ಮಂಡ್ಯ ನಗರದ ನಡುರಸ್ತೇಲಿ ಯುವತಿ ಮತ್ತು ಯುವಕನೊಬ್ಬ ಸಚಿವ ಚಲುವರಾಯಸ್ವಾಮಿ ಪಾದಮುಟ್ಟಿ ನಮಸ್ಕರಿಸಿದ್ದು ಯಾಕೆ ಗೊತ್ತಾ?

ಮಂಡ್ಯ ನಗರದ ನಡುರಸ್ತೇಲಿ ಯುವತಿ ಮತ್ತು ಯುವಕನೊಬ್ಬ ಸಚಿವ ಚಲುವರಾಯಸ್ವಾಮಿ ಪಾದಮುಟ್ಟಿ ನಮಸ್ಕರಿಸಿದ್ದು ಯಾಕೆ ಗೊತ್ತಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2023 | 6:10 PM

ಅಸಲು ವಿಷಯವೇನೆಂದರೆ, ಅವರೆಲ್ಲ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಹಳ ಸಮಯದಿಂದ ಅವರಿಗೆ ಸಂಬಳ ಸಿಕ್ಕಿರಲಿಲ್ಲ. ಚಲುವರಾಯಸ್ವಾಮಿ ಸಂಬಂಧಪಟ್ಟವರೊಂದಿಗೆ ಮಾತಾಡಿ ಅವರೆಲ್ಲರಿಗೆ ಸಂಬಳ ಸಿಗುವಂತೆ ಮಾಡಿದ್ದಾರೆ. ಒಬ್ಬ ಯುವತಿ ನಡುರಸ್ತೆಯಲ್ಲೇ ಚಲುವರಾಯಸ್ವಾಮಿ ಪಾದಮುಟ್ಟಿ ನಮಸ್ಕರಿಸುತ್ತಾ ಕೃತಜ್ಞತೆ ಸಲ್ಲಿಸುತ್ತಾರೆ.

ಮಂಡ್ಯ: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ (Siddaramaiah cabinet) ಮಂತ್ರಿಯಾದಾಗಿನಿಂದ ವಿವಾದಗಳಲ್ಲಿ ಸಿಲುಕಿದ್ದಾರೆ. ಆದರೆ ಅಧೀರತೆಯ ಲವಲೇಶ ಅವರ ಮುಖದಲ್ಲಿ ಕಾಣದು. ಹಸನ್ಮುಖಿ ಸದಾ ಸುಖಿ ಅಂತ ಹೇಳುತ್ತಾರೆ, ಹಾಗಾಗೇ, ಸಚಿವ ಯಾವಾಗಲೂ ಮುಗುಳ್ನಗುತ್ತಿರುತ್ತಾರೆ. ಇವತ್ತು ಮಂಡ್ಯದ (Mandya) ಏರಿಯಾವೊಂದಕ್ಕೆ ಅವರು ಭೇಟಿ ನೀಡಿದಾಗ ಯುವಕ ಯುವತಿಯರ ಗುಂಪೊಂದು ಚಲುವರಾಯಸ್ವಾಮಿಯನ್ನು ಬೋಕೆಗಳನ್ನು ನೀಡುತ್ತಾ ಸ್ವಾಗತಿಸುತ್ತದೆ. ಯುವತಿಯರು ಸಂತೋಷದಿಂದ ಸರ್ ನಿಮ್ಮಿಂದ ದೊಡ್ಡ ಉಪಕಾರವಾಯಿತು ಅನ್ನುತ್ತಾರೆ. ಅಸಲು ವಿಷಯವೇನೆಂದರೆ, ಅವರೆಲ್ಲ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಬಹಳ ಸಮಯದಿಂದ ಅವರಿಗೆ ಸಂಬಳ ಸಿಕ್ಕಿರಲಿಲ್ಲ. ಚಲುವರಾಯಸ್ವಾಮಿ ಸಂಬಂಧಪಟ್ಟವರೊಂದಿಗೆ ಮಾತಾಡಿ ಅವರೆಲ್ಲರಿಗೆ ಸಂಬಳ ಸಿಗುವಂತೆ ಮಾಡಿದ್ದಾರೆ. ಒಬ್ಬ ಯುವತಿ ನಡುರಸ್ತೆಯಲ್ಲೇ ಚಲುವರಾಯಸ್ವಾಮಿ ಪಾದಮುಟ್ಟಿ ನಮಸ್ಕರಿಸುತ್ತಾ ಕೃತಜ್ಞತೆ ಸಲ್ಲಿಸುತ್ತಾರೆ. ಯುವಕನೂ ಪಾದ ಮುಟ್ಟಲು ಬಗ್ಗಿದಾಗ ಸಚಿವ, ಲೆಕ್ಚರರ್ ಗಳು ಪಾದ ಮುಟ್ಟಬಾರದು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ