4ನೇ ಅಲೆ ಬಗ್ಗೆ ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ, ಅದು ಪರಿಣಾಮ ಬೀರುವ ಸಾಧ್ಯತೆ ಕಡಿಮೆ -ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ

4ನೇ ಅಲೆ ಬಗ್ಗೆ ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ, ಅದು ಪರಿಣಾಮ ಬೀರುವ ಸಾಧ್ಯತೆ ಕಡಿಮೆ -ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ
ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ

ಕೊರೊನಾ ಮೂರನೇ ಅಲೆಯಲ್ಲಿ ಕೂಡ ಆತಂಕ ಇತ್ತು. ಆದ್ರೆ ನಮ್ಮಲ್ಲಿ ಅದರ ಪ್ರಭಾವ ಅಷ್ಟೊಂದು ಕಂಡುಬಂದಿರಲಿಲ್ಲ. ಆದರೂ ಕೂಡ ನಾವು ಸುರಕ್ಷತೆ ಕಾಪಾಡಿಕೊಳ್ಳಬೇಕು. ಸೋಂಕು ಕಂಡುಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಬೇಕು.

TV9kannada Web Team

| Edited By: Ayesha Banu

Apr 25, 2022 | 1:37 PM

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿನ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ 4ನೇ ಅಲೆ ಆತಂಕ ವಿಚಾರಕ್ಕೆ ಸಂಬಂಧಿಸಿ 4ನೇ ಅಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. 4ನೇ ಅಲೆ ಬಗ್ಗೆ ಯಾರು ಕೂಡ ಆತಂಕಪಡುವ ಅಗತ್ಯ ಇಲ್ಲ ಎಂದು ಅತ್ತಿಬೆಲೆಯಲ್ಲಿ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ ತಿಳಿಸಿದ್ದಾರೆ. ನಾಲ್ಕನೆ ಅಲೆ ಅಷ್ಟೊಂದು ಪ್ರಭಾವ ಬೀರುವ ಸಾಧ್ಯತೆ ಇಲ್ಲ.

ಕೊರೊನಾ ಮೂರನೇ ಅಲೆಯಲ್ಲಿ ಕೂಡ ಆತಂಕ ಇತ್ತು. ಆದ್ರೆ ನಮ್ಮಲ್ಲಿ ಅದರ ಪ್ರಭಾವ ಅಷ್ಟೊಂದು ಕಂಡುಬಂದಿರಲಿಲ್ಲ. ಆದರೂ ಕೂಡ ನಾವು ಸುರಕ್ಷತೆ ಕಾಪಾಡಿಕೊಳ್ಳಬೇಕು. ಸೋಂಕು ಕಂಡುಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಬೇಕು. ಮಾಸ್ಕ್ ಧರಿಸುವುದು ಸುರಕ್ಷತೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಆಸ್ಪತ್ರೆಗಳಲ್ಲಿ ರೋಗಿಗಳು ಎಷ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಎಷ್ಟು ಜನ ಗುಣಮುಖರಾಗುತ್ತಿದ್ದಾರೆ ಎನ್ನುವುದು ಮುಖ್ಯ. ನಮ್ಮಲ್ಲಿ ಗುಣಮುಖರಾಗುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಯಾರು ಕೂಡ ಭಯ ಪಡುವ ಅಗತ್ಯ ಇಲ್ಲ ಎಂದು ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವದಲ್ಲಿ ನಾರಾಯಣ ಹೆಲ್ತ್ ಸಿಟಿ ಮುಖ್ಯಸ್ಥ ಡಾ.ದೇವಿಶೆಟ್ಟಿ ತಿಳಿಸಿದ್ದಾರೆ.

ಇನ್ನು ಮತ್ತೊಂದು ಕಡೆ ಕೊರೊನಾ ಸಂಬಂಧ ಜಿನೋಮಿಕ್ ಸರ್ವೆಲಿಂಕ್ಸ್ ಸದಸ್ಯ ಡಾ.ವಿಶಾಲ್ ರಾವ್ ಮಾತನಾಡಿದ್ದಾರೆ. ಕೊರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಕೆಲವು ಚಿಂತನೆ ನಡೆದಿದೆ. ಲಾಸ್ಟ್ ಒಂದು ವಾರದಲ್ಲಿ ಕೊರೊನಾ ಸಂಖ್ಯೆ ಜಾಸ್ತಿಯಾಗಿವೆ. ಕೆಲವು ಚಿಂತನೆ ನಡೆದಿದೆ, ಹೊಸ ತಳಿಗಳ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಲ್ಲಿ ಶೇಕಡಾ 3ರಷ್ಟು ಪಾಸಿಟಿವಿಟಿ ಇದೆ. ಯಾವುದೇ ತರದ ಶ್ವಾಸಕೋಶ, ಹಾಸ್ಪಿಟಲ್ ಅಡ್ಮಿಟ್ ಆಗುವುದರ ಬಗ್ಗೆ ಕಂಡು ಬಂದಿಲ್ಲ. ತಳಿಗಳ ಚರ್ಚೆಗಳ ಬಗ್ಗೆ ಬಂದರೆ ಒಮಿಕ್ರಾನ್ ಹೊಸ ತಳಿ ಬರ್ತಾವೆಂದು ಯುಎಸ್ಎ, ಯುಕೆಯಿಂದ ಮಾಹಿತಿ ಬರುತ್ತಿದೆ. ಮೂರನೇ ಅಲೆಯ ಬಿಎ2 ತಳಿ ತೊಂದರೆ ಮಾಡಿತ್ತು. ಅದೇ ತಳಿಯ ಉಪ ತಳಿಗಳು ಬರುತ್ತವೆಂದು ಚರ್ಚೆ ನಡೆಯುತ್ತಿದೆ. ಈ ತಳಿ ಹೊಸ ರೀತಿ ಸ್ವಾಭಾವವನ್ನು ಬದಲಾವಣೆ ಮಾಡೊಕೆ ಪ್ರಯತ್ನ ಮಾಡುತ್ತೆ. ಹೊಸ ಚರ್ಚೆ ಕೇಳಿ ಬಿಎ2 ಅಂಡರ್ ಬರುವ 2.10, 2.12 ಬಗ್ಗೆ ಚಿಂತನೆ ನಡೆಸಿತ್ತು. ಇದರಿಂದ ಯಾವುದೆ ರೀತಿಯ ಚಿಂತನೆ, ಆತಂಕ, ಭಯ ಪಡೊದು ಬೇಡ. ಈ ಸೋಂಕಿನ ಸಂಖ್ಯೆ ಜಾಸ್ತಿಯಾಗುವ ಸೂಚನೆಯಿದೆ.

ಈ ಸೋಂಕಿನ ಬಗ್ಗೆ ಯೋಚನೆ ಮಾಡೋಕೆ ಒತ್ತಾಯ ಮಾಡುವಂತೆ ಮಾಡಿದೆ. ಈ ಯುದ್ಧ ಮುಗಿದಿಲ್ಲ, ಅಕಾಲಿಕವಾಗಿ ಯಾವುದೇ ರೀತಿಯ ವಿಧಾಯ ಘೋಷಣೆ ಮಾಡುವಂತ್ತಿಲ್ಲ. ಈ ಲಸಿಕೆ ಹಾಗೂ ತಳಿಯ ಹೋರಾಟದಲ್ಲಿ ತಳಿಯು ತನ್ನ ಪ್ರಯತ್ನವನ್ನು ಬಿಟ್ಟಿಲ್ಲ. ನಾವು ಕೂಡಾ ಜಾಗ್ರತೆಯನ್ನು ಬಿಡಬಾರದು. ಜನರು ಲಸಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಭಾನುವಾರ (ಏಪ್ರಿಲ್ 24) ಒಟ್ಟು 8263 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. 60 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1676 ಸಕ್ರಿಯ ಪ್ರಕರಣಗಳಿವೆ. ನಿನ್ನೆ 63 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಮತ್ತೆ ಕೊರೊನಾ ಆತಂಕ ಕರ್ನಾಟಕದಲ್ಲಿ ಭಾನುವಾರ (ಏಪ್ರಿಲ್ 24) ಒಟ್ಟು 8263 ಜನರ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. 60 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಪ್ರಸ್ತುತ 1676 ಸಕ್ರಿಯ ಪ್ರಕರಣಗಳಿವೆ. ನಿನ್ನೆ 63 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಸರ್ಕಾರ ಸಹ ಈ ವಿದ್ಯಮಾನ ಗಮನಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ವಿಡಿಯೊ ಕಾನ್ಫರೆನ್ಸ್ ಇದೆ. ಅವರು ನೀಡುವ ಸಲಹೆ, ಸೂಚನೆ ಮೇರೆಗೆ ಕೊರೊನಾ ನಿಯಂತ್ರಣದ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಕ್ಲಾರೆನ್ಸ್ ಶಾಲೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್: ಪ್ರತಿಭಟನೆಗೆ ಅವಕಾಶವಿಲ್ಲ ಎಂದ ಪೊಲೀಸರು

ಬೆಂಗಳೂರಿನಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ ಬೆಳಕಿಗೆ: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ, ಕೋಟ್ಯಂತರ ರೂಪಾಯಿಗೆ ವಂಚನೆ

Follow us on

Related Stories

Most Read Stories

Click on your DTH Provider to Add TV9 Kannada