Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಆರೋಗ್ಯ ಸಚಿವ ಅನ್ಬಿಲ್ ಮಹೇಶ್ ಗೆ ಹಠಾತ್ತನೆ ಎದೆನೋವು, ನಾರಾಯಣ ಹೆಲ್ತ್ ಸಿಟಿ ತರುವಾಗ ಟ್ರಾಫಿಕ್ ಸಮಸ್ಯೆ! ನೆರವಿಗೆ ಧಾವಿಸಿದ ಬೆಂಗಳೂರು ಪೊಲೀಸ್

ತಮಿಳುನಾಡು ಆರೋಗ್ಯ ಸಚಿವ ಅನ್ಬಿಲ್ ಮಹೇಶ್ ಗೆ ಹಠಾತ್ತನೆ ಎದೆನೋವು, ನಾರಾಯಣ ಹೆಲ್ತ್ ಸಿಟಿ ತರುವಾಗ ಟ್ರಾಫಿಕ್ ಸಮಸ್ಯೆ! ನೆರವಿಗೆ ಧಾವಿಸಿದ ಬೆಂಗಳೂರು ಪೊಲೀಸ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 12, 2023 | 7:41 PM

ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ವಿಷಯ ಗೊತ್ತಾದ ಬಳಿಕ ಅವರು ರಸ್ತೆಯನ್ನು ಕ್ಲೀಯರ್ ಮಾಡಿ ಅನ್ಬಿಲ್ ಮಹೇಶ್ ಅವರ ಕಾನ್ವಾಯ್ ಅಸ್ಪತ್ರೆ ಕಡೆ ಸಾಗಲು ಸಹಾಯ ಮಾಡಿದರು. ಆಸ್ಪತ್ರೆಯ ಮುಂದೆ ಕೃಷ್ಣಗಿರಿ ಜಿಲ್ಲೆಯ ಪೊಲೀಸ್ ಕಾರನ್ನು ನೋಡಬಹುದು. ಮಹೇಶ್ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಅರಂಭವಾಗಿದೆ.

ಬೆಂಗಳೂರು: ತಮಿಳು ನಾಡು ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿರುವ ಅನ್ಬಿಲ್ ಮಹೇಶ್ ಪೊಯ್ಯಪೊಳಿ (Anbil Mahesh Poyyamozhi) ಅವರಿಗೆ ಕೃಷಗಿರಿಯಲ್ಲಿ (Krishnagiri) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಹಠಾತ್ತನೆ ಎದೆನೋವು (chest pain) ಕಾಣಿಸಿಕೊಂಡಿದ್ದರಿಂದ ಅವರನ್ನು ಅಲ್ಲಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೆಲ್ತ್ ಸಿಟಿ ತರುವಾಗ ತೀವ್ರ ಸ್ವರೂಪದ ಟ್ರಾಫಿಕ್ ಅಡಚಣೆ ಎದುರಾಯಿತು. ಅನೇಕಲ್ ಭಾಗದಲ್ಲಿ ಭಾರೀ ಟ್ರಾಫಿಕ್ ಇರುತ್ತದೆ. ಕೆಲ ಕಡೆ ಸಚಿವರನ್ನು ಹೊತ್ತ ಕಾರು ನಿಶ್ಚಲ ಸ್ಥಿತಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರೆ, ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ವಿಷಯ ಗೊತ್ತಾದ ಬಳಿಕ ಅವರು ರಸ್ತೆಯನ್ನು ಕ್ಲೀಯರ್ ಮಾಡಿ ಅನ್ಬಿಲ್ ಮಹೇಶ್ ಅವರ ಕಾನ್ವಾಯ್ ಅಸ್ಪತ್ರೆ ಕಡೆ ಸಾಗಲು ಸಹಾಯ ಮಾಡಿದರು. ಆಸ್ಪತ್ರೆಯ ಮುಂದೆ ಕೃಷ್ಣಗಿರಿ ಜಿಲ್ಲೆಯ ಪೊಲೀಸ್ ಕಾರನ್ನು ನೋಡಬಹುದು. ಮಹೇಶ್ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಅರಂಭವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ