ನಾನು ಕಾಶ್ಮೀರಿ ಪಂಡಿತ್, ವೈಷ್ಣೋ ದೇವಿ ಭೇಟಿ ನಂತರ ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ: ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 10, 2021 | 4:26 PM

Rahul Gandhi: ನಾನು ಕಾಶ್ಮೀರಿ ಪಂಡಿತ್ ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ್. ಇಂದು ಬೆಳಿಗ್ಗ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿತು. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ನನಗೆ ಹೇಳಿದರು, ಆದರೆ ಬಿಜೆಪಿ ಏನೂ ಮಾಡಿಲ್ಲ

ನಾನು ಕಾಶ್ಮೀರಿ ಪಂಡಿತ್, ವೈಷ್ಣೋ ದೇವಿ ಭೇಟಿ ನಂತರ ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ: ರಾಹುಲ್ ಗಾಂಧಿ
ಜಮ್ಮು ಕಾಶ್ಮೀರದಲ್ಲಿ ರಾಹುಲ್ ಗಾಂಧಿ (ಕೃಪೆ: ಕಾಂಗ್ರೆಸ್ ಟ್ವಿಟರ್ ಖಾತೆ)
Follow us on

ಜಮ್ಮು: ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಾನು ಕಾಶ್ಮೀರಿ ಪಂಡಿತ್, ಮಾತಾ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನಾನು ಮನೆಯ ವಾತಾವರಣ ಅನುಭವಿಸುತ್ತಿದ್ದೇನೆ ಎಂದು ಹೇಳಿದರು. “ನಾನು ಮನೆಗೆ ಬಂದಿದ್ದೇನೆ ಎಂದು ನನಗೆ ಅನಿಸುತ್ತದೆ. ನನ್ನ ಕುಟುಂಬವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸುದೀರ್ಘ ಸಂಬಂಧ ಹೊಂದಿದೆ “ಎಂದು ರಾಹುಲ್ ಶುಕ್ರವಾರ ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

“ನಾನು ಕಾಶ್ಮೀರಿ ಪಂಡಿತ್ ಮತ್ತು ನನ್ನ ಕುಟುಂಬ ಕಾಶ್ಮೀರಿ ಪಂಡಿತ್. ಇಂದು ಬೆಳಿಗ್ಗ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿತು. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಅವರು ನನಗೆ ಹೇಳಿದರು, ಆದರೆ ಬಿಜೆಪಿ ಏನೂ ಮಾಡಿಲ್ಲ.


ನನ್ನ ಕಾಶ್ಮೀರಿ ಪಂಡಿತ್ ಸಹೋದರರಿಗೆ ನಾನು ಏನಾದರೂ ಮಾಡುವುದಾಗಿ ಭರವಸೆ ನೀಡುತ್ತೇ ನೆ ಎಂದು ರಾಹುಲ್ ಗಾಂಧಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ನಂತರ ಅವರು ಲಡಾಖ್‌ಗೆ ಭೇಟಿ ನೀಡಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಆದರೆ ನನಗೆ ತುಂಬಾ ನೋವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಹೋದರತ್ವವಿದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಆ ಸಹೋದರತ್ವದ ಬಂಧವನ್ನು ಮುರಿಯಲು ಪ್ರಯತ್ನಿಸುತ್ತಿವೆ ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ತಮ್ಮ ಕೈಯನ್ನು ಮೇಲಕ್ಕೆತ್ತಿ ತನ್ನ ಅಂಗೈಯನ್ನು ಜನಸಮೂಹಕ್ಕೆ ತೋರಿಸಿ “ಕೈ ಎಂದರೆ ಹೆದರಬೇಡಿ. ನೀವು ಶಿವ ಮತ್ತು ವಹೇ ಗುರುಗಳ ಚಿತ್ರಗಳಲ್ಲಿ ಕೈ ನೋಡಬಹುದು.

ಬಿಜೆಪಿ ಮೇಲೆ ಟೀಕಾ ಪ್ರಹಾರ ಮಾಡಿದ ರಾಹುಲ್ ಗಾಂಧಿ ಬಿಜೆಪಿ ಜಮ್ಮು ಮತ್ತು ಕಾಶ್ಮೀರವನ್ನು ದುರ್ಬಲಗೊಳಿಸಿದೆ. “ನಿಮ್ಮ ರಾಜ್ಯವನ್ನು ನಿಮ್ಮಿಂದ ಕಿತ್ತುಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ತನ್ನ ರಾಜ್ಯವನ್ನು ಮರಳಿ ಪಡೆಯಬೇಕು.

ಜಮ್ಮು ವಿಮಾನ ನಿಲ್ದಾಣದಲ್ಲಿ ರಾಹುಲ್ ಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಗುರುವಾರ ರಾಹುಲ್ ಗಾಂಧಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕತ್ರಾ ಬೇಸ್‌ಕ್ಯಾಂಪ್‌ನಿಂದ ತ್ರಿಕೂಟ ಬೆಟ್ಟಗಳ ಮೂಲಕ ಕಾಲ್ನಡಿಗೆಯಲ್ಲಿ “13-ಕಿಮೀ ದೂರದ ಯಾತ್ರೆ” ಕೈಗೊಂಡ ನಂತರ ಅವರು ದೇಗುಲವನ್ನು ತಲುಪಿದರು ಎಂದು ಪಕ್ಷದ ನಾಯಕರು ಹೇಳಿದರು.

ರಾಹುಲ್ ಗಾಂಧಿ ಅವರು ಭವನದಲ್ಲಿ ಹಿರಿಯ ಅರ್ಚಕರನ್ನು ಮತ್ತು ಆರತಿ ಅರ್ಚಕರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ದೇಗುಲಕ್ಕೆ ಚಾರಣದ ಸಮಯದಲ್ಲಿ,ಮಾಜಿ ಕಾಂಗ್ರೆಸ್ ಅಧ್ಯಕ್ಷರ ಮೀರ್ ಸೇರಿದಂತೆ ಹಲವಾರು ನಾಯಕರು ರಾಹುಲ್ ಜತೆಗಿದ್ದರು.

‘ಜೈ ಮಾತಾ ದಿ’ ಎಂದು ಕೂಗಲು ಹೇಳಿದ ರಾಹುಲ್ ಗಾಂಧಿ
ಶುಕ್ರವಾರ ಜಮ್ಮುವಿನ ನಡೆದ ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ‘ಜೈ ಮಾತಾ ದಿ ‘ ಘೋಷಣೆ ಮಾಡುವಂತೆ ಜನರಿಗೆ ಹೇಳಿದ್ದಾರೆ.


“ಜೈ ಮಾತಾ ದಿ,” ಎಂದು ಮುಗುಳ್ನಗೆಯೊಂದಿಗೆ ಹೇಳಿದಾಗ ರಾಹುಲ್ ಬಯಸಿದ ಪ್ರತಿಕ್ರಿಯೆಯನ್ನು ಬರಲಿಲ್ಲ. ಆನಂತರ ರಾಹುಲ್ ಸ್ವಲ್ಪ ಜೋರಾಗಿ “ಬೊಲಿಯೆ, ಬೊಲಿಯೆ (ಹೇಳಿ, ಹೇಳಿ)” ಎಂದು ಹೇಳಿದರು.
ಜಮ್ಮುವಿಗೆ ಎರಡು ದಿನಗಳ ಭೇಟಿ ನೀಡಿದ ರಾಹುಲ್ ಗುರುವಾರ ಕಾತ್ರಾದಿಂದ ವೈಷ್ಣೋ ದೇವಿ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರು.

ಕಾಂಗ್ರೆಸ್ ಸಂಸದರು 14 ಕಿಮೀ ದೂರವನ್ನು ಯಾತ್ರಾರ್ಥಿಗಳ ಜೊತೆಯಲ್ಲಿ ದೇಗುಲಕ್ಕೆ ಹೋಗುತ್ತಿರುವುದು ವಿಡಿಯೊದಲ್ಲಿ ಕಾಣುತ್ತದೆ ಕಂಡುಬಂದಿದೆ. ಹೀಗೆ ಹೋಗುವಾಗ ಪಕ್ಷದ ಧ್ವಜಗಳನ್ನು ಹಿಡಿದಿರುವ ಕಾಂಗ್ರೆಸ್ ಕಾರ್ಯಕರ್ತರು ಹಾದಿಯಲ್ಲಿ ಸಾಲುಗಟ್ಟಿ ನಿಂತಿದ್ದರು.


“ನಾನು ಮಾತೆಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿ ಯಾವುದೇ ರಾಜಕೀಯ ಟೀಕೆಗಳನ್ನು ಮಾಡಲು ಬಯಸುವುದಿಲ್ಲ” ಎಂದು ರಾಹುಲ್ ಗಾಂಧಿ ಸುದ್ದಿಗಾರರಲ್ಲಿ ಹೇಳಿದ್ದಾರೆ. ತಮ್ಮ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಲು ಮಾಧ್ಯಮಗಳಿಗೆ ಅವಕಾಶವಿರಲಿಲ್ಲ.

ಸಂಸದರು ಯಾತ್ರಿಕರೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೊಗಳನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.
ಹಿಂದಿನ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ ಆರ್ಟಿಕಲ್ 370 ರ ಆಗಸ್ಟ್ 2019 ರಲ್ಲಿ ರದ್ದಾದ ನಂತರ ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಅವರ ಎರಡನೇ ಭೇಟಿಯಾಗಿದೆ.

ಪ್ರಮುಖ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್ ನಾಯಕನ ಧಾರ್ಮಿಕತೆಯ ಪ್ರದರ್ಶನ ಮಾಡುತ್ತಿದ್ದು ಅವರ ಬ್ರಾಹ್ಮಣ ಪೂರ್ವಜರ ದೇವಸ್ಥಾನ ಭೇಟಿಗ ನೀಡುತ್ತಿದ್ದಾರೆ ಎಂದು ರಾಜಕೀಯ ವಿಮರ್ಶಕರು ರಾಹುಲ್ ನಡೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೇರಳದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಕೇಂದ್ರ ಮತ್ತು ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ ನಂತಹ ಕೆಲವು ಪಕ್ಷಗಳು ಈ ಹಿಂದೆ ಇದೇ ಪ್ರಯತ್ನಗಳನ್ನು “ಮೃದು ಹಿಂದುತ್ವ” ಮತ್ತು ಬಿಜೆಪಿ ಜತೆ ಹೊಂದಿಕೆಯಾಗಲಿರುವ ದುರ್ಬಲ ಪ್ರಯತ್ನ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bhabanipur Bypoll: ಭವಾನಿಪುರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ

(I’m a Kashmiri Pandit and my family is Kashmiri Pandit I feel I have come home says Rahul Gandhi in Jammu)