AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಚುನಾವಣೆ: ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Congress Candidates 1st List: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇಂದು (ಮಾರ್ಚ್ 08) ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್‌, ಅಜಯ್ ಮಕೇನ್‌, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ 39 ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಹಾಗಾದ್ರೆ, ಯಾರಿಗೆ ಟಿಕೆಟ್​ ಸಿಕ್ಕಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಲೋಕಸಭಾ ಚುನಾವಣೆ: ಕರ್ನಾಟಕ ಸೇರಿದಂತೆ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ಚಿಹ್ನೆ
TV9 Web
| Edited By: |

Updated on:Mar 08, 2024 | 7:49 PM

Share

ನವದೆಹಲಿ, (ಮಾರ್ಚ್ 08): ಮುಂಬರುವ ಲೋಕಸಭಾ ಚುನಾವಣೆಗೆ (Loksabha Elections 2024)  ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರಣಿ ಸಭೆಗಳ ನಂತರ ಅಂತಿಮವಾಗಿ ಇಂದು (ಮಾರ್ಚ್ 08) ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್‌, ಅಜಯ್ ಮಕೇನ್‌, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿಯೂ ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಶಶಿ ತರೂರ್​  ಅವರಿಗೆ ತಿರುವನಂತಪುರಂ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಕರ್ನಾಟಕದ 7 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನ ಘೋಷಿಸಿದೆ.  ವಿಜಯಪುರ, ಶಿವಮೊಗ್ಗ, ಹಾಸನ, ತುಮಕೂರು, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ, ಹಾವೇರಿ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

  • ಶಿವಮೊಗ್ಗ- ಗೀತಾ ಶಿವರಾಜ್​ ಕುಮಾರ್
  • ತುಮಕೂರು- ಎಸ್​ಪಿ ಮುದ್ದಹನುಮೇಗೌಡ
  • ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
  • ಹಾಸನ- ಶ್ರೇಯಸ್ ಪಟೇಲ್
  • ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್
  • ವಿಜಯಪುರ- ಎಚ್​ಆರ್​ ಅಲ್ಗೂರ್​
  • ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ

ತೆಲಂಗಾಣದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

ಈ ಪಟ್ಟಿಯಲ್ಲಿ ತೆಲಂಗಾಣದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಜಹೀರಾಬಾದ್ ಕ್ಷೇತ್ರ- ಸುರೇಶ್ ಕುಮಾರ್ ಶೆಟ್ಕರ್, ಚೇವೆಲ್ಲಾ ಕ್ಷೇತ್ರ ಸುನೀತಾ ಮಹೇಂದರ್ ರೆಡ್ಡಿ, ನಲ್ಗೊಂಡ ಕ್ಷೇತ್ರ- ಕುಂದೂರು ರಘುವೀರ್, ಮಹಬೂಬಾಬಾದ್ ಕ್ಷೇತ್ರ (ಎಸ್‌ಟಿ )- ಪೋರಿಕ ಬಲರಾಮ್ ನಾಯಕ್​ಗೆ ಟಿಕೆಟ್​ ನೀಡಲಾಗಿದೆ.

ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ

  • ವಯನಾಡ್ (ಕೇರಳ): ರಾಹುಲ್ ಗಾಂಧಿ
  • ಕಾಸರಗೋಡು (ಕೇರಳ): ರಾಜಮೋಹನ್ ಉಣ್ಣಿತ್ತಾನ್
  • ಕಣ್ಣೂರು (ಕೇರಳ): ಕೆ ಸುಧಾಕರನ್
  • ವಡಕರ (ಕೇರಳ): ಶಫಿ ಪರಂಬಿಲ್
  • ಕೋಝಿಕ್ಕೋಡ್ (ಕೇರಳ): ಎಂಕೆ ರಾಘವನ್
  • ಪಾಲಕ್ಕಾಡ್ (ಕೇರಳ): ವಿಕೆ ಶ್ರೀಕಂಠನ್
  • ಅಲತೂರ್(ಎಸ್‌ಸಿ) (ಕೇರಳ): ರೆಮ್ಯಾ ಹರಿದಾಸ್
  • ತ್ರಿಶೂರ್ (ಕೇರಳ): ಕೆ ಮರಳೀಧರನ್
  • ಚಾಲಕ್ಕುಡಿ (ಕೇರಳ): ಬೆನ್ನಿ ಬಹನ್ನಾನ್
  • ಎರ್ನಾಕುಲಂ(ಕೇರಳ): ಹಿಬಿ ಇಡೆನ್
  • ಇಡುಕ್ಕಿ(ಕೇರಳ): ಡೀನ್ ಕುರಿಯಾಕೋಸ್
  • ಮಾವೇಲಿಕರ(ಎಸ್‌ಸಿ)(ಕೇರಳ): ಕೋಡಿಕುನ್ನಿಲ್ ಸುರೇಶ್
  • ಪಟ್ಟಣಂತಿಟ್ಟ(ಕೇರಳ): ಆ್ಯಂಟೋ ಆ್ಯಂಟೋನಿ
  • ಅತ್ತಿಂಗಲ್(ಕೇರಳ): ಅಡೂರ್ ಪ್ರಕಾಶ್

Published On - 7:26 pm, Fri, 8 March 24