AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row: ‘ಹಿಜಾಬ್ ವಿವಾದದ ಕುರಿತು ವಿದೇಶಗಳ ಪ್ರೇರೇಪಿತ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ’- ವಿದೇಶಾಂಗ ಸಚಿವಾಲಯ

MEA on Hijab Row: ಹಿಜಾಬ್ ವಿಚಾರದ ಕುರಿತಂತೆ ಹಲವು ದೇಶಗಳು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿವೆ. ಇಂದು ಅಮೇರಿಕಾದ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ಟ್ವೀಟ್ ಮಾಡಿ ಇದೇ ವಿಚಾರ ಪ್ರಸ್ತಾಪಿಸಿದ್ದರು. ಇದೀಗ ಭಾರತದ ವಿದೇಶಾಂಗ ಸಚಿವಾಲಯವು ಇಂತಹ ಹೇಳಿಕೆಗಳ ಕುರಿತು ಪ್ರತಿಕ್ರಿಯೆ ನೀಡಿದೆ.

Hijab Row: ‘ಹಿಜಾಬ್ ವಿವಾದದ ಕುರಿತು ವಿದೇಶಗಳ ಪ್ರೇರೇಪಿತ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ’- ವಿದೇಶಾಂಗ ಸಚಿವಾಲಯ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 12, 2022 | 3:06 PM

Share

ನವದೆಹಲಿ: ಕರ್ನಾಟಕದ ಹಿಜಾಬ್ ವಿವಾದಕ್ಕೆ (Hijab Row) ವಿದೇಶಗಳ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಸಮವಸ್ತ್ರ ವಿವಾದ ಕರ್ನಾಟಕ ಹೈಕೋರ್ಟ್​ನಲ್ಲಿದೆ. ವಿವಾದ ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಯಲಿದೆ. ಹಿಜಾಬ್ ವಿವಾದಕ್ಕೆ ಬೇರೆಯವರ ಪ್ರೇರೆಣೆಯಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಅಂತಹ ಪ್ರೇರೇಪಿತ ಹೇಳಿಕೆಗಳನ್ನ ನಾವು ಸ್ವಾಗತಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ (Ministry of External Affairs) ವಕ್ತಾರ ಅರಿಂದಾಮ್ ಬಗ್ಚಿ (Arindam Bagchi) ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೂ ಮುನ್ನ ರಾಜ್ಯದ ಹಿಜಾಬ್ ವಿವಾದಕ್ಕೆ ಅಮೇರಿಕಾದ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿ ರಶಾದ್ ಹುಸೇನ್ ಟ್ವೀಟ್ ಮಾಡಿ ಪ್ರತಿಕ್ರಿಯೆ ಹಂಚಿಕೊಂಡಿದ್ದರು. ಅವರು ತಮ್ಮ ಟ್ವೀಟ್​ನಲ್ಲಿ, ಧಾರ್ಮಿಕ ಉಡುಗೆಯ ಆಯ್ಕೆ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸೇರಿದೆ. ಕರ್ನಾಟಕ ರಾಜ್ಯ ಧಾರ್ಮಿಕ ಉಡುಗೆಯನ್ನ ನಿರ್ಧರಿಸಬಾರದು. ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಮಹಿಳೆಯರು, ಹುಡುಗಿಯರನ್ನು ತುಳಿಯಲಾಗುತ್ತಿದೆ’ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ವಿದೇಶಾಂಗ ಸಚಿವಾಲಯ ಇಂತಹ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಯಾವುದೇ ದೇಶಗಳ ಹೆಸರನ್ನು ಉಲ್ಲೇಖಿಸಿಲ್ಲ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಾಮ್ ಬಗ್ಚಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಕರ್ನಾಟಕದಲ್ಲಿ ಪ್ರಸ್ತುತ ಹಿಜಾಬ್ ವಿವಾದ ಜೋರಾಗಿದೆ. ಉಡುಪಿಯ ಕಾಲೇಜೊಂಡದರಲ್ಲಿ ಹುಟ್ಟಿಕೊಂಡ ವಿವಾದ ಈಗ ರಾಜ್ಯಾದ್ಯಂದ ಹರಡಿದೆ. ಇಂದು ಬೆಂಗಳೂರಿನಲ್ಲಿಯೂ ವಿವಾದದ ಕಿಡಿ ಕಾಣಿಸಿಕೊಂಡಿದೆ. ಕರ್ನಾಟಕ ಹೈಕೋರ್ಟ್ ಸದ್ಯ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಧಾರ್ಮಿಕ ಗುರುತುಗಳನ್ನು ಕಾಲೇಜು ಆವರಣದೊಳಗೆ ಬಳಸದಂತೆ ಮೌಖಿಕ ಆದೇಶ ನೀಡಿದೆ. ಈ ಕುರಿತ ಪೂರ್ಣ ವಿಚಾರಣೆ ನಡೆಯಬೇಕಿದೆ.

ಸದ್ಯ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೈಕೋರ್ಟ್ ಕಾಲೇಜು ನಡೆಸುವಂತೆ ಸೂಚಿಸಿದ್ದರೂ, ಸರ್ಕಾರ ಫೆಬ್ರವರಿ 16ರವರೆಗೆ ಜೆಯನ್ನು ವಿಸ್ತರಿಸಿದೆ. ಪರೀಕ್ಷೆಗಳು ನಿಗದಿಯಂತೆ ನಡೆಯಲಿದ್ದು, ಆನ್​ಲೈನ್ ತರಗತಿಗಳು ನಡೆಯುತ್ತವೆ ಎಂದು ಸರ್ಕಾರ ತಿಳಿಸಿದೆ. ಕರ್ನಾಟಕ ಸರ್ಕಾರ ಇಂದು ಫೆಬ್ರವರಿ 15ರವರೆಗೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಇದನ್ನೂ ಓದಿ:

ಮುಸ್ಲಿಮರ ಹಿಜಾಬ್​ ಮುಟ್ಟಲು ಬಂದವರ ಕೈ ಕತ್ತರಿಸುತ್ತೇನೆ; ಸಮಾಜವಾದಿ ಪಾರ್ಟಿ ನಾಯಕಿಯಿಂದ ಎಚ್ಚರಿಕೆ

ಕರ್ನಾಟಕ ಹಿಜಾಬ್​ ವಿವಾದ: ಶಾಕಿಂಗ್​ ಮಾಹಿತಿ ಬಿಚ್ಚಿಟ್ಟ ಭಾರತದ ಗುಪ್ತಚರ ಸಂಸ್ಥೆಗಳು

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ