆ 50 ಲಕ್ಷ ರೂ. ನೀಡುವುದಾಗಿ ಗ್ರೇವಾಲ್ ಭರವಸೆ ನೀಡಿದ್ದರಿಂದ ಸೋನು ವಿಚಾರಣೆ ವೇಳೆ ಆತನಿಗೆ ಗ್ರೆವಾಲ್ ಆದೇಶ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ . ಹಂತಕನು ಶವವನ್ನು ಸ್ಟೋರ್ ರೂಂ ಒಳಗೆ ಡೀಸೆಲ್ ಹಾಕಿ ಸುಟ್ಟು, ಶವಗಳನ್ನು ನೀರಿನಿಂದ ತಂಪಾಗಿಸಿ, ನಂತರ ಲೆಹ್ರಾ ಗ್ರಾಮದ ಬಳಿಯ ಚರಂಡಿಯಲ್ಲಿ ವಿಲೇವಾರಿ ಮಾಡುವ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರು ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದ್ದು, ಮೃತಳ ಗುರುತನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ರೂಪಿಂದರ್ ಗ್ರೇವಾಲ್ ಮತ್ತು ಅವರ ಸಹೋದರನ ಖಾತೆಗಳಿಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಆ ಹಣ ಮದುವೆಯ ವೆಚ್ಚಕ್ಕಾಗಿ ಎಂದು ಅವಳು ಭಾವಿಸಿದ್ದಳು.
ಬದಲಾಗಿ ಆಕೆಯ ಸಂತ್ತಿಗೆಗಿಯೇ ಆಕೆಯನ್ನು ಕೊಲೆ ಮಾಡುತ್ತಾರೆ ಎಂದು ಆಕೆ ಎಂದಿಗೂ ಯೋಚಿಸಿರಲಿಲ್ಲ. ಅಪರಾಧದ ಪ್ರಾಥಮಿಕ ಉದ್ದೇಶ ಆರ್ಥಿಕ ಲಾಭ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಗ್ರೆವಾಲ್ ಅವರನ್ನು ಪ್ರಕರಣದಲ್ಲಿ ಶಂಕಿತ ಎಂದು ಹೆಸರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




