ಯುವಕರು ಭಾರತದ ಭವಿಷ್ಯವನ್ನು ರೂಪಿಸುತ್ತಾರೆ: ಇಂಪ್ಯಾಕ್ಟ್ ವಿತ್ ಯೂತ್ ಕಾನ್ಕ್ಲೇವ್​​​ನಲ್ಲಿ ಅನುರಾಗ್ ಠಾಕೂರ್

|

Updated on: Aug 12, 2023 | 8:11 PM

ಯುವಕರ ಪ್ರಮುಖ ಪಾತ್ರದ ಬಗ್ಗೆ ಹೇಳಿದ ಅನುರಾಗ್ ಸಿಂಗ್ ಠಾಕೂರ್, ಯುವಕರು ಪಾಲಕರು ಮತ್ತು ಅತಿದೊಡ್ಡ ಪಾಲುದಾರರು. ಭಾರತವು ಜಾಗತಿಕವಾಗಿ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ನಮ್ಮ ಜವಾಬ್ದಾರಿಗೆ ಸಾಟಿಯಿಲ್ಲ. ಅಂತರಾಷ್ಟ್ರೀಯ ಯುವ ದಿನವು ಯುವಕರ ಅಗಾಧ ಶಕ್ತಿಯನ್ನು ಒತ್ತಿಹೇಳುತ್ತದೆ. ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವುದು ಮಾತ್ರವಲ್ಲದೆ ಶಾಂತಿಯುತ ಭವಿಷ್ಯವನ್ನು ಕಟ್ಟಿಕೊಡುತ್ತಾರೆ ಎಂದ ಅನುರಾಗ್ ಠಾಕೂರ್

ಯುವಕರು ಭಾರತದ ಭವಿಷ್ಯವನ್ನು ರೂಪಿಸುತ್ತಾರೆ: ಇಂಪ್ಯಾಕ್ಟ್ ವಿತ್ ಯೂತ್ ಕಾನ್ಕ್ಲೇವ್​​​ನಲ್ಲಿ ಅನುರಾಗ್ ಠಾಕೂರ್
ಅನುರಾಗ್ ಸಿಂಗ್ ಠಾಕೂರ್
Follow us on

ಚೆನ್ನೈ ಆಗಸ್ಟ್ 12: ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ (Anurag Singh Thakur) ಅವರು ಯುನಿಸೆಫ್‌ ಯುನೈಟೆಡ್ ನೇಷನ್ಸ್ ಇಂಡಿಯಾ ಯುವಾಹ್ ಮತ್ತು ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಆಯೋಜಿಸಿದ್ದ “ಇಂಪ್ಯಾಕ್ಟ್ ವಿತ್ ಯೂತ್ ಕಾನ್‌ಕ್ಲೇವ್”(ImPact with Youth Conclave)ನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದ್ದಾರೆ. ಇಗ್ನೈಟಿಂಗ್ ಪ್ಯಾಶನ್ಸ್ & ಸ್ಪಾರ್ಕಿಂಗ್ ಚೇಂಜ್ – ಆಂಪ್ಲಿಫೈಯಿಂಗ್ ವಾಯ್ಸ್ ಮತ್ತು ಡ್ರೈವಿಂಗ್ ಚೇಂಜ್ ವಿಥ್ ಯಂಗ್ ಪೀಪಲ್ ವಿತ್ ಸೌತ್ ಏಷ್ಯಾ ಎಂಬ ವಿಷಯದಡಿಯಲ್ಲಿ ಅಂತರಾಷ್ಟ್ರೀಯ ಯುವ ದಿನದ ಮುನ್ನಾದಿನವಾದ ಶನಿವರಾ ಚೆನ್ನೈನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರವರು.

ಯುವಕರ ಪ್ರಮುಖ ಪಾತ್ರದ ಬಗ್ಗೆ ಹೇಳಿದ ಅನುರಾಗ್ ಸಿಂಗ್ ಠಾಕೂರ್, ಯುವಕರು ಪಾಲಕರು ಮತ್ತು ಅತಿದೊಡ್ಡ ಪಾಲುದಾರರು. ಭಾರತವು ಜಾಗತಿಕವಾಗಿ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿರುವುದರಿಂದ ನಮ್ಮ ಜವಾಬ್ದಾರಿಗೆ ಸಾಟಿಯಿಲ್ಲ. ಅಂತರಾಷ್ಟ್ರೀಯ ಯುವ ದಿನವು ಯುವಕರ ಅಗಾಧ ಶಕ್ತಿಯನ್ನು ಒತ್ತಿಹೇಳುತ್ತದೆ. ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವುದು ಮಾತ್ರವಲ್ಲದೆ ಶಾಂತಿಯುತ ಭವಿಷ್ಯವನ್ನು ಕಟ್ಟಿಕೊಡುತ್ತಾರೆ. ಸುಸ್ಥಿರ ಅಭಿವೃದ್ಧಿಗೆ ಹಸಿರು ಕೌಶಲ್ಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಅವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮತ್ತು ಜಾಗೃತಿ ಮೂಡಿಸಲು ಯುವಕರಿಗೆ ಕರೆ ನೀಡಿದರು.

ವಿಕಾಸಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆಯ ಕುರಿತು ಮಾತನಾಡಿದ ಠಾಕೂರ್, ಕೃತಕ ಬುದ್ಧಿಮತ್ತೆಯ ಏರಿಕೆ ಮತ್ತು ಜಾಗತಿಕ ನಿರೂಪಣೆಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಭಾವ ಬೀರಲು ಯುವಕರ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಇತ್ತೀಚಿನ ಡ್ರೋನ್ ನೀತಿ ಮತ್ತು ಆತ್ಮನಿರ್ಭರ ಭಾರತ್‌ನ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ ಅವರು ಇಂದಿನ ಕ್ರಿಯಾತ್ಮಕ ಜಗತ್ತಿನಲ್ಲಿ ಪೂರ್ವಭಾವಿಯಾಗಿ ಭಾಗವಹಿಸುವಂತೆ ಒತ್ತಾಯಿಸಿದರು. ಯುವಕರು ಉದ್ದೇಶವೊಂದನ್ನು ಅಳವಡಿಸಿಕೊಳ್ಳಲು ಮತ್ತು ಭಾರತದ ರಾಷ್ಟ್ರ ನಿರ್ಮಾಣದ ಪ್ರಯತ್ನಗಳಿಗೆ ಸಹಕರಿಸಲು ಅವರು ಕರೆ ನೀಡಿದ್ದಾರೆ.

ಎನ್‌ವೈಕೆಎಸ್‌ನ ಮಹಾನಿರ್ದೇಶಕರಾದ ನಿತೇಶ್ ಕುಮಾರ್ ಮಿಶ್ರಾ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿಯೂ ಸಹ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಯುನಿಸೆಫ್ ಪ್ರತಿನಿಧಿ ಸಿಂಥಿಯಾ ಮ್ಯಾಕ್‌ಕ್ಯಾಫ್ರಿ, ಯುನಿಸೆಫ್‌ನ ಯುವಾಹ್ ಮುಖ್ಯಸ್ಥ ಧುವಾರಖಾ ಶ್ರೀರಾಮ್ ಕೂಡಾ ಭಾಗಿಯಾಗಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರನ್ನು ಬಲಪಡಿಸಲು ಸಚಿವಾಲಯದ ಉಪಕ್ರಮಗಳನ್ನು ಎತ್ತಿ ತೋರಿಸಿದ ಮಿಶ್ರಾ ಯುವ ಸಮಸ್ಯೆಗಳನ್ನು ಎತ್ತುವಲ್ಲಿ ಅಂತರಾಷ್ಟ್ರೀಯ ಯುವ ದಿನದ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಸ್ವಾಗತ ಭಾಷಣ ಮಾಡಿದ ಸಿಂಥಿಯಾ ಮೆಕ್‌ಕ್ಯಾಫ್ರಿ, ಯುವಜನರು ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಯುವ ದಿನವನ್ನು ಆಚರಿಸುವುದನ್ನು ಒತ್ತಿ ಹೇಳಿದರು.


“ಇಂಪ್ಯಾಕ್ಟ್ ವಿತ್ ಯೂತ್ ಕಾನ್ಕ್ಲೇವ್” ಯುವ ವ್ಯಕ್ತಿಗಳ ಧ್ವನಿಯನ್ನು ವರ್ಧಿಸಲು, ಬದಲಾವಣೆಯನ್ನು ಪ್ರಚೋದಿಸಲು ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಗತಿಗೆ ಚಾಲನೆ ನೀಡುವ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ.

“ಇಂಪ್ಯಾಕ್ಟ್ ವಿತ್ ಯೂತ್ ಕಾನ್ಕ್ಲೇವ್” ಬಗ್ಗೆ

“ಇಂಪ್ಯಾಕ್ಟ್ ವಿತ್ ಯೂತ್ ಕಾನ್‌ಕ್ಲೇವ್” ಯುನಿಸೆಫ್‌ನಲ್ಲಿರುವ ಯುವಾಹ್ ಮತ್ತು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಯುನೈಟೆಡ್ ನೇಷನ್ಸ್ ಇಂಡಿಯಾದ ಸಹಯೋಗದ ಉಪಕ್ರಮವಾಗಿದೆ. ಯುವಜನರನ್ನು ಸಬಲೀಕರಣಗೊಳಿಸಲು, ಅವರ ಧ್ವನಿಯನ್ನು ವರ್ಧಿಸಲು ಮತ್ತು ದಕ್ಷಿಣ ಏಷ್ಯಾದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಕಾನ್ಕ್ಲೇವ್ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: NCERT ಪಠ್ಯಪುಸ್ತಕ ಪರಿಷ್ಕರಿಸುವ ನೂತನ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್ ಮಹಾದೇವನ್

ಅಂತರಾಷ್ಟ್ರೀಯ ಯುವ ದಿನ

ಅಂತರರಾಷ್ಟ್ರೀಯ ಯುವ ದಿನವನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ, ಇದು ಪ್ರಪಂಚದ ಭವಿಷ್ಯವನ್ನು ರೂಪಿಸುವಲ್ಲಿ ಯುವ ವ್ಯಕ್ತಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಯುವಜನತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಯುವಜನರ ಕೊಡುಗೆಗಳನ್ನು ಆಚರಿಸಲು ದಿನವು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ