AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress Manifesto: ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​, 5 ಯೋಜನೆಗಳ ಘೋಷಣೆ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಹಿಳೆಯರನ್ನೇ ಪ್ರಮುಖವಾಗಿಟ್ಟುಕೊಂಡು 5 ಘೋಷಣೆಗಳನ್ನು ಜಾರಿ ಮಾಡಿದೆ.

Congress Manifesto: ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್​, 5 ಯೋಜನೆಗಳ ಘೋಷಣೆ
ರಾಹುಲ್ ಗಾಂಧಿ
ನಯನಾ ರಾಜೀವ್
|

Updated on: Mar 13, 2024 | 2:24 PM

Share

ಲೋಕಸಭಾ ಚುನಾವಣೆ(Lok Sabha Election) ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 5 ಘೋಷಣೆಗಳನ್ನು ಮಾಡಿದ್ದಾರೆ. ಈ ಯೋಜನೆಗಳಿಗೆ ‘ನಾರಿ ನ್ಯಾಯ’  ಯೋಜನೆ ಎಂದು ನಾಮಕರಣ ಮಾಡಲಾಗಿದೆ. ಈ ಪ್ರಣಾಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಅಡಿಯಲ್ಲಿ ಕಾಂಗ್ರೆಸ್ ಬಡ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೇ ಸರ್ಕಾರಿ ನೇಮಕಾತಿಯಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕು ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಘೋಷಣೆ ಮಾಡಿದ 5 ಯೋಜನೆಗಳು 1. ಮಹಾಲಕ್ಷ್ಮಿ ಗ್ಯಾರಂಟಿ: ಇದರ ಅಡಿಯಲ್ಲಿ, ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ನೀಡಲಾಗುತ್ತದೆ. 2. ಆದಿ ಆಬಾಧಿ ಪೂರಾ ಹಕ್​: ಇದರ ಅಡಿಯಲ್ಲಿ, ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕುಗಳು ಸಿಗುತ್ತವೆ.

3. ಶಕ್ತಿ ಕಾ ಸಮ್ಮಾನ್: ಈ ಯೋಜನೆಯಡಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.

4. ಅಧಿಕಾರ ಮೈತ್ರಿ: ಇದರ ಅಡಿಯಲ್ಲಿ, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರತಿ ಪಂಚಾಯತ್‌ನಲ್ಲಿ ಪ್ಯಾರಾ-ಲೀಗಲ್ ಅಂದರೆ ಕಾನೂನು ಸಹಾಯಕರನ್ನು ಅಧಿಕಾರ ಮೈತ್ರಿಯಾಗಿ ನೇಮಿಸಲಾಗುತ್ತದೆ.

5. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಕನಿಷ್ಠ ಒಂದು ಹಾಸ್ಟೆಲ್ ಅನ್ನು ನಿರ್ಮಿಸಲಾಗುವುದು ಮತ್ತು ಇಡೀ ದೇಶದಲ್ಲಿ ಈ ಹಾಸ್ಟೆಲ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು? ನಮ್ಮ ಖಾಗತಿಗಳಲ್ಲಿರುವುದು ಸುಳ್ಳು ಭರವಸೆಗಳಲ್ಲ, ಪಕ್ಷದ ಹಿರಿಯ ನಾಯಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹಿಂದೆ ಸರಿಯುತ್ತಿದ್ದಾರೆ ಎಂಬ ಆರೋಪವನ್ನು ಮಂಗಳವಾರ ಖರ್ಗೆ ತಳ್ಳಿ ಹಾಕಿದ್ದರು.ಕಾರ್ಯಕರ್ತರು ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದರೆ ಸ್ಪರ್ಧಿಸುತ್ತೇನೆ ಎಂದರು.

ವಯಸ್ಸಾದ ಕಾರಣ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, 2009 ಮತ್ತು 2014ರಲ್ಲಿ ಕರ್ನಾಟಕದ ಕಲಬುರಗಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಖರ್ಗೆ 2019ರಲ್ಲಿ ಸೋತಿದ್ದರು. ಕಾಂಗ್ರೆಸ್ ಟಿಕೆಟ್ ಮಂಗಳವಾರ (ಮಾರ್ಚ್ 12) ಲೋಕಸಭೆ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ 43 ಅಭ್ಯರ್ಥಿಗಳ ಹೆಸರಿದೆ.

ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರಿಗೆ ಚಿಂದ್ವಾರದಿಂದ ಮತ್ತು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಜಲೋರ್ ನಿಂದ ಟಿಕೆಟ್ ನೀಡಲಾಗಿದೆ.

ಈ ಹಿಂದೆ ಮಾರ್ಚ್ 8 ರಂದು ಬಿಡುಗಡೆಯಾದ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 39 ಹೆಸರುಗಳನ್ನು ಪ್ರಕಟಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಇದುವರೆಗೆ 82 ಹೆಸರುಗಳನ್ನು ಪ್ರಕಟಿಸಿದೆ. ಪಟ್ಟಿಯಲ್ಲಿರುವ 76.7% ಅಭ್ಯರ್ಥಿಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು