ಸಾಮಾನ್ಯವಾಗಿ ಬೈಕ್​ ಏರಿ ಬಂದು ದರೋಡೆ ಮಾಡ್ತಾರೆ! ಆದರೆ ಇಲ್ಲಿ ಕುದುರೆಯ ಮೇಲೆ ಬಂದು ಮಹಿಳೆಯ ಕೈಚೀಲ ಕಸಿದುಕೊಂಡು ಹೋದ -ವಿಡಿಯೋ ವೈರಲ್

ಕಳ್ಳನೊಬ್ಬ ಕುದುರೆ ಸವಾರಿ ಮಾಡಿಕೊಂಡು ಬಂದು ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಲೂಟಿ ಮಾಡಿ ಆರಾಮವಾಗಿ ಹಿಂದಿರುಗುತ್ತಾನೆ.

ಸಾಮಾನ್ಯವಾಗಿ ಬೈಕ್​ ಏರಿ ಬಂದು ದರೋಡೆ ಮಾಡ್ತಾರೆ! ಆದರೆ ಇಲ್ಲಿ ಕುದುರೆಯ ಮೇಲೆ ಬಂದು ಮಹಿಳೆಯ ಕೈಚೀಲ ಕಸಿದುಕೊಂಡು ಹೋದ -ವಿಡಿಯೋ ವೈರಲ್
ಕುದುರೆಯ ಮೇಲೆ ಬಂದು ಮಹಿಳೆಯ ಕೈಚೀಲ ಕಸಿದುಕೊಂಡು ಹೋದ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 20, 2023 | 11:45 AM

ಇಂತಹ ವಿಶಿಷ್ಟ ಶೈಲಿಯ ದರೋಡೆಕೋರರನ್ನು ನೀವು ನೋಡಿರಲಿಕ್ಕಿಲ್ಲ, ದರೋಡೆಕೋರ ಕುದುರೆ ಏರಿ ಬಂದು ಮಹಿಳೆಯ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (trending news) ಆಗುತ್ತಿದ್ದು, ಇದನ್ನು ನೋಡಿ ಜನರು ಕೂಡ ಅಚ್ಚರಿಗೊಂಡಿದ್ದಾರೆ. ಇಂದಿನ ಕಳ್ಳರು ಮತ್ತು ದರೋಡೆಕೋರರು (robber) ಸಹ ಬಹಳ ವಿಶಿಷ್ಟವಾಗುತ್ತಿದ್ದಾರೆ. ಅವರ ಕಳ್ಳತನ ಮತ್ತು ಲೂಟಿ ಮಾಡುವ ವಿಧಾನಗಳು ಬದಲಾಗುತ್ತಿವೆ. ಹಿಂದಿನ ಕಾಲದಲ್ಲಿ ದರೋಡೆಕೋರರು ಯಾರದೋ ಮನೆಗೆ ನುಗ್ಗಿ ಎಲ್ಲ ಸಾಮಾನುಗಳನ್ನು ದೋಚುತ್ತಿದ್ದರು.

ಆದರೆ ಈಗ ದುಷ್ಕರ್ಮಿಗಳು ನಿರ್ಭಯರಾಗಿದ್ದಾರೆ. ಆಯುಧಗಳೊಂದಿಗೆ ಹಿಂಡು ಹಿಂಡಾಗಿ ಬಂದು ಜನರ ಮನೆ, ಬ್ಯಾಂಕ್ ಅಥವಾ ಅಂಗಡಿಗಳನ್ನು ಲೂಟಿ ಮಾಡಿ ಬಿಡುತ್ತಾರೆ. ಕೆಲವು ಕಳ್ಳರು ಆಯುಧಗಳ ಬಲದ ಮೇಲೆ ಒಬ್ಬರೇ ಕದಿಯಲು ಹೊರಡುತ್ತಾರೆ. ಇನ್ನು ಬಹುತೇಕ ಕಳ್ಳರು, ದರೋಡೆಕೋರರು ಬೈಕ್‌ನಲ್ಲಿ ಬಂದು ದಾರಿಯಲ್ಲಿ ಜನರನ್ನು ಲೂಟಿ ಮಾಡಿ ಓಡಿಹೋಗುತ್ತಾರೆ. ಆದರೆ ಈ ಯುಗದಲ್ಲೂ ಯಾರಾದರೂ ಕುದುರೆ ಸವಾರಿ ಮಾಡಿಕೊಂಡು ಬಂದು ದರೋಡೆ ಮಾಡುವುದನ್ನು ನೀವು ನೋಡಿದ್ದೀರಾ? ಅಂದಹಾಗೆ ಬಹಳ ಹಿಂದೆ ದೊಡ್ಡ ದೊಡ್ಡ ಗ್ಯಾಂಗ್​​​ಸ್ಟರ್​​ಗಳು ಕುದುರೆಗಳಲ್ಲಿ (horse) ಹಿಂಡುಹಿಂಡಾಗಿ ಬಂದು ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇದನ್ನು ಸಿನಿಮಾಗಳಲ್ಲಿಯೂ ನೀವು ನೋಡಿರುತ್ತೀರಿ.

ಇದನ್ನೂ ಓದಿ:

ಹುಟ್ಟುಹಬ್ಬದ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಬೈಂದೂರಿನ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಉಡುಪಿ ಪೋಕ್ಸೋ ಕೋರ್ಟ್​

ಆದರೆ ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಕಳ್ಳನೊಬ್ಬ ಕುದುರೆ ಸವಾರಿ ಮಾಡಿಕೊಂಡು ಬಂದು ನಿರ್ಜನ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಲೂಟಿ ಮಾಡಿ ಆರಾಮವಾಗಿ ಹಿಂದಿರುಗುತ್ತಾನೆ. ರಾತ್ರಿಯ ಸಮಯ ಮತ್ತು ಮಹಿಳೆಯೊಬ್ಬರು ನಿರ್ಜನ ಪ್ರದೇಶದಿಂದ ನಡೆದುಹೋಗುತ್ತಿರುತ್ತಾರೆ. ಇದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಅಷ್ಟರಲ್ಲಿ ಕುದುರೆ ಸವಾರಿ ಮಾಡುವ ವ್ಯಕ್ತಿ ಅಲ್ಲಿಗೆ ತಲುಪುತ್ತಾನೆ. ಅವನನ್ನು ನೋಡಿದ ಮಹಿಳೆ ಹಿಂದೆ ತಿರುಗಿ ಓಡಿಹೋಗಲು ಪ್ರಯತ್ನಿಸುತ್ತಾಳೆ. ಆದರೆ ಕಳ್ಳ ಓಡಿಹೋಗುವ ಅವಕಾಶವನ್ನು ನೀಡಲಿಲ್ಲ. ಅವನು ಬಲವಂತವಾಗಿ ಮಹಿಳೆಯಿಂದ ಅವಳ ಚೀಲವನ್ನು ಕಸಿದುಕೊಂಡು ಆರಾಮವಾಗಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ ಮತ್ತು ಮಹಿಳೆ ಅಸಹಾಯಕರಾಗಿ ನೋಡುತ್ತಲೇ ಇರುತ್ತಾಳೆ.

ಈ ಘಟನೆ ನಿಜವೋ ಅಥವಾ ಸ್ಕ್ರಿಪ್ಟ್ ಆಗಿದೆಯೋ ತಿಳಿದಿಲ್ಲ. ಆದರೆ ಈ ಸಂಪೂರ್ಣ ಘಟನೆಯ ವೀಡಿಯೊ ರಸ್ತೆ ಬದಿ ಕಂಬದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತೋರುತ್ತದೆ. ಅದು ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ:  ಇನ್ಮುಂದೆ ಕೋರ್ಟ್ ತೀರ್ಪು ಕನ್ನಡದಲ್ಲೇ ಓದಿ: ಕನ್ನಡ ಭಾಷೆ ತೀರ್ಪುಗಳು ಇರುವ ವೆಬ್ ಸೈಟ್​​ ಆರಂಭಿಸಿದ ಹೈಕೋರ್ಟ್

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ @HasnaZarooriHai ಹೆಸರಿನ ಐ.ಡಿ. ಯೊಂದಿಗೆ ಹಂಚಿಕೊಳ್ಳಲಾಗಿದೆ. ಯುವತಿಯರು ತಮ್ಮ ಕನಸಿನ ರಾಜಕುಮಾರ ಒಂದು ದಿನ ಕುದುರೆಯ ಮೇಲೆ ಕುಳಿತು ಬರುತ್ತಾನೆ. ಮತ್ತು ತನ್ನನ್ನು ಕರೆದುಕೊಂಡು ಹೋಗುತ್ತಾನೆ ಅನ್ನೋಹಾಗೆ ಇದೆ ಎಂದು ತಮಾಷೆಯ ರೀತಿಯಲ್ಲಿ ಒಕ್ಕಣೆ ಬರೆಯಲಾಗಿದೆ. ಆದರೆ ವಾಸ್ತವದಲ್ಲಿ ಇಲ್ಲಿ ದರೋಡೆಕೋರನು ಕುದುರೆಯ ಮೇಲೆ ಬರುತ್ತಾನೆ. ಮತ್ತು ಮಹಿಳೆಯ ಕೈಚೀಲ ಕಸಿದುಕೊಂಡು ಹೋಗುತ್ತಾನೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

Published On - 10:21 am, Thu, 20 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ