ಮುಸ್ಲಿಮರ ಹಿಜಾಬ್​ ಮುಟ್ಟಲು ಬಂದವರ ಕೈ ಕತ್ತರಿಸುತ್ತೇನೆ; ಸಮಾಜವಾದಿ ಪಾರ್ಟಿ ನಾಯಕಿಯಿಂದ ಎಚ್ಚರಿಕೆ

ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆ ನಡೆಸುವಂತಿಲ್ಲ. ಧಾರ್ಮಿಕ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಕೂಡ ತೀರ್ಪು ನೀಡಿದೆ. ಇಷ್ಟಾದರೂ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಮುಸ್ಲಿಮರ ಹಿಜಾಬ್​ ಮುಟ್ಟಲು ಬಂದವರ ಕೈ ಕತ್ತರಿಸುತ್ತೇನೆ; ಸಮಾಜವಾದಿ ಪಾರ್ಟಿ ನಾಯಕಿಯಿಂದ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Feb 12, 2022 | 2:54 PM

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್​ ಮತ್ತು ಕೇಸರಿ ಶಾಲು ವಿವಾದ ಹೆಚ್ಚಾಗಿ, ಅದಕ್ಕೀಗ ರಾಷ್ಟ್ರ-ಅಂತಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸಮಾಜವಾದಿ ಪಕ್ಷದ ಮಹಿಳಾ ಮುಖಂಡರೊಬ್ಬರು ಹಿಜಾಬ್​ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯಾರಾದರೂ ಸರಿ, ಹಿಜಾಬ್​ನ್ನು ಮುಟ್ಟಲು ಬಂದರೆ ಅವರ ಕೈ ಕತ್ತರಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಂದಹಾಗೇ, ಈ ರೀತಿ ಮಾತನಾಡಿದ್ದು ರುಬೀನಾ ಖಾನಮ್​. ಮುಸ್ಲಿಮರ ಹಿಜಾಬ್​ ತಂಟೆಗೆ ಬಂದರೆ ನಾವೂ ಸುಮ್ಮನಿರುವುದಿಲ್ಲ ಎಂದು ಆವಾಜ್ ಹಾಕಿದ್ದಾರೆ. 

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್​ ಗಲಾಟೆ ಮಿತಿಮೀರಿದೆ. ಫೆ.16ರವರೆಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆ ನಡೆಸುವಂತಿಲ್ಲ. ಧಾರ್ಮಿಕ ಉಡುಪುಗಳನ್ನು ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಕೂಡ ತೀರ್ಪು ನೀಡಿದೆ. ಇಷ್ಟಾದರೂ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಿಜಾಬ್​ ವಿವಾದ ಸುದ್ದಿಯಾಗುತ್ತಿದ್ದು, ಪಾಕಿಸ್ತಾನ ಕೂಡ ಇದಕ್ಕೆ ಸಂಬಂಧಪಟ್ಟ ಹೇಳಿಕೆ ನೀಡಿದೆ.

ಈ ಮಧ್ಯೆ  ಹಿಜಾಬ್​ ವಿವಾದವನ್ನು ಇನ್ನಷ್ಟು ಹೆಚ್ಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಪ್ರಯತ್ನ ಮಾಡುತ್ತಿದೆ. ಅದೂ ಕೂಡ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್​ ಫಾರ್​ ಜಸ್ಟೀಸ್​ ಮೂಲಕ ಜಿಜಾಬ್ ವಿವಾದಕ್ಕೆ ಉತ್ತೇಜನ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ಮಾಹಿತಿ ನೀಡಿವೆ ಎಂಬುದು ಮೂಲಗಳಿಂದ ತಿಳಿದಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಭಾರತದಲ್ಲಿರುವ ಕೆಲವರು ದೇಶ ವಿರೋಧಿಗಳು ಸಿಖ್​ ಫಾರ್ ಜಸ್ಟೀಸ್​ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುರನ್ನು ಸೇರಿಕೊಂಡು ಇಲ್ಲಿ ಹಿಜಾಬ್​ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬಹುದು. ಈ ಮೂಲಕ ಇಲ್ಲಿನ ಪರ-ವಿರೋಧ ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದೂ ದೇಶದ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.

ಭಾರತದ ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಉರ್ದುಸ್ತಾನ್​ ಪರಿಕಲ್ಪನೆಗೆ ಉತ್ತೇಜನ ನೀಡಲು, ಈ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಹಿಜಾಬ್​ ಜನಾಭಿಪ್ರಾಯ ಚಳವಳಿ ಪ್ರಾರಂಭಿಸಲು ಮುಸ್ಲಿಮರಿಗೆ ಕರೆ ನೀಡಿದೆ ಎಂದೂ ಹೇಳಲಾಗಿದೆ. ಅಷ್ಟೇ ಅಲ್ಲ, ಎಸ್​ಎಫ್​ಜೆ ಮುಖ್ಯಸ್ಥ ಈಗಾಗಲೇ ವಿಡಿಯೋ ಸಂದೇಶದ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಿದ್ದಾನೆ ಎಂದೂ ತಿಳಿಸಿಲಾಗಿದೆ.

ಇದನ್ನೂ ಓದಿ: IPL 2022 Auction: ವೇದಿಕೆಯಲ್ಲೇ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮಿಡ್ಸ್! ಅರ್ಧಕ್ಕೆ ನಿಂತ ಐಪಿಎಲ್ ಹರಾಜು