AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆ; ಗುಂಡೇಟಿನ ಕ್ಷಣ, ಜನರ ಕಿರುಚಾಟದ ವಿಡಿಯೋ ಇಲ್ಲಿದೆ

ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆ; ಗುಂಡೇಟಿನ ಕ್ಷಣ, ಜನರ ಕಿರುಚಾಟದ ವಿಡಿಯೋ ಇಲ್ಲಿದೆ

ಸುಷ್ಮಾ ಚಕ್ರೆ
|

Updated on:Sep 11, 2025 | 5:26 PM

Share

ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಬುಧವಾರ (ಅಮೆರಿಕದ ಸಮಯ) ಉತಾಹ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಶಾರ್ಪ್ ಶೂಟರ್​​ನ ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಚಾರ್ಲಿ ಅವರಿಗೆ ಶೂಟ್ ಮಾಡಿದ ಕೂಡಲೆ ಅಲ್ಲಿ ಸೇರಿದ್ದ ಜನರು ಜೋರಾಗಿ ಕಿರುಚುತ್ತಾ ನೆಲದ ಮೇಲೆ ಮಲಗಿ ತಮ್ಮ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ ವಿಡಿಯೋವನ್ನು ಅಲ್ಲಿ ಸೇರಿದ್ದ ಪ್ರೇಕ್ಷಕರು ಸೆರೆ ಹಿಡಿದಿದ್ದಾರೆ. ಚಾರ್ಲಿ ಕ್ಲಿಕ್ ಅವರ ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ.

ವಾಷಿಂಗ್ಟನ್, ಸೆಪ್ಟೆಂಬರ್ 11: ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ (Charlie Kirk) ಬುಧವಾರ (ಅಮೆರಿಕದ ಸಮಯ) ಉತಾಹ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಶಾರ್ಪ್ ಶೂಟರ್​​ನ ಗುಂಡೇಟಿನಿಂದ ಮೃತಪಟ್ಟಿದ್ದಾರೆ. 31 ವರ್ಷದ ಕಿರ್ಕ್, 2012ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಅವರು ಸಹ-ಸ್ಥಾಪಿಸಿದ ಸಂಪ್ರದಾಯವಾದಿ ಯುವ ಚಳುವಳಿಯಾದ ಟರ್ನಿಂಗ್ ಪಾಯಿಂಟ್ USA ನೇತೃತ್ವ ವಹಿಸಿಕೊಂಡರು.

ರಿಪಬ್ಲಿಕನ್ ರಾಜಕೀಯದಲ್ಲಿ ಅತ್ಯಂತ ಜನಪ್ರಿಯರಾಗಿದ್ದ ವ್ಯಕ್ತಿಗಳಲ್ಲಿ ಚಾರ್ಲಿ ಕೂಡ ಒಬ್ಬರಾಗಿದ್ದರು. ಗುಂಡಿನ ದಾಳಿ ನಡೆದಾಗ ಅವರು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ (UVU) ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಭಾಷಣ ಮಾಡಿದ ಬಳಿಕ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಗುಂಡು ಅವರ ಗಂಟಲನ್ನು ಸೀಳಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಚಾರ್ಲಿ ಅವರಿಗೆ ಶೂಟ್ ಮಾಡಿದ ಕೂಡಲೆ ಅಲ್ಲಿ ಸೇರಿದ್ದ ಜನರು ಜೋರಾಗಿ ಕಿರುಚುತ್ತಾ ನೆಲದ ಮೇಲೆ ಮಲಗಿ ತಮ್ಮ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದ ವಿಡಿಯೋವನ್ನು ಅಲ್ಲಿ ಸೇರಿದ್ದ ಪ್ರೇಕ್ಷಕರು ಸೆರೆ ಹಿಡಿದಿದ್ದಾರೆ. ಚಾರ್ಲಿ ಕ್ಲಿಕ್ ಅವರ ಕೊನೆಯ ಕ್ಷಣದ ವಿಡಿಯೋ ಇಲ್ಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Sep 11, 2025 05:20 PM