ಕಾಂಗ್ರೆಸ್ ಸರ್ಕಾರದ ಹೆಚ್ಚುತ್ತಿರುವ ಜನಪ್ರಿಯತೆಯಿಂದ ವಿರೋಧಪಕ್ಷಗಳಿಗೆ ನಿರಾಸೆಯಾಗಿ ಅಪಪ್ರಚಾರದಲ್ಲಿ ತೊಡಗಿವೆ: ಎನ್ ಚಲುವರಾಯಸ್ವಾಮಿ, ಸಚಿವ

ಕಾಂಗ್ರೆಸ್ ಸರ್ಕಾರದ ಹೆಚ್ಚುತ್ತಿರುವ ಜನಪ್ರಿಯತೆಯಿಂದ ವಿರೋಧಪಕ್ಷಗಳಿಗೆ ನಿರಾಸೆಯಾಗಿ ಅಪಪ್ರಚಾರದಲ್ಲಿ ತೊಡಗಿವೆ: ಎನ್ ಚಲುವರಾಯಸ್ವಾಮಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 10, 2023 | 4:22 PM

ತಮ್ಮ ಸರ್ಕಾರ ಒಂದೊಂದಾಗಿ ಗ್ಯಾರಂಟಿಗಳನ್ನು ಕಂಡು ವಿರೋಧ ಪಕ್ಷಗಳಿಗೆ ನಿರಾಸೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹೇಗೆ ಎದುರಿಸುವುದು ಅಂತ ಅವರಿಗೆ ಗೊಂದಲವುಂಟಾಗಿದೆ ಎಂದು ಸಚಿವರು ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy), ಹಿಂದೆ ಕಾಂಗ್ರೆಸ್, ಆಗಿನ ಸರ್ಕಾರ ಶೇಕಡ 40ರಷ್ಟು ಕಮೀಶನ್ ಪಡೆದ ದಾಖಲೆಗಳನ್ನು ಆಧರಿಸಿ ಪೇ ಸಿಎಂ (Pay CM) ಅಂತ ದೊಡ್ಡ ಆಂದೋಲನ ನಡೆಸಿತ್ತು. ಅದನ್ನು ನಕಲು ಮಾಡುತ್ತಾ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಪ್ಲೇಟ್ ಲೆಟ್ ಗಳನ್ನು ಆಧಾರವಾಗಿಟ್ಟುಕೊಂಡು ಪೇ ಸಿಎಸ್ (Pay CS) ಅಂತ ಪೋಸ್ಟರ್​ ಗಳನ್ನು ಮೆತ್ತುತ್ತಿದ್ದಾರೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ಅಸಲು ಸಂಗತಿಯೇನೆಂದರೆ ತಮ್ಮ ಸರ್ಕಾರ ಒಂದೊಂದಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಮತ್ತು ಅದರ ಜನಪ್ರಿಯತೆ ದಿನೇದಿನೆ ಹೆಚ್ಚುತ್ತಿರುವುದು ಕಂಡು ವಿರೋಧ ಪಕ್ಷಗಳಿಗೆ ನಿರಾಸೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹೇಗೆ ಎದುರಿಸುವುದು ಅಂತ ಅವರಿಗೆ ಗೊಂದಲವುಂಟಾಗಿದೆ. ಹಾಗಾಗೇ, ಪೇ ಸಿಎಸ್ ನಂಥ ಅಪಪ್ರಚಾರಗಳ ಮೂಲಕ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ