ನಾನು ಬಿಜೆಪಿಯ ‘ಭಕ್ತ’, ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ: ಅನಿಲ್ ವಿಜ್

|

Updated on: Mar 13, 2024 | 1:52 PM

ನಾನು ಬಿಜೆಪಿಯ ‘ಭಕ್ತ’. ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ, ಆದರೆ ನಾನು ಪಕ್ಷಕ್ಕಾಗಿ ಪ್ರತಿ ಸಂದರ್ಭದಲ್ಲೂ ದುಡಿದಿದ್ದೇನೆ. ನಾನು ಇಂದು ಮತ್ತು ಹೆಚ್ಚಿನ ಶಕ್ತಿಯಿಂದ ಕೆಲಸ ಮಾಡುತ್ತೇನೆ. ಪರಿಸ್ಥಿತಿಗಳು ಬದಲಾಗಬಹುದು ಆದರೆ ನಾನು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ವಿಜ್ ಹೇಳಿದ್ದಾರೆ.

ನಾನು ಬಿಜೆಪಿಯ ‘ಭಕ್ತ’, ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ: ಅನಿಲ್ ವಿಜ್
ಅನಿಲ್ ವಿಜ್
Follow us on

ಚಂಡೀಗಢ ಮಾರ್ಚ್ 13: ಮಂಗಳವಾರ ರಾಜಭವನದಲ್ಲಿ ನಡೆದ ಹರ್ಯಾಣದ (Haryana) ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ಮತ್ತು ಇತರ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಗೈರಾದ ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ವಿಜ್ (Anil Vij) ಅವರು ಬುಧವಾರ ನಡೆಯಲಿರುವ ವಿಶ್ವಾಸಮತ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. “ನಾನು ಬಿಜೆಪಿಯ ‘ಭಕ್ತ’. ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ, ಆದರೆ ನಾನು ಪಕ್ಷಕ್ಕಾಗಿ ಪ್ರತಿ ಸಂದರ್ಭದಲ್ಲೂ ದುಡಿದಿದ್ದೇನೆ. ನಾನು ಇಂದು ಮತ್ತು ಹೆಚ್ಚಿನ ಶಕ್ತಿಯಿಂದ ಕೆಲಸ ಮಾಡುತ್ತೇನೆ. ಪರಿಸ್ಥಿತಿಗಳು ಬದಲಾಗಬಹುದು ಆದರೆ ನಾನು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಚಂಡೀಗಢಕ್ಕೆ ತೆರಳುವ ಮೊದಲು ಅಂಬಾಲಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ವಿಜ್ ಹೇಳಿದ್ದಾರೆ.

ಮಂಗಳವಾರ ಬಿಜೆಪಿ 2024 ರ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳ ಮುಂಚೆಯೇ ರಾಜ್ಯದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಒಬಿಸಿ ನಾಯಕ ನಯಾಬ್ ಸಿಂಗ್ ಸೈನಿ ಅವರನ್ನು ಹರ್ಯಾಣದಮುಖ್ಯಮಂತ್ರಿಯನ್ನಾಗಿ ನೇಮಿಸಿತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ನಯಾಬ್ ಸಿಂಗ್ ಸೈನಿ ಅವರು ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಸಂಪುಟದ ನಾಟಕೀಯ ರಾಜೀನಾಮೆಯ ಗಂಟೆಗಳ ನಂತರ ರಾಜಭವನದ ಸಮಾರಂಭದಲ್ಲಿ ಐದು ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಅನಿಲ್ ವಿಜ್ ಮಾತು


ಕುರುಕ್ಷೇತ್ರದ ಸಂಸದ ನಯಾಬ್ ಸೈನಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ಕೂಡಲೇ ಶಾಸಕಾಂಗ ಪಕ್ಷದ ಸಭೆಯಿಂದ ಅನಿಲ್ ವಿಜ್ ಎದ್ದು ಹೋಗಿದ್ದು, ಹಲವು ಊಹಾಪೋಹಕ್ಕೆ ಕಾರಣವಾಗಿತ್ತು.

ಅಂಬಾಲಾ ಕಂಟೋನ್ಮೆಂಟ್‌ನಿಂದ ಆರು ಬಾರಿ ಶಾಸಕರಾಗಿರುವ ಅನಿಲ್ ವಿಜ್ ಅಸಮಾಧಾನಗೊಂಡಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಲಿಲ್ಲ. ಅವರ ಹೆಸರು ಸಚಿವ ಸಂಪುಟದ ಪಟ್ಟಿಯಲ್ಲಿದ್ದರೂ ಸಹ ವಿಜ್, ತಮ್ಮ ಮನೆಯಲ್ಲೇ ಕುಳಿತಿದ್ದರು.

ಅನಿಲ್ ವಿಜ್ ಅವರನ್ನು ಶೀಘ್ರದಲ್ಲೇ ಸಂಪರ್ಕಿಸುತ್ತೇವೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಮನೋಹರ್ ಲಾಲ್ ಖಟ್ಟರ್ ಹೇಳಿದ್ದರು. ಮುಖ್ಯಮಂತ್ರಿಯಾಗಿ ಖಟ್ಟರ್ ಅವರ ಎರಡನೇ ಅವಧಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದ್ದು,  ನಂತರ ವಿಧಾನಸಭಾ ಚುನಾವಣೆ ನಡೆಯಲಿವೆ.

ಸೋಮವಾರವಷ್ಟೇ ಅವರು ಗುರುಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ರಸ್ತೆ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡರು. ಖಟ್ಟರ್ ಅವರೊಂದಿಗಿನ ಹಳೆಯ ಒಡನಾಟದ ಬಗ್ಗೆ ಮೋದಿ ಅಲ್ಲಿ ಆತ್ಮೀಯವಾಗಿ ಮಾತನಾಡಿದರು, ಇಬ್ಬರು ಮೋಟಾರ್ ಸೈಕಲ್‌ನಲ್ಲಿ ರಾಜ್ಯದಾದ್ಯಂತ ಪ್ರಯಾಣಿಸಿದ್ದನ್ನೂ ಪ್ರಧಾನಿ ಎಂದು ನೆನಪಿಸಿಕೊಂಡರು.

ಇದನ್ನೂ ಓದಿ:ಮೇಡ್ ಇನ್ ಇಂಡಿಯಾ ಚಿಪ್ ದೇಶವನ್ನು ಆತ್ಮನಿರ್ಭರ ಮತ್ತು ಆಧುನಿಕತೆಯತ್ತ ಕೊಂಡೊಯ್ಯುತ್ತದೆ: ಮೋದಿ

14 ಸದಸ್ಯರ ಖಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಸೇರಿದಂತೆ ಮೂವರು ಸಚಿವರನ್ನು ಹೊಂದಿದ್ದ ಜೆಜೆಪಿ ಮಂಗಳವಾರ ದೆಹಲಿಯಲ್ಲಿ ಸಭೆ ನಡೆಸಿದೆ. ಹರ್ಯಾಣದಲ್ಲಿ ಜೆಜೆಪಿಯ ಐವರು ಶಾಸಕರು ಸಭೆಗೆ ಹಾಜರಾಗಲಿಲ್ಲ. ನಾಲ್ವರು ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು, ಆ ಪಕ್ಷದಲ್ಲಿ ಸಂಭವನೀಯ ಬಿರುಕು ಕುರಿತು ಊಹಾಪೋಹಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ