ರಾಜ್ಯದ ಜನರು ಆಶೀರ್ವದಿಸಿದರೆ ನಾನು ಆ ದೆಹಲಿ ಕೋಟೆಯನ್ನೂ ಭೇದಿಸಬಲ್ಲೆ: ತೆಲಂಗಾಣ ಸಿಎಂ ಕೆಸಿಆರ್​

| Updated By: Lakshmi Hegde

Updated on: Feb 12, 2022 | 2:01 PM

ಕೇಂದ್ರ ಬಿಜೆಪಿ ಸರ್ಕಾರದ ಯಾವ ಪಿತೂರಿ, ತಂತ್ರಗಾರಿಕೆಗೂ ನಮ್ಮ ತೆಲಂಗಾಣ ಸರ್ಕಾರ ಬಲಿಯಾಗುವುದಿಲ್ಲ. ಆ ಸರ್ಕಾರವನ್ನೇ ಕಿತ್ತೊಗೆಯುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ ಎಂದು ಕೆಸಿಆರ್​ ಹೇಳಿದ್ದಾರೆ.

ರಾಜ್ಯದ ಜನರು ಆಶೀರ್ವದಿಸಿದರೆ ನಾನು ಆ ದೆಹಲಿ ಕೋಟೆಯನ್ನೂ ಭೇದಿಸಬಲ್ಲೆ: ತೆಲಂಗಾಣ ಸಿಎಂ ಕೆಸಿಆರ್​
ಕೆ ಚಂದ್ರಶೇಖರ್ ರಾವ್
Follow us on

ತೆಲಂಗಾಣ ರಾಜ್ಯದ ಜನರ ಸಮಸ್ಯೆಗಳನ್ನು ಪರಿಹರಿಸಲು, ಅವರ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಸರ್ಕಾರವನ್ನು ಕೇಂದ್ರದಿಂದ ಕಿತ್ತೊಗೆಯಲು, ತಾವು ರಾಷ್ಟ್ರ ರಾಜಕಾರಣ ಪ್ರವೇಶಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ (KCR)​ ತಿಳಿಸಿದ್ದಾರೆ. ನರೇಂದ್ರ ಮೋದಿಯವರೇ ಎಚ್ಚರದಿಂದ ಇರಿ, ನಾನು ಈ ತೆಲಂಗಾಣದ ಪುತ್ರ. ನಿಮ್ಮ ಯಾವುದೇ ಬೆದರಿಕೆಗಳಿಗೂ ಬಗ್ಗದ ಹುಲಿ ಎಂದು ಕೆಸಿಆರ್ ತಿಳಿಸಿದ್ದಾರೆ. ಜನಗಾಂವ್​​ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಕಚೇರಿ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ಉದ್ಯಮಿಗಳಾದ ನೀರವ್​ ಮೋದಿ, ವಿಜಯ್​ ಮಲ್ಯಾ ನಮ್ಮ ದೇಶದಲ್ಲಿ ಲಕ್ಷ-ಕೋಟಿ ರೂಪಾಯಿ ಕೊಳ್ಳೆ ಹೊಡೆದು ವಿದೇಶಕ್ಕೆ ಓಡಿ ಹೋದರು.  ಅವರಿಗೆಲ್ಲ ಸಹಾಯ ಮಾಡಿದ್ದು ಇದೇ ನರೇಂದ್ರ ಮೋದಿ ಸರ್ಕಾರ ಎಂದು ಆರೋಪ ಮಾಡಿದರು.

ಕೇಂದ್ರ ಬಿಜೆಪಿ ಸರ್ಕಾರದ ಯಾವ ಪಿತೂರಿ, ತಂತ್ರಗಾರಿಕೆಗೂ ನಮ್ಮ ತೆಲಂಗಾಣ ಸರ್ಕಾರ ಬಲಿಯಾಗುವುದಿಲ್ಲ. ಆ ಸರ್ಕಾರವನ್ನೇ ಕಿತ್ತೊಗೆಯುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ. ನಾನು ರಾಷ್ಟ್ರಮಟ್ಟದಲ್ಲಿ ಹೋರಾಡುತ್ತೇನೆ ಮತ್ತು ಗುಣಾತ್ಮಕ ಬದಲಾವಣೆಗಳನ್ನು ತರುತ್ತೇನೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಸರ್ಕಾರ ಮುಂದಾಗದೆ ಇದ್ದರೆ, ನಾವೂ ಸುಮ್ಮನೆ ಇರುವುದಿಲ್ಲ. ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ತರ ನೋಡಿ, ಸಮಸ್ಯೆಗಳನ್ನು ಬಗೆಹರಿಸುವ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ತೆಲಂಗಾಣ ಜನರ ಆಶೀರ್ವಾದವಿದ್ದರೆ ನಾನು ಏನೂ ಮಾಡಲು ಸಿದ್ಧ. ರಾಷ್ಟ್ರಮಟ್ಟದ ರಾಜಕೀಯದಲ್ಲಿ ಹೋರಾಡುತ್ತೇನೆ. ಇಲ್ಲಿನ ಜನರು ನನ್ನ ಬೆನ್ನ ಹಿಂದೆ ಇದ್ದು, ಬೆಂಬಲ ನೀಡಿದರೆ ಆ ದೆಹಲಿ ಕೋಟೆಯನ್ನೂ ನಾನು ಬೇಧಿಸಬಲ್ಲೆ ಎಂದು ಹೇಳಿದ ಕೆ.ಚಂದ್ರಶೇಖರ್​ ರಾವ್​,  ಕೃಷಿ ಸುಧಾರಣೆ ಹೆಸರಲ್ಲಿ ಮೋದಿ ಸರ್ಕಾರ ಕೃಷಿ ಪಂಪ್​​ಸೆಟ್​ಗಳಿಗೂ ವಿದ್ಯುತ್​ ಮೀಟರ್​ ಅಳವಡಿಸಲು ಯತ್ನಿಸುತ್ತಿದೆ. ಆದರೆ ನೀವು ನನ್ನನ್ನು ಕೊಂದರೂ ನಾನು ವಿದ್ಯುತ್​ ಮೀಟರ್​ ಅಳವಡಿಸುವುದಿಲ್ಲ ಎಂದು ಹೇಳಿದರು.

ನಮ್ಮ ಟಿಆರ್​ಎಸ್​ ಪಕ್ಷ ರಾಜ್ಯಕ್ಕಾಗಿ ಹೋರಾಡುತ್ತದೆ. ತೆಲಂಗಾಣ ಅಭಿವೃದ್ಧಿಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗುವುದಿಲ್ಲ. ಈ ರಾಜ್ಯದ ಜನರಿಗೆ ಕುಡಿಯಲು ಮತ್ತು ನೀರಾವರಿಗೆ ಸಾಕಷ್ಟು ನೀರು ಒದಗಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದೆ. ವಿದ್ಯುತ್​ ಕೊರತೆಯನ್ನೂ ನೀಗಿಸಿದೆ. ರೈತ ಬಂಧು ಯೋಜನೆಯಡಿ ಎಲ್ಲ ರೈತರಿಗೂ ಅಗತ್ಯ ಸೌಕರ್ಯಗಳನ್ನು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತೆಲುಗು ಚಿತ್ರರಂಗದ ಡ್ರಗ್ಸ್​ ಕೇಸ್​ಗೆ ಸಿಕ್ತು ಟ್ವಿಸ್ಟ್​; ಸ್ಟಾರ್ ನಟ-ನಟಿಯರಿಗೆ ಮತ್ತೆ ಸಂಕಷ್ಟ ಶುರು