ಹೈದರಾಬಾದ್: ರಾಜಸ್ಥಾನ ಮೂಲದ ಯುವಕನೊಬ್ಬ (youth) ಕುದುರೆ ಸವಾರಿಯ ಆಸಕ್ತಿಯಿಂದ ಹೈದರಾಬಾದ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ (death). ಈತನ ಜೊತೆಗೆ ಮತ್ತೊಬ್ಬ ಯುವಕನೂ ನದಿಯ ಮರಳು ನಾಲೆಯಲ್ಲಿ ಹುದುಗಿ ಮೃತಪಟ್ಟಿದ್ದಾರೆ. ಕೊನೆಗೆ, ಕುದುರೆಯನ್ನು ರಕ್ಷಿಸಲು ಮುಂದಾದ (rescue) ಆ ಇಬ್ಬರು ಯುವಕರು ಸೇರಿದಂತೆ ಕುದುರೆಯೂ ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದಿನ (hyderabad) ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಸ್ಮತ್‌ಪುರ ಸಮೀಪದ ಮರಳು ನಾಲೆ ನಡೆದಿದೆ.
ಅಜಮ್ ಎಂಬ ವ್ಯಕ್ತಿ ತೆಲಂಗಾಣ ಹಾರ್ಸ್ ರೈಡಿಂಗ್ ಎಂಬ ಹೆಸರಿನ ಕುದುರೆ ಸವಾರಿ ತರಬೇತಿ ಸಂಸ್ಥೆಯನ್ನು ನಡೆಸುತ್ತಿದ್ದಾನೆ. ಕುದುರೆ ಸವಾರಿ ಕಲಿಯಲು ಅನುಸಿಂಗ್ ಎಂಬಾತ ರಾಜಸ್ಥಾನದಿಂದ ತರಬೇತಿ ಸಂಸ್ಥೆಗೆ ಬಂದಿದ್ದರು. ರಾಜಸ್ತಾನದ ಅಸುಶಿಂಗ್ ಮತ್ತು ಹೈದರಾಬಾದಿನ ಕಿಶನ್ ಬಾಗ್‌ನ ಸೈಫ್ ಎಂಬ ಇಬ್ಬರು ಯುವಕರು ಕಿಸ್ಮತ್‌ಪುರದ ಕಡೆಗೆ ರನ್ನಿಂಗ್ ಮಾಡುತ್ತಿದ್ದರು. ಆ ವೇಳೆ ತರಬೇತಿ ಕೇಂದ್ರದ ಕುದುರೆ ನಾಲಾದಲ್ಲಿ ನೀರು ಕುಡಿಯಲು ಹೋಗಿತ್ತು.
ಆದರೆ ನೀರು ಕುಡಿಯುತ್ತಾ ಕುದುರೆ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ರಾಜಸ್ಥಾನದ ಅಶು ಸಿಂಗ್ ಗಮನಿಸಿದ್ದಾರೆ. ತಕ್ಷಣವೇ ಕುದುರೆಯನ್ನು ರಕ್ಷಿಸಲು ಹೊಳೆಯತ್ತ ಧಾವಿಸಿದ್ದಾರೆ. ಹಾಗೆ ನದಿಯ ಮರಳು ನಾಲೆಯತ್ತಾ ಓಡುವಾಗ, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕುದುರೆ ಸವಾರಿ ಕೇಂದ್ರದ ಮಾಲೀಕ ಅಝಂ ಅವರ ಮಗ ಸೈಫ್ ಆ ಆರ್ತನಾದವನ್ನು ಕೇಳಿ, ತಮ್ಮ ತರಬೇತಿ ಕೇಂದ್ರಕ್ಕೆ ಬಂದಿದ್ದ ಯುವಕನನ್ನು ಮತ್ತು ಕುದುರೆಯನ್ನು ರಕ್ಷಿಸಲು ಅತ್ತ ಧಾವಿಸಿದ್ದಾರೆ. ಅಶು ಸಿಂಗ್ ಮತ್ತು ಸೈಫ್ ಇಬ್ಬರೂ ನದಿಗೆ ಇಳಿದಿದ್ದಾರೆ. ಮುಳುಗುತ್ತಿದ್ದ ಕುದುರೆಯನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಈಜಲು ಬಾರದ ಕಾರಣ ಇಬ್ಬರೂ ನದಿಯಲ್ಲಿ ಮುಳುಗಿ, ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ:
ವಿಷಯ ತಿಳಿದ ಪೊಲೀಸರು ತಕ್ಷಣ ನುರಿತ ಈಜುಗಾರರನ್ನು ನಿಯೋಜಿಸಿದ್ದಾರೆ. ಶೋಧದ ಬಳಿಕ, ಕುದುರೆ ಸಮೇತ ರಾಜೇಂದ್ರನಗರ ನಾಲಾದಲ್ಲಿ ಮುಳುಗಿ ಸಾವನ್ನಪ್ಪಿದ ಸೈಫ್ ಮತ್ತು ಅಶುಸಿಂಗ್ ಅವರುಗಳ ಮೃತದೇಹಗಳು ಪತ್ತೆಯಾಗಿವೆ. ಅಲ್ಲಿಗೆ ಕುದುರೆ ಸಮೇತ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Thu, 27 April 23