ಬಾಂಗ್ಲಾದಿಂದ ವಲಸೆ ಬಂದ 1,551 ಹಿಂದೂಗಳಿಗೆ ಭರವಸೆ ಮೂಡಿಸಿದ ಸಿಎಎ, ನಿಟ್ಟುಸಿರು ಬಿಟ್ಟ ಮಹಿಳೆ

ಒಡಿಶಾದ ಕೇಂದ್ರಪಾರ ಜಿಲ್ಲೆಯ ಕಡಲತೀರದ ಗ್ರಾಮವಾದ ಖರಿನಾಶಿಯ ಆಶಾಲತಾ ರೇ ಎಂಬ ಮಹಿಳೆಯ ಆತಂಕವನ್ನು ಕೇಂದ್ರ ಸರ್ಕಾರ ತಂದಿರುವ ಪೌರತ್ವ (ತಿದ್ದುಪಡಿ)ದ ಅಧಿಸೂಚನೆ ದೂರ ಮಾಡಿದೆ. ನಮ್ಮನ್ನು ಯಾರು ಗಡಿಪಾರು ಮಾಡುವುದಿಲ್ಲ ಎಂಬ ಭರವಸೆ ಬಂದಿದೆ ಎಂದು ಈ ಮಹಿಳೆ ಹೇಳಿದ್ದಾರೆ. 52 ವರ್ಷ ವಯಸ್ಸಿನ ಆಶಾಲತಾ ಅವರ ಪೋಷಕರು ಮತ್ತು ಕುಟುಂಬವು ವಿಭಜನೆಯ ನಂತರ ಬಾಂಗ್ಲಾದೇಶ, ಪೂರ್ವ ಪಾಕಿಸ್ತಾನದಿಂದ ಪಲಾಯನ ಮಾಡಲಾಗಿತ್ತು.

ಬಾಂಗ್ಲಾದಿಂದ ವಲಸೆ ಬಂದ 1,551 ಹಿಂದೂಗಳಿಗೆ ಭರವಸೆ ಮೂಡಿಸಿದ ಸಿಎಎ, ನಿಟ್ಟುಸಿರು ಬಿಟ್ಟ ಮಹಿಳೆ
ಆಶಾಲತಾ ರೇ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 13, 2024 | 2:57 PM

ಕೇಂದ್ರ ಸರ್ಕಾರ ಮಾ.11ರಂದು ಸಿಎಎ (Citizen Amendment Act) ಜಾರಿಗೆ ಅಧಿಸೂಚನೆ ನೀಡಿದೆ. 2019ರಲ್ಲಿ ಸಿಎಎಗೆ ಅನುಮೋದನೆ ನೀಡಲಾಗಿತ್ತು. ಇದು ಭಾರತದ ಪೌರತ್ವ ನೀಡುವ ಕಾಯ್ದೆಯಾಗಿದೆ. ಆದರೆ ಈ ಕಾಯ್ದೆ ಬಗ್ಗೆ ಅನೇಕರು ಅಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.  ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಅಲ್ಪಸಂಖ್ಯಾತರಿಗೆ ಈ ಪೌರತ್ವ ನೀಡಲಾಗುವುದು ಎಂದು ಈ ಕಾಯ್ದೆ ಹೇಳಿದೆ. ಇದೀಗ ಈ ಕಾಯ್ದೆಯಿಂದ ಹಿರಿ ಜೀವನವೊಂದು ಸಂತೃಪ್ತಿಯಾಗಿದೆ. ಹೌದು ಕೇಂದ್ರ ಸರ್ಕಾರ ತಂದಿರುವ ಸಿಎಎ ಇದೀಗ ಈಕೆಗೆ ಭಾರತದ ಪ್ರಜೆಯಾಗುವ ಭರವಸೆಯನ್ನು ಮೂಡಿಸಿದೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಕಡಲತೀರದ ಗ್ರಾಮವಾದ ಖರಿನಾಶಿಯ ಆಶಾಲತಾ ರೇ ಎಂಬ ಮಹಿಳೆಯ ಆತಂಕವನ್ನು ಕೇಂದ್ರ ಸರ್ಕಾರ ತಂದಿರುವ ಪೌರತ್ವ (ತಿದ್ದುಪಡಿ)ದ ಅಧಿಸೂಚನೆ ದೂರ ಮಾಡಿದೆ. ನಮ್ಮನ್ನು ಯಾರು ಗಡಿಪಾರು ಮಾಡುವುದಿಲ್ಲ ಎಂಬ ಭರವಸೆ ಬಂದಿದೆ ಎಂದು ಈ ಮಹಿಳೆ ಹೇಳಿದ್ದಾರೆ. 52 ವರ್ಷ ವಯಸ್ಸಿನ ಆಶಾಲತಾ ಅವರ ಪೋಷಕರು ಮತ್ತು ಕುಟುಂಬವು ವಿಭಜನೆಯ ನಂತರ ಬಾಂಗ್ಲಾದೇಶ, ಪೂರ್ವ ಪಾಕಿಸ್ತಾನದಿಂದ ಪಲಾಯನ ಮಾಡಿದರು. ಅಲ್ಲಿಂದ ಕರವಾಳಿ ಪ್ರದೇಶವಾದ ಕೇಂದ್ರಪಾರ ಜಿಲ್ಲೆಯಲ್ಲಿ ಬಂದು ನೆಲೆಸಿದ್ದಾರೆ. ಇವರ ಜತೆಗೆ ಅನೇಕ ಕುಟುಂಬಗಳು ಇಲ್ಲಿ ಬಂದು ನೆಲೆಸಿದೆ.

ಆದರೆ ಇವರನ್ನು ಅಕ್ರಮ ವಲಸಿಗರು ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಅಲ್ಲಿನ  ಜನ ಆತಂಕದಲ್ಲೇ ಜೀವನ ನಡೆಸುತ್ತಿದ್ದರು. ಗಡೀಪಾರು ಮಾಡುವ ಭೀತಿಯು ಬಾಂಗ್ಲಾದೇಶದಿಂದ ಬಂದ 1,551 ಅಕ್ರಮ ವಲಸಿಗರಿಗೆ ಕಾಡಿತ್ತು. 2005 ರಲ್ಲಿ ವಿದೇಶಿಯರ ಕಾಯಿದೆ 1948 ರ ಅಡಿಯಲ್ಲಿ ಜಿಲ್ಲಾಡಳಿತದಿಂದ “ಕ್ವಿಟ್ ಇಂಡಿಯಾ” (ಭಾರತ ಬಿಟ್ಟು ತೊಲಗಿ) ನೋಟಿಸ್ ನೀಡಲಾಗಿತ್ತು. ನಮ್ಮಂತಹವರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಸಿಎಎ ಮೂಲಕ ಭಾರತ ಪೌರತ್ವ ನೀಡುವ ನರೇಂದ್ರ ಮೋದಿ ಸರ್ಕಾರ ಸರಿಯಾದ ಕೆಲಸವನ್ನು ಮಾಡಿದೆ.

ಇದೀಗ ಸಿಎಎ ಘೋಷಣೆಯಾದ ನಂತರ ಈ ಪ್ರದೇಶದಲ್ಲಿ ಸಂಭ್ರಮ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮಾತನಾಡಿದ ಆಶಾಲತಾ ಅವರು ನಮ್ಮ ಅಜ್ಜ 1948ರಲ್ಲಿ ಪೂರ್ವ ಪಾಕಿಸ್ತಾನದಿಂದ  ನಿರಾಶ್ರಿತರಾಗಿ ಹರಿಯಾಬಂಕ ಎಂಬ ಕಡಲತೀರದ ಗ್ರಾಮಕ್ಕೆ ಬಂದರು. ಆದರೆ 2005 ರಲ್ಲಿ, ಜಿಲ್ಲಾಡಳಿತವು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸಿಗರು ಎಂದು ನನಗೆ ಮತ್ತು ನನ್ನ ಕುಟುಂಬ ಸದಸ್ಯರ ಮೇಲೆ ಕಾನೂನುಬಾಹಿರವಾಗಿ ಕ್ವಿಟ್ ಇಂಡಿಯಾ ನೋಟಿಸ್‌ಗಳನ್ನು ನೀಡಿತ್ತು. ಆದರೆ ಇದೀಗ ಸಿಎಎ ಕಾಯ್ದೆ ನಮ್ಮ ಜೀವನಕ್ಕೆ ಹೊಸ ಬೆಳಕು ನೀಡಿದೆ ಎಂದು ಹೇಳಿದ್ದಾರೆ.

2015ರಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 3,987 ಬಾಂಗ್ಲಾದೇಶಿಗಳು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದರು. 1,649ಕ್ಕೂ ಹೆಚ್ಚು ನುಸುಳುಕೋರರು ಕೇಂದ್ರಪಾರಾದಲ್ಲಿ ತಂಗಿದ್ದಾರೆ, ಹಾಗೂ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ 1,112, ಮಲ್ಕಾನ್‌ಗಿರಿಯಲ್ಲಿ 655, ಭದ್ರಕ್‌ನಲ್ಲಿ 313, ಬಾಲಸೋರ್‌ನಲ್ಲಿ 150, ಬಾಲಸೋರ್‌ನಲ್ಲಿ 106, ನಬರಂಗಪುರದಲ್ಲಿ 106 ಮತ್ತು ಬರ್ಗಢ್‌ನಲ್ಲಿ ಇಬ್ಬರು ನೆಲೆಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ!

2005ರಲ್ಲಿ, ರಾಜ್ಯ ಸರ್ಕಾರವು ವಿದೇಶಿಯರ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಜಿಲ್ಲೆಯ 1551 ಬಾಂಗ್ಲಾದೇಶಿದಿಂದ ಬಂದ ಹಿಂದೂಗಳಿಗೆ “ಕ್ವಿಟ್ ಇಂಡಿಯಾ” ನೋಟೀಸ್ ನೀಡಿತ್ತು ಎಂದು ಮಹಾಕಾಲಪಾದ ಪಂಚಾಯತ್ ಸಮಿತಿ ಉಪಾಧ್ಯಕ್ಷ ಬಿಜಯ್ ಶುಕ್ಲಾ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2020 ರಲ್ಲಿ ಕಾನೂನಾಗಿ ರೂಪುಗೊಂಡ ನಂತರ, ಅಂದಿನ ಕೇಂದ್ರ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಅವರು ಜಿಲ್ಲೆಯಲ್ಲಿ ನೆಲೆಸಿರುವ ಬಾಂಗ್ಲಾದೇಶಿ ಹಿಂದೂ ನಿರಾಶ್ರಿತರನ್ನು ಭೇಟಿ ಮಾಡಿ ಅವರಿಗೆ ಭಾರತೀಯ ಪೌರತ್ವ ನೀಡುವ ಬಗ್ಗೆ ಭರವಸೆ ನೀಡಿದ್ದರು. ಸುಮಾರು 50,000 ಬಂಗಾಳಿ ಮಾತನಾಡುವ ಜನರು ಕೇಂದ್ರಪದ ಜಿಲ್ಲೆಯ ಕರಾವಳಿ ಪಾಕೆಟ್ಸ್ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು 1947 ರಲ್ಲಿ ಪೂರ್ವ ಪಾಕಿಸ್ತಾನದಿಂದ ಬಂದವರು ಮತ್ತು 1970ರಲ್ಲಿ ಬಾಂಗ್ಲಾದೇಶದಿಂದ ಬಂದವರು ಎಂದು ಹೇಳಲಾಗಿದೆ.

ಇನ್ನು ಹಿರಿಯ ಬಿಜೆಪಿ ನಾಯಕ ಬೈದ್ಯನಾಥ್ ಚಟರ್ಜಿ, ಹಿಂದೂ ನಿರಾಶ್ರಿತರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗುವುದು. ಕಳೆದ ಹಲವಾರು ದಶಕಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಮತ್ತು ಸರಿಯಾದ ದಾಖಲೆಗಳನ್ನು ಹೊಂದಿರುವ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರು ದೇಶದ ಪ್ರಜೆಗಳಾಗಿ ಉಳಿಯುತ್ತಾರೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ನುಸುಳಿರುವ ಮುಸ್ಲಿಮರು ಮಾತ್ರ ಆತಂಕಪಡಬೇಕು ಏಕೆಂದರೆ ಅವರನ್ನು ಗುರುತಿಸಿ ದೇಶದಿಂದ ಹೊರಹಾಕಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ