ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ IED ಸ್ಫೋಟ: ವಾಹನದಲ್ಲಿ ಬಂದು ಬಾಂಬ್​ ಎಸೆದು ಹೋಗಿರುವ ಶಂಕೆ

| Updated By: ಸಾಧು ಶ್ರೀನಾಥ್​

Updated on: Jan 30, 2021 | 4:54 PM

ರಾಯಭಾರ ಕಚೇರಿ ಸಮೀಪವಿರುವ ಜಿಂದಾಲ್​ ಹೌಸ್ ಬಳಿಯಿರುವ ರಸ್ತೆ ವಿಭಜಕದ ಹೂಕುಂಡದಲ್ಲಿ ಸುಧಾರಿತ ಸ್ಫೋಟಕ ಬಾಂಬ್​ನ (IED) ವಾಹನದಲ್ಲಿ ಬಂದ ಅಪರಿಚಿತರು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ IED ಸ್ಫೋಟ: ವಾಹನದಲ್ಲಿ ಬಂದು ಬಾಂಬ್​ ಎಸೆದು ಹೋಗಿರುವ ಶಂಕೆ
ರಾಯಭಾರ ಕಚೇರಿ ಬಳಿ ರಸ್ತೆ ವಿಭಜಕದ ಹೂಕುಂಡದಲ್ಲಿ ಬಾಂಬ್​ ಎಸೆದು ಹೋದ ಅಪರಿಚಿತರು
Follow us on

ದೆಹಲಿ: ನಗರದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದೆ. ರಾಯಭಾರ ಕಚೇರಿ ಸಮೀಪವಿರುವ ಜಿಂದಾಲ್​ ಹೌಸ್ ಬಳಿಯಿರುವ ರಸ್ತೆ ವಿಭಜಕದ ಹೂಕುಂಡದಲ್ಲಿ ಸುಧಾರಿತ ಸ್ಫೋಟಕ ಬಾಂಬ್​ನ (IED) ವಾಹನದಲ್ಲಿ ಬಂದ ಅಪರಿಚಿತರು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಜೊತೆಗೆ, ರಾಯಭಾರ ಕಚೇರಿ ದೆಹಲಿಯ ವಿಜಯ್ ​ಚೌಕ್​ನಿಂದ ಕೇವಲ 1.7 ಕಿ.ಮೀ ದೂರದಲ್ಲಿದ್ದು ಬಾಂಬ್ ಸ್ಫೋಟಗೊಂಡ ವೇಳೆ ಅಲ್ಲಿ ಬೀಟಿಂಗ್​ ರೀಟ್ರೀಟ್​ ಕಾರ್ಯಕ್ರಮ ನಡೆಯುತ್ತಿತ್ತು. ದೆಹಲಿಯಲ್ಲಿ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭದ ಸಮೀಪವೇ ಬಾಂಬ್​ ಸ್ಫೋಟಗೊಂಡಿದೆ. ಸಮಾರಂಭದಲ್ಲಿ ರಾಷ್ಟ್ರಪತಿ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಭಾಗಿಯಾಗಿದ್ದರು.

ಈ ನಡುವೆ, ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟದಲ್ಲಿ IED ಬಳಕೆಯಾಗಿದೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ಜೊತೆಗೆ, ಇಸ್ರೇಲ್‌ ರಾಯಭಾರ ಕಚೇರಿಯ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ ದೊರೆತಿದೆ. ಇದಲ್ಲದೆ, ದೆಹಲಿಯಾದ್ಯಂತ ಹೈ ಅಲರ್ಟ್‌ ಘೋಷಣೆಯಾಗಿದೆ. ಜೊತೆಗೆ, ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಹೈ ಅಲರ್ಟ್ ಘೋಷಣೆಯಾಗಿದೆ.

Blast at Embassy Of Israel In India ದೆಹಲಿಯ ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ: 5-6 ವಾಹನಗಳು ಜಖಂ

Published On - 7:26 pm, Fri, 29 January 21