ಬೆಂಗಳೂರಿನಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ ಬೆಳಕಿಗೆ: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ, ಕೋಟ್ಯಂತರ ರೂ ವಂಚನೆ

ಬೆಂಗಳೂರಿನಲ್ಲಿ ಮತ್ತೆ ಕಿಡ್ನಿ ಮಾರಾಟ ದಂಧೆ ಬೆಳಕಿಗೆ: ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ, ಕೋಟ್ಯಂತರ ರೂ ವಂಚನೆ
ಸಾಂದರ್ಭಿಕ ಚಿತ್ರ

ಆರೋಪಿಗಳು ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸುತಿದ್ದರು. ಒಂದು ಕಿಡ್ನಿಗೆ 4 ಕೋಟಿ ಕೊಡುವುದಾಗಿ ಆಫರ್ ನೀಡ್ತಿದ್ದರು. ವಾಟ್ಸ್ ಆ್ಯಪ್ ಮುಖಾಂತರ ರಿಜಿಸ್ಟರ್ ಫೀಸ್ ಹಾಗೂ ವಿವಿಧ ಮಾದರಿಯ ಫೀಸ್ ನಲ್ಲಿ ಹಣ ವಸೂಲಿ ಮಾಡ್ತಿದ್ದರು.

TV9kannada Web Team

| Edited By: Ayesha Banu

Apr 25, 2022 | 1:42 PM

ಬೆಂಗಳೂರು: ನಗರದಲ್ಲಿ ಬಿಗ್ ಕಿಡ್ನಿ ಡೊನೇಶನ್ ರಾಕೆಟ್ ಪೊಲೀಸರ ಬಲೆಗೆ ಬಿದ್ದಿದೆ. ಪ್ರತಿಷ್ಠಿತ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ ಸಾರ್ವಜನಿಕರಿಗೆ ವಂಚಿಸಿದ್ದ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.  ನೈಜೀರಿಯಾದ ಮಿಮಿ ಅಲಿಯಾಸ್ ಮಿರಾಕಲ್, ಕೊವಾ ಕೊಲಿನ್ಸ್ ಘಾನಾದ ದೇಶದ ಮ್ಯಾಥ್ಯೂ ಇನೊಸೆಂಟ್ ಅರೆಸ್ಟ್ ಮಾಡಲಾಗಿದೆ. ಆರೋಪಿಗಳು ಕಿಡ್ನಿ ಕೊಳ್ಳುವ ಹಾಗೂ ಮಾರುವವರನ್ನೇ ಟಾರ್ಗೆಟ್ ಮಾಡಿ ಕಿಡ್ನಿ ಸಂಬಂಧಿತ ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇತ್ತೀಚೆಗೆ ಸಾಗರ್ ಆಸ್ಪತ್ರೆಯ ನಕಲಿ ವೆಬ್ ಸೈಟ್ ಸೃಷ್ಟಿಸಿದ್ದ ಆರೋಪಿಗಳು, ಕಿಡ್ನಿ ಡೊನೇಶನ್ ಸಂಬಂಧಿತ ಹಣ ಕೇಳುತ್ತಿರುವ ಬಗ್ಗೆ ಕೆಲ ಮಾಹಿತಿ ಸಮೇತ ಉಲ್ಲೇಖಿಸಿ ದೂರು ನೀಡಲಾಗಿತ್ತು. ಆಸ್ಪತ್ರೆಯಿಂದ ಹೆಚ್ಎಸ್ಆರ್ ಲೇಔಟ್ನ ಸಿಇಎನ್ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಇಎನ್ ಪೊಲೀಸರು ವಿದೇಶಿಗರ ಕೃತ್ಯದ ಬಗ್ಗೆ ಸಾಕ್ಷಿ ಪತ್ತೆ ಮಾಡಿದ್ದಾರೆ. ಅಮೃತಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ಮೂವರು ವಿದೇಶಿಗರು ಪತ್ತೆಯಾಗಿದ್ದು ತನಿಖೆ ವೇಳೆ ಬೃಹತ ವಂಚನೆ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸುತಿದ್ದರು. ಒಂದು ಕಿಡ್ನಿಗೆ 4 ಕೋಟಿ ಕೊಡುವುದಾಗಿ ಆಫರ್ ನೀಡ್ತಿದ್ದರು. ವಾಟ್ಸ್ ಆ್ಯಪ್ ಮುಖಾಂತರ ರಿಜಿಸ್ಟರ್ ಫೀಸ್ ಹಾಗೂ ವಿವಿಧ ಮಾದರಿಯ ಫೀಸ್ ನಲ್ಲಿ ಹಣ ವಸೂಲಿ ಮಾಡ್ತಿದ್ದರು. ಎಲ್ಲವನ್ನೂ ಫೋನ್ ಮುಖಾಂತರವೇ ನಡೆಸುತ್ತಿದ್ದರು. ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಆಗಿದೆ ಅದರಿಂದ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಬರಲಿರುವ ಹಣದ ಶೇ.30ರಷ್ಟು ಹಣ ಪೇ ಮಾಡಬೇಕೆಂದು ಆಮೀಷ ಒಡ್ಡಿ ಕೋಟಿ ಕೋಟಿ ಆಸೆ ತೋರಿಸಿ ವಂಚಿಸುತ್ತಿದ್ದರು. ಆದರೆ ಈವರೆಗೂ ಯಾರು ದೂರು ನೀಡಿಲ್ಲ. ಸದ್ಯ ಯಾರೇ ನೊಂದವರಿದ್ದರೂ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ತಂದೆ, ಮಗ ದುರ್ಮರಣ ರಾಮನಗರ: ಕುಂಬಾಪುರ ಗೇಟ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ತಂದೆ, ಮಗ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಸುದರ್ಶನ್(40), ತನ್ಮಯ್(2) ಮೃತಪಟ್ಟವರು. ಕುಟುಂಬ ಸಮೇತ ಹಬ್ಬಕ್ಕೆ ಊರಿಗೆ ತೆರಳಿದ್ದ ಸುದರ್ಶನ್​, ಕಾರಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸುದರ್ಶನ್ ಪತ್ನಿ ಶೀಲಾ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಹೆಣ್ಣುಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಚಾಲಕನ ನಿರ್ಲಕ್ಷ್ಯ ಫುಟ್ ಪಾತ್ ಮೇಲೆ ಹರಿದ ಲಾರಿ ರಾಯಚೂರು: ನಗರದ ಸ್ಟೇಷನ್​ ರಸ್ತೆಯಲ್ಲಿ ಅಕ್ಕಿ ಸಾಗಣೆ ಲಾರಿ ಫುಟ್​ಪಾತ್​ ಮೇಲೆ ಚಲಿಸಿ ಲೋಕಾಯುಕ್ತ ಕಚೇರಿ ಕಾಂಪೌಂಡ್​ಗೆ ಡಿಕ್ಕಿ ಹೊಡೆದಿದೆ. ಮದ್ಯದ ಅಮಲಿನಲ್ಲಿ ಲಾರಿ ಚಲಾಯಿಸುತ್ತಿದ್ದ ಚಾಲಕನಿಂದ ಕೃತ್ಯ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲು ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಾರಕೆರೆ ಹೊಸೂರು ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಪ್ರಜ್ವಲ್(11) ನೀರುಪಾಲಾಗಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಪ್ರಕರಣ; ಮೈಸೂರಿನಲ್ಲಿ ಆರೋಪಿ ಸೌಮ್ಯಾ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada