ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿ ಇದ್ದಾರೆ, ನನ್ನಲ್ಲಿ ಅಲ್ಲ: ಪತ್ರಕರ್ತರ ಪ್ರಶ್ನೆಗೆ ವಯನಾಡ್ ಸಂಸದರ ಉತ್ತರ

| Updated By: ರಶ್ಮಿ ಕಲ್ಲಕಟ್ಟ

Updated on: Nov 29, 2022 | 2:50 PM

ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ, ನನ್ನಲ್ಲಿ ಅಲ್ಲ. ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಲು ಪ್ರಯತ್ನಿಸಿ. ನೋಡಿ ಯಾರೋ ಚಪ್ಪಾಳೆ ತಟ್ಟುತ್ತಿದ್ದಾರೆ. ನಿಮಗೆ ಅರ್ಥವಾಯಿತೇ?. ಇದು ನಮ್ಮ ದೇಶದ ತತ್ವಶಾಸ್ತ್ರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು

ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿ ಇದ್ದಾರೆ, ನನ್ನಲ್ಲಿ ಅಲ್ಲ: ಪತ್ರಕರ್ತರ ಪ್ರಶ್ನೆಗೆ ವಯನಾಡ್ ಸಂಸದರ ಉತ್ತರ
ರಾಹುಲ್ ಗಾಂಧಿ
Follow us on

ದೆಹಲಿ: 2024 ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಜನರ ಗಮನ ಸೆಳೆಯಲು ಕಾಂಗ್ರೆಸ್ ಮಾಡಿದ ಪ್ರಯತ್ನ ಎಂದು ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಬಿಂಬಿಸಲಾಗುತ್ತಿದೆ. ಆದರೆ ಇದು ನನ್ನ ಪ್ರಚಾರ ಕಾರ್ಯಕ್ರಮ ಅಲ್ಲ, ಇದು ನನ್ನ ಬಗ್ಗೆ ಅಲ್ಲವೇ ಅಲ್ಲ ಎಂದು ವಯನಾಡು ಸಂಸದ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ನಾನು ರಾಹುಲ್ ಗಾಂಧಿಯನ್ನು ವರ್ಷಗಳ ಹಿಂದೆ ಬಿಟ್ಟುಬಿಟ್ಟೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ, ನನ್ನಲ್ಲಿ ಅಲ್ಲ. ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಲು ಪ್ರಯತ್ನಿಸಿ. ನೋಡಿ ಯಾರೋ ಚಪ್ಪಾಳೆ ತಟ್ಟುತ್ತಿದ್ದಾರೆ. ನಿಮಗೆ ಅರ್ಥವಾಯಿತೇ?. ಇದು ನಮ್ಮ ದೇಶದ ತತ್ವಶಾಸ್ತ್ರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಅರ್ಥ ಮಾಡಿಕೊಂಡರೆ ನಿಮಗೆ ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಹುಲ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಭಾರತದ ಜನರಿಂದ ಯಾವ ದೃಷ್ಟಿಕೋನವನ್ನು ಪಡೆಯುತ್ತಿದ್ದಾರೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಾಹುಲ್ ಈ ರೀತಿ ಉತ್ತರಿಸಿದ್ದಾರೆ. ಯಾತ್ರೆಯಿಂದ ಸಕಾರಾತ್ಮವಾಗಿ ಸಿಕ್ಕಿದ ಸಂಗತಿ ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಇದು ನನಗೆ ಅಪಾರ ತಾಳ್ಮೆಯನ್ನು ಕಲಿಸಿದೆ. ಮೊದಲು ನಾನು ಒಂದು ಅಥವಾ ಎರಡು ಗಂಟೆಗಳ ಕಾಲ ಕಿರಿಕಿರಿಗೊಳ್ಳುತ್ತಿದ್ದೆ. ಈಗ ನಾನು ಎಂಟು ಗಂಟೆಗಳವರೆಗೆ ತಾಳ್ಮೆಯಿಂದ ಇರುತ್ತೇನೆ ಎಂದಿದ್ದಾರೆ.

ಮತ್ತೊಬ್ಬ ವರದಿಗಾರ ಈ ಹಿಂದೆಯೇ ಈ ರೀತಿಯ ಸಾಮೂಹಿಕ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಬೇಕಿತ್ತು ಎಂದು ಅನಿಸಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಹುಲ್, ಎಲ್ಲವೂ ಅದರ ಸಮಯಕ್ಕೆ ಸರಿಯಾಗಿ ನಡೆಯುತ್ತದೆ, ಸಮಯ ಬಂದಾಗ ಅದು ಕೆಲಸ ಮಾಡುತ್ತದೆ, ಅದು ಮೊದಲು ಆಗುವುದಿಲ್ಲ, ನಾನು 25-26 ವರ್ಷದವನಾಗಿದ್ದಾಗ ಅಂತಹ ಯಾತ್ರೆಯ ಬಗ್ಗೆ ಯೋಚಿಸಿದ್ದೆ. ನಾನು ಇದನ್ನು ಒಂದು ವರ್ಷದ ಹಿಂದೆ ಈ ಬಗ್ಗೆ ಯೋಚಿಸಿದ್ದೆ ಜೈರಾಮ್ (ರಮೇಶ್) ಜೀ ಅವರಿಗೂ ತಿಳಿದಿಲ್ಲ. ನಂತರ ಕೋವಿಡ್ ಅಥವಾ ಇತರ ಕಾರಣಗಳಿಂದ ಅದು ಆಗಲಿಲ್ಲ. ಹಾಗಾಗಿ ಯಾತ್ರೆಗೆ ಈಗ ಉತ್ತಮ ಸಮಯ ಎಂದಿದ್ದಾರೆ ರಾಹುಲ್.

ಆರ್‌ಎಸ್‌ಎಸ್-ಬಿಜೆಪಿಯಿಂದ ಹಾನಿಗೊಳಗಾಗುತ್ತಿರುವ ಮತ್ತು ನಾಶವಾಗುತ್ತಿರುವ ಭಾರತದ ಕಲ್ಪನೆಯ ಪರವಾಗಿ ನಿಲ್ಲಲು ಅವರು ಈ ಅಭಿಯಾನವನ್ನು “ತಪಸ್ಯ (ತಪಸ್ಸು)” ಎಂದು ಕರೆದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರಳಲು ನಿರಾಕರಿಸುವುದರೊಂದಿಗೆ ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಅವರ ಪಾಡಿಗೆ ಬಿಟ್ಟಿರುವುದನ್ನು ಜನರು ನೋಡಿದ್ದಾರೆ

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ವಾರಗಳ ಮೊದಲು ಪ್ರಾರಂಭವಾದ ಅವರ ಯಾತ್ರೆಯ ಮಧ್ಯದಲ್ಲಿ ರಾಹುಲ್ ತಾನು ಈ ಸ್ಪರ್ಧೆಯಲ್ಲಿ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತೊರೆದಿರುವ ನಾಯಕರ ಪ್ರಶ್ನೆಗೆ ಉತ್ತರಿಸಲು ರಾಹುಲ್ ನಿರಾಕರಿಸಿದ್ದು ಈ ಪ್ರಶ್ನೆಯನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ (ಮಲ್ಲಿಕಾರ್ಜುನ ಖರ್ಗೆ) ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ನಾಯಕತ್ವಕ್ಕೆ ಕೇಳಬೇಕಾಗಿದೆ. ಆದರೆ ನನ್ನ ಅಭಿಪ್ರಾಯದಲ್ಲಿ ಚುನಾಯಿತ ಸರ್ಕಾರವನ್ನು ಬೀಳಿಸಲು ಹಣ ಕೊಟ್ಟು ಖರೀದಿಸಿದ್ದರೆ ನಾವು ಅವರ (ಆ ಶಾಸಕರು) ಮೇಲೆ ನಂಬಿಕೆ ಇಡಬಾರದು ಎಂದಿದ್ದಾರೆ.