Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್​ಗೆ ಎದೆನೋವು, ಅಸ್ವಸ್ಥ; ಆಸ್ಪತ್ರೆಗೆ ಕರೆತರುವಾಗ ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿ ಪರದಾಟ

ಕೃಷ್ಣಗಿರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುವಾಗ ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅದರಂತೆ ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆ ತಮಿಳುನಾಡು-ಕರ್ನಾಟಕ ಗಡಿ ಅತ್ತಿಬೆಲೆ ಬಳಿ ಟ್ರಾಫಿಕ್​ನಲ್ಲಿ ಜಾಮ್​ನಲ್ಲಿ ಸಿಲುಕಿ ಪರದಾಡುವಂತಾಯಿತು.

ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್​ಗೆ ಎದೆನೋವು, ಅಸ್ವಸ್ಥ; ಆಸ್ಪತ್ರೆಗೆ ಕರೆತರುವಾಗ ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿ ಪರದಾಟ
ತಮಿಳುನಾಡು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ
Follow us
ರಾಮು, ಆನೇಕಲ್​
| Updated By: Rakesh Nayak Manchi

Updated on: Aug 12, 2023 | 6:27 PM

ಆನೇಕಲ್, ಆಗಸ್ಟ್ 12: ಕೃಷ್ಣಗಿರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುವಾಗ ತಮಿಳುನಾಡು (Tamil Nadu) ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ (Anbil Mahesh Poyyamozhi) ಅವರಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಅದರಂತೆ, ಸಚಿವರು ಸೇಲಂನಿಂದ ಬೆಂಗಳೂರಿನ ಬೊಮ್ಮಸಂದ್ರದ ಆಸ್ಪತ್ರೆಗೆ ಬರುತ್ತಿದ್ದಾಗ ಅತ್ತಿಬೆಲೆ ಬಳಿ ಟ್ರಾಫಿಕ್​ನಲ್ಲಿ ಜಾಮ್​ನಲ್ಲಿ ಸಿಲುಕಿ ಪರದಾಡುವಂತಾಯಿತು.

ಕೃಷ್ಣಗಿರಿಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಿದ್ದ ಸಚಿವ ಅನ್ಬಿಲ್ ಮಹೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಸೇಲಂನಿಂದ ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕೊರೆತರುವಾಗ ಅತ್ತಿಬೆಲೆ ಬಳಿ ಟ್ರಾಫಿಕ್​ನಲ್ಲಿ ಸಿಲುಕಿದರು.

ಇದನ್ನೂ ಓದಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಗದ್ದಲ; ಪಟ್ಟು ಬಿಡದ ತಮಿಳುನಾಡು ಅಧಿಕಾರಿಗಳು

ಕೂಡಲೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು, ಶಿಕ್ಷಣ ಸಚಿವರು ಆಸ್ಪತ್ರೆಗೆ ಹೋಗುತ್ತಿದ್ದ ವಾಹನವನ್ನು ಟ್ರಾಫಿಕ್​ನಿಂದ ಮುಕ್ತಗೊಳಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಸದ್ಯ ಅನ್ಬಿಲ್ ಮಹೇಶ್ ಅವರನ್ನು ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ