ಹೈದರಾಬಾದ್: ಕಾಮುಕರಿಂದ ಹತ್ಯೆಗೀಡಾದ ಡಾ. ಪ್ರಿಯಾಂಕಾ ರೆಡ್ಡಿ ಸಾವಿಗೆ ದೇಶಕ್ಕೆ ದೇಶವೇ ಮರುಗುತ್ತಿದೆ. ಮತ್ತೊಂದ್ಕಡೆ ಜನರ ಆಕ್ರೋಶದ ಕಟ್ಟೆಯೂ ಒಡೆದಿದ್ದು, ಇಂತಹ ಘಟನೆಗಳಿಗೆ ಫುಲ್ಸ್ಟಾಪ್ ಬೀಳಲಿ ಅಂತಾ ರೊಚ್ಚಿಗೆದ್ದಿದ್ದಾರೆ.
ಕಾಮುಕರ ವಿರುದ್ಧ ಘೋಷಣೆ ಕೂಗುತ್ತಿರುವ ಜನ. ಮತ್ತೊಂದ್ಕಡೆ ಡಾ. ಪ್ರಿಯಾಂಕಾ ಸಾವಿಗೆ ನ್ಯಾಯ ಸಿಗಲಿ ಅಂತಾ ಒತ್ತಾಯಿಸಿ ಪ್ರತಿಭಟಿಸ್ತಿರುವ ವಿದ್ಯಾರ್ಥಿಗಳು, ನಾಗರಿಕರು. ಆಂಧ್ರ, ತೆಲಂಗಾಣದಲ್ಲಿ ಪ್ರಿಯಾಂಕಾ ಸಾವಿನ ಕಿಚ್ಚು ಹೊತ್ತಿದೆ. ತಪ್ಪಿತಸ್ಥರನ್ನ ಗಲ್ಲಿಗೇರಿಸಿ ಅಂತಾ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ಮುಗ್ಧ ಯುವತಿ ಸಾವಿಗೆ ಮಮ್ಮಲ ಮರುಗಿದ ಜನ:
ಚಿಕಿತ್ಸೆಗೆ ಅಂತಾ ಹೊರ ಹೋಗಿದ್ದಾಗ ಕಾಮುಕರ ಕೈಗೆ ಸಿಕ್ಕು ನರಳಿ-ನರಳಿ ಪ್ರಾಣಬಿಟ್ಟ ಪ್ರಿಯಾಂಕಾಗೆ ನ್ಯಾಯ ಕೊಡಿಸಲೆಂದು ಜನ ಬೀದಿಗಿಳಿದಿದ್ದಾರೆ. ಪಶು ವೈದ್ಯೆ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ಬೆಂಕಿಹಚ್ಚಿ ಸುಟ್ಟ ರಾಕ್ಷಸರನ್ನ ಗಲ್ಲಿಗೆ ಹಾಕಲು ಜನ ಆಗ್ರಹಿಸ್ತಿದ್ದಾರೆ. ಊರುಕೇರಿಯಲ್ಲಿ ಮಾತ್ರವಲ್ಲ ಕಾಲೇಜು, ಕಾರಾಗೃಹಗಳಲ್ಲೂ ಪ್ರತಿಭಟನೆ ಮೊಳಗಿದೆ.
ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಕೆಸಿಆರ್:
ಮತ್ತೊಂದ್ಕಡೆ ಈ ಬಗ್ಗೆ ಮಾತನಾಡಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೃಗಗಳಂತೆ ವರ್ತಿಸಿದವರ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಆಕ್ರೋಶ ಹೊರಹಾಕಿದ್ದಾರೆ.
ಮನೆ ಮಗಳನ್ನು ಕಳೆದುಕೊಂಡ ಪ್ರಿಯಾಂಕಾ ಕುಟುಂಬ ದುಖಃದಲ್ಲಿ ಕೈತೊಳೆಯುವಂತಾಗಿದೆ. ಮತ್ತೊಂದ್ಕಡೆ ಆರೋಪಿಗಳ ತನಿಖೆಯೂ ಚುರುಕಾಗಿ ನಡೀತಿದ್ದು, ಪೊಲೀಸರು ವಿಚಾರಣೆ ವೇಳೆ ಹಲವಾರು ವಿಚಾರಗಳನ್ನ ಬಾಯಿ ಬಿಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತೆಲಂಗಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
Published On - 6:54 am, Mon, 2 December 19