ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ: ಬಂಗಲೆ ಖಾಲಿ ಮಾಡಿ ಕೀ ಹಸ್ತಾಂತರಿಸಿದ ರಾಹುಲ್ ಗಾಂಧಿ

ಇಂದು (ಶನಿವಾರ) ಸಂಜೆ  ಮನೆ ಖಾಲಿ ಮಾಡಿ ಅಧಿಕಾರಿಗಳಿಗೆ ಕೀ ಹಸ್ತಾಂತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದಾರೆ.  2005 ರಿಂದ 12 ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರವರು

ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ: ಬಂಗಲೆ ಖಾಲಿ ಮಾಡಿ ಕೀ ಹಸ್ತಾಂತರಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ

Updated on: Apr 22, 2023 | 6:32 PM

ದೆಹಲಿ:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸದ ಸ್ಥಾನ ಕಳೆದುಕೊಂಡ ನಂತರ ದೆಹಲಿಯಲ್ಲಿರುವ (Delhi) ತಮ್ಮ ಅಧಿಕೃತ ನಿವಾಸ ತೊರೆದಿದ್ದಾರೆ. ಇಂದು (ಶನಿವಾರ) ಸಂಜೆ  ಮನೆ ಖಾಲಿ ಮಾಡಿ ಅಧಿಕಾರಿಗಳಿಗೆ ಕೀ ಹಸ್ತಾಂತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸತ್ಯ ಹೇಳಿದ್ದಕ್ಕೆ ನಾನು ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದಾರೆ.  2005 ರಿಂದ 12 ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ 52 ವರ್ಷದ ರಾಹುಲ್ ಗಾಂಧಿಯನ್ನು  ಗುಜರಾತ್‌ನ (Gujarat) ಸೂರತ್‌ನ ನ್ಯಾಯಾಲಯವು ದೋಷಿ ಎಂದು ಹೇಳಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಳೆದ ತಿಂಗಳು ಸಂಸತ್ತಿನ ಕೆಳಮನೆಯಿಂದ ಅನರ್ಹಗೊಳಿಸಲಾಯಿತು. 2019 ರ ಚುನಾವಣಾ ರ್ಯಾಲಿಯಲ್ಲಿ ರಾಹುಲ್, ಮೋದಿ ಸರ್​​ನೇಮ್ ಬಗ್ಗೆ ಹೇಳಿದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ರಾಜ್ಯದ ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಹಿನ್ನಡೆ ಅನುಭವಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ಮೇಲೆ ನನ್ನ  ವಾಗ್ದಾಳಿಗಾಗಿ ಆಡಳಿತಾರೂಢ ಬಿಜೆಪಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಯನಾಡಿನ ಮಾಜಿ ಸಂಸದರು ತಮ್ಮ ಲೋಕಸಭಾ ಸದಸ್ಯತ್ವವನ್ನು ಉಳಿಸಿಕೊಳ್ಳಲು ಸೂರತ್ ನ್ಯಾಯಾಲಯದ ಆದೇಶದ ವಿರುದ್ಧ ಈಗ ಗುಜರಾತ್ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.


ಹಿಂದೂಸ್ತಾನದ ಜನರು ನನಗೆ 19 ವರ್ಷಗಳ ಕಾಲ ಈ ಮನೆಯನ್ನು ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡಿದ್ದಕ್ಕಾಗಿ ತೆತ್ತಿರುವ ಬೆಲೆಯಾಗಿದೆ. ಸತ್ಯವನ್ನು ಮಾತನಾಡಿದ್ದಕ್ಕಾಗಿ ನಾನು ಯಾವುದೇ ಬೆಲೆಯನ್ನು ತೆರಲು ಸಿದ್ಧ ಎಂದು  ಹೊರಡುವ ಮುನ್ನ ಬಂಗಲೆಯ ಹೊರಗೆ ಮಾಧ್ಯಮದವರಲ್ಲಿ ಮಾತನಾಡಿದ ರಾಹುಲ್ ಹೇಳಿದ್ದಾರೆ.


10 ಜನಪಥ್‌ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತಾನು ಹೋಗುತ್ತಿರುವುದಾಗಿ ಅವರು ಹೇಳಿದ್ದು, ಸದ್ಯಕ್ಕೆ ಅಲ್ಲಿಯೇ ಉಳಿಯಲಿದ್ದಾರೆ. ರಾಹುಲ್ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಮನೆ ಖಾಲಿ ಮಾಡುವುದಕ್ಕೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಆರೋಪ ಪ್ರಕರಣ; ಪಶ್ಚಿಮ ಬಂಗಾಳದ ಕಾಲಿಯಗಂಜ್​​ನಲ್ಲಿ ಹಿಂಸಾಚಾರ

ಲೋಕಸಭೆಯ ಸೆಕ್ರೆಟರಿಯೇಟ್ ಮಾರ್ಚ್ 27 ರಂದು ರಾಹುಲ್ ಗಾಂಧಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ಎರಡು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದ ಶಾಸಕರನ್ನು ಅನರ್ಹಗೊಳಿಸುವ ನಿಯಮಗಳ ಪ್ರಕಾರ ಏಪ್ರಿಲ್ 22ರೊಳಗೆ ಅವರ ಬಂಗಲೆಯನ್ನು ಖಾಲಿ ಮಾಡುವಂತೆ ಹೇಳಿತ್ತು .

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ