ನನಗೆ ಗೊತ್ತು, ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ; ಮಮತಾ ಬ್ಯಾನರ್ಜಿ ದೃಢವಿಶ್ವಾಸ

|

Updated on: Apr 02, 2021 | 4:01 PM

‘ನನಗೆ ಗೊತ್ತು ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ಜೊತೆ ಟಿಎಂಸಿಯ 200 ಅಭ್ಯರ್ಥಿಗಳು ಗೆಲ್ಲಲೇಬೇಕು. ಹಾಗಾದರೆ ನಾವು ಮತ್ತೆ ಸರ್ಕಾರ ರಚಿಸಲು ಗೆಲುವು ಅತ್ಯಗತ್ಯವಾಗಿದೆ. ಹಾಗಾಗಿ ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸಿ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದರು. 

ನನಗೆ ಗೊತ್ತು, ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ;  ಮಮತಾ ಬ್ಯಾನರ್ಜಿ ದೃಢವಿಶ್ವಾಸ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಂದಹಾಸ
Follow us on

ಕೊಲ್ಕತ್ತಾ: ದೂರದ ಹೈದರಾಬಾದ್​ನಿಂದ ಆಗಮಿಸಿದ ಓರ್ವ ರಾಜಕೀಯ ವ್ಯಕ್ತಿ ಪಶ್ಚಿಮ ಬಂಗಾಳದ ಸಾರ್ವಜನಿಕರ ಬಳಿ ಮತ ಹಾಕುವಂತೆ ವಿನಂತಿ ಮಾಡುತ್ತಾನೆ. ಆದರೆ ಆತ ಬಿಜೆಪಿ ಬಳಿ ಒಳ ಒಪ್ಪಂದ ಮಾಡಿಕೊಂಡು ಹಣ ತೆಗೆದುಕೊಂಡು ಕೆಟ್ಟ ರಾಜಕೀಯ ಮಾಡಿದ್ದಾನೆ. ಆತನನ್ನು ಪಶ್ಚಿಮ ಬಂಗಾಳದಲ್ಲಿ ಬಿಟ್ಟುಕೊಳ್ಳಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಾದುದ್ದೀನ್ ಓವೈಸಿ ವಿರುದ್ಧ ಹರಿಹಾಯ್ದರು. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು ಇನ್ನುಳಿದ ಆರು ಹಂತದ ಮತದಾನಕ್ಕೂ ಮುನ್ನ ಭಾರಿ ಪ್ರಚಾರ ನಡೆಸುತ್ತಿದ್ದಾರೆ.

‘ನನಗೆ ಗೊತ್ತು ನಂದಿಗ್ರಾಮ ಕ್ಷೇತ್ರದಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನನ್ನ ಜೊತೆ ಟಿಎಂಸಿಯ 200 ಅಭ್ಯರ್ಥಿಗಳು ಗೆಲ್ಲಲೇಬೇಕು. ಹಾಗಾದರೆ ನಾವು ಮತ್ತೆ ಸರ್ಕಾರ ರಚಿಸಲು ಗೆಲುವು ಅತ್ಯಗತ್ಯವಾಗಿದೆ. ಹಾಗಾಗಿ ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸಿ ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿದರು.

ಪದೇ ಪದೇ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕಿಸುತ್ತಿರುವ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳದಲ್ಲಿ ಮೊದಲ ಮತ್ತು ಎರಡನೇ ಹಂತದ ಮತದಾನ ಈಗಾಗಲೇ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ಮೂಂದಿನ ಹಂತಗಳ ಚುನಾವಣೆಗೆ ಭರ್ಜರಿ ಪ್ರಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಿರತವಾಗಿವೆ. ನಿನ್ನೆಯಷ್ಟೇ (ಏಪ್ರಿಲ್ 1) ಟಿಎಂಸಿ ಮತ್ತು ಸಿಎಂ ಮಮತಾರನ್ನು ಪ್ರದಾನಿ ಮೋದಿ ಟೀಕಿಸಿ ಚುನಾವಣಾ ಭಾಷಣ ಮಾಡಿದ್ದಾರೆ. ಇತ್ತೀಚಿಗೆ ನಿಧನರಾದ ಬಿಜೆಪಿ ಪಕ್ಷದ ಕಾರ್ಯಕರ್ತನ ತಾಯಿಯನ್ನು ನೆನೆಸಿಕೊಂಡ ಅವರು,  ಟಿಎಂಸಿ ಪಕ್ಷದ ಕಾರ್ಯಕರ್ತರಿಂದ ತೊಂದರೆಗೀಡಾದ ಪಶ್ಚಿಮ ಬಂಗಾಳದ ಸಾವಿರಾರು ತಾಯಂದಿರ, ಸಹೋದರಿಯರ ಪ್ರತೀಕವೇ ಶೋಭಾ ಮಜೂಮ್ದಾರ್.

ಅವರ ಸಾವಿಗೆ ಕಾರಣವಾದವರ ವಿರುದ್ಧ ಬಂಗಾಳದ ಮತದಾರರು ನಿರ್ಧಾರ ತಳೆಯಬೇಕಿದೆ ಎಂದು ಹೇಳಿದ್ದರು. ‘ಮಮತಾ ಬ್ಯಾನರ್ಜಿಯವರೇ, ನಿಮಗೆ ಯಾರಿಗಾದರೂ ಸಮಸ್ಯೆ ಉಂಟುಮಾಡಬೇಕು ಎಂದಿದ್ದರೆ, ನನಗೆ ಮಾಡಿ. ಅದನ್ನು ಬಿಟ್ಟು ಜನಸಾಮಾನ್ಯರಿಗೆ ತೊಂದರೆ ನೀಡಬೇಡಿ. ರಾಮಕೃಷ್ಣ ಪರಮಹಂಸ, ಚೈತನ್ಯ ಮಹಾಪ್ರಭು ಮತ್ತು ಸ್ವಾಮಿ ವಿವೇಕಾನಂದ ಮೊದಲಾದ ವ್ಯಕ್ತಿತ್ವಗಳ ಹಿನ್ನೆಲೆಯ ಪಶ್ಚಿಮ ಬಂಗಾಳದ ಸಾಮಾನ್ಯ ಜನರಿಗೆ ಸಮಸ್ಯೆ ಕೊಡಲು ನಾನು ಬಿಡುವುದಿಲ್ಲ’ ಎಂದು ಪ್ರಧಾನಿ ಮೋದಿ ನಿನ್ನೆಯಷ್ಟೇ ಗುಡುಗಿದ್ದರು.

ಮೊದಲ ಹಂತದ ಚುನಾವಣೆಯ ವೇಳೆಯಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಹೊರಗಿನ ನಾಯಕರಿಗೆ ಪತ್ರ ಬರೆದು ಬೆಂಬಲ ಕೋರಿದ್ದರು. ಆದರೆ  ಕೆಲ ದಿನಗಳ ಮುನ್ನ ಪಶ್ಚಿಮ ಬಂಗಾಳದ ಹೊರಗಿನ ಕೆಲವು ನಾಯಕರನ್ನು  ಮಮತಾ ಬ್ಯಾನರ್ಜಿ ಹೊರಗಿನವರು ಎಂದು ದೂಷಿಸಿದ್ದರು.  ಹೀಗೆ ಪತ್ರ ಬರೆದಿದ್ದ ಅವರೇ, ಸ್ವತಃ ಪಶ್ಚಿಮ ಬಂಗಾಳದ ಹೊರಗಿನ ನಾಯಕರ ಬೆಂಬಲ ಕೋರುವ ಮೂಲಕ ತಮ್ಮ ದ್ವಂದ್ವ ಮುಖವನ್ನು ಸಾಬೀತುಪಡಿಸಿದರು ಎಂದು ಪ್ರಧಾನಿ ಮೋದಿ ಟಿಎಂಸಿ ಮುಖ್ಯಸ್ಥೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದರು

ಇದನ್ನೂ ಓದಿ: ತಮಿಳುನಾಡಿನ ಮದುರೈ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

West Bengal, Assam Voter Turnout: ಪಶ್ಚಿಮ ಬಂಗಾಳದಲ್ಲಿ ಶೇ 80.43, ಅಸ್ಸಾಂನಲ್ಲಿ ಶೇ 77 ಮತದಾನ

(I Know I will win in Nandigram says West Bengal CM Mamata Banerjee)

Published On - 3:50 pm, Fri, 2 April 21