ಬಿಜೆಪಿ ನನ್ನನ್ನು 50 ಅಥವಾ 100 ಬಾರಿ ಅನರ್ಹಗೊಳಿಸಬಹುದು, ಆದರೆ ನಮ್ಮ ನಡುವಿನ ಸಂಬಂಧ ದೃಢವಾಗಿಯೇ ಇರುತ್ತದೆ: ವಯನಾಡಿನಲ್ಲಿ ರಾಹುಲ್ ಗಾಂಧಿ
Rahul Gandhi in Wayanad: ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ವಯನಾಡಿನೊಂದಿಗಿನ ನನ್ನ ಸಂಬಂಧ ಮುರಿದುಹೋಗುತ್ತದೆ ಎಂದು ಅವರು ಯೋಚಿಸುತ್ತಾರೆ. ಆದರೆ ಹಾಗಲ್ಲ. ಅವಪು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ಜನರೊಂದಿಗಿನ ಅವರ ಸಂಬಂಧವು ಗಟ್ಟಿಯಾಗುತ್ತದೆ, ನೀವು ನನ್ನೊಂದಿಗೆ ನಿಂತಿದ್ದೀರಿ, ಅವರು ನನ್ನನ್ನು 50 ಬಾರಿ ಅನರ್ಹಗೊಳಿಸಬಹುದು, ಆದರೆ ಅದು ವಯನಾಡ್ ಜೊತೆಗಿನ ನನ್ನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಯನಾಡ್ (ಕೇರಳ) ಆಗಸ್ಟ್ 12: ಲೋಕಸಭೆ (Lok sabha) ಸದಸ್ಯತ್ವ ಮರುಸ್ಥಾಪಿಸಿದ ನಂತರ ಕೇರಳದ ವಯನಾಡಿನಲ್ಲಿ (Wayanad) ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi), ಬಿಜೆಪಿ ಮತ್ತು ಆರ್ಎಸ್ಎಸ್ಗೆ ನಮ್ಮ ಕುಟುಂಬಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಗೊತ್ತಿಲ್ಲ. ಯಾರಾದರೂ ತನ್ನ ಮಗಳಿಂದ ಇಬ್ಬರು ಸಹೋದರರನ್ನು ಅಥವಾ ತಂದೆಯನ್ನು ಬೇರ್ಪಡಿಸಲು ಬಯಸಿದರೆ, ಅವರ ಸಂಬಂಧವು ದುರ್ಬಲವಾಗುತ್ತದೆಯೇ ಅಥವಾ ಗಟ್ಟಿಯಾಗುತ್ತದೆಯೇ? ಅವರಿಗೆ ಅದು ಅರ್ಥವಾಗುವುದಿಲ್ಲ. ಅವರು ನಿಮ್ಮನ್ನು ಮತ್ತು ನನ್ನನ್ನು ಬೇರ್ಪಡಿಸಲು ಎಷ್ಟು ಪ್ರಯತ್ನಿಸುತ್ತಾರೆ, ನಾವು ಹತ್ತಿರ ಬರುತ್ತೇವೆ.
ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ವಯನಾಡಿನೊಂದಿಗಿನ ನನ್ನ ಸಂಬಂಧ ಮುರಿದುಹೋಗುತ್ತದೆ ಎಂದು ಅವರು ಯೋಚಿಸುತ್ತಾರೆ. ಆದರೆ ಹಾಗಲ್ಲ. ಅವರು ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದರೆ ಜನರೊಂದಿಗಿನ ಅವರ ಸಂಬಂಧವು ಗಟ್ಟಿಯಾಗುತ್ತದೆ, ನೀವು ನನ್ನೊಂದಿಗೆ ನಿಂತಿದ್ದೀರಿ, ಅವರು ನನ್ನನ್ನು 50 ಬಾರಿ ಅನರ್ಹಗೊಳಿಸಬಹುದು, ಆದರೆ ಅದು ವಯನಾಡ್ ಜೊತೆಗಿನ ನನ್ನ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
The BJP-RSS do not understand what a family is.
The more they try to separate us, the closer we will become.
If you disqualify Rahul Gandhi, his relationship with Wayanad will become even stronger.
A family always protects you!
: Shri @RahulGandhi
📍 Wayanad pic.twitter.com/W4OfEX8QZc
— Congress (@INCIndia) August 12, 2023
ಬಿಜೆಪಿಯವರು ಮಾಡುತ್ತಿರುವುದು ಇದನ್ನೇ. ಅವರು ಕುಟುಂಬಗಳನ್ನು ವಿಭಜಿಸುತ್ತಾರೆ. ಮಣಿಪುರದಲ್ಲೂ ಅದನ್ನೇ ಮಾಡಿದ್ದಾರೆ. ನಾವು ಅದನ್ನು ಮರುನಿರ್ಮಾಣ ಮಾಡುತ್ತೇವೆ. ನೀವು ಎರಡು ತಿಂಗಳಲ್ಲಿ ಮಣಿಪುರಕ್ಕೆ ಬೆಂಕಿ ಹಚ್ಚಿದ್ದರೆ, ಐದು ವರ್ಷಗಳಲ್ಲಿ ನಾವು ಅದನ್ನು ಮರುನಿರ್ಮಾಣ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಕುಟುಂಬ ಎಂದರೇನು? ಅದು ನಿಮ್ಮನ್ನು ನೋಡಿಕೊಳ್ಳುತ್ತದೆ, ನಿಮ್ಮನ್ನು ರಕ್ಷಿಸುತ್ತದೆ, ಗೌರವವನ್ನು ತೋರಿಸುತ್ತದೆ. ನೀವು ನನಗಾಗಿ ಮಾಡಿದ್ದು ಇದೇ. ನೀವು ನನ್ನನ್ನು ರಕ್ಷಿಸಿದ್ದೀರಿ, ನನಗೆ ಪ್ರೀತಿ, ವಾತ್ಸಲ್ಯವನ್ನು ನೀಡಿದ್ದೀರಿ. ನೀವು ನನ್ನನ್ನು 50 ಬಾರಿ, 100 ಬಾರಿ ಅನರ್ಹಗೊಳಿಸಬಹುದು ಆದರೆ ಈ ಸಂಬಂಧವು ಗಟ್ಟಿಯಾಗುತ್ತದೆ.
“ಭಾರತ ಅವರು ವಿಭಜಿಸಲು ಬಯಸುವ ಕುಟುಂಬ. ಮಣಿಪುರ ಅವರು ನಾಶಮಾಡಲು ಬಯಸಿದ ಕುಟುಂಬ. ಬಿಜೆಪಿಯ ನೀತಿಗಳಿಂದ ಸಾವಿರಾರು ಮತ್ತು ಸಾವಿರಾರು ಕುಟುಂಬಗಳು ನಾಶವಾಗಿವೆ. ಅವರು ಜನರ ನಡುವಿನ ಸಂಬಂಧಗಳನ್ನು ನಾಶಪಡಿಸುತ್ತಾರೆ. ನಾವು ಜನರನ್ನು ಒಟ್ಟಿಗೆ ಸೇರಿಸುತ್ತೇವೆ, ಕುಟುಂಬಗಳನ್ನು ನಿರ್ಮಿಸುತ್ತೇವೆ ಎಂದಿದ್ದಾರೆ ರಾಹುಲ್.
ಇದನ್ನೂ ಓದಿ: ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಶಿಕ್ಷಕರು,ರೈತರು ಸೇರಿದಂತೆ 31 ಸಾಧಕರಿಗೆ ವಿಶೇಷ ಆಹ್ವಾನ
ಮೋದಿಯವರೇ ‘ನೀವು ರಾಷ್ಟ್ರೀಯವಾದಿ ಅಲ್ಲ’
ಮಣಿಪುರದ ಅನುಭವವನ್ನು ವಿವರಿಸಿದ ರಾಹುಲ್ ಗಾಂಧಿ, ಬಿಜೆಪಿ ಮಣಿಪುರವನ್ನು ಕೊಂದಿತು, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟಿತು. “ದೇಶದ ಪ್ರಧಾನಿಯಾಗಿ ನೀವು ನಗುತ್ತಿದ್ದೀರಿ, ಭಾರತ ಮಾತೆಯ ಹತ್ಯೆಯ ಬಗ್ಗೆ ಎರಡು ನಿಮಿಷ ಮಾತನಾಡಿದ್ದೀರಿ, ನಿಮಗೆ ಎಷ್ಟು ಧೈರ್ಯ? ಭಾರತದ ಕಲ್ಪನೆಯನ್ನು ಹೇಗೆ ಅಗೌರವಗೊಳಿಸುತ್ತೀರಿ? ಕಳೆದ ನಾಲ್ಕು ತಿಂಗಳಿನಿಂದ ನೀವು ಏನು ಮಾಡುತ್ತಿದ್ದೀರಿ? ನೀವು ಯಾಕೆ ಅಲ್ಲಿಗೆ ಹೋಗಿಲ್ಲ?, ಹಿಂಸಾಚಾರವನ್ನು ತಡೆಯಲು ನೀವು ಏಕೆ ಪ್ರಯತ್ನಿಸಲಿಲ್ಲ? ಏಕೆಂದರೆ ನೀವು ರಾಷ್ಟ್ರೀಯವಾದಿ ಅಲ್ಲ, ಭಾರತದ ಕಲ್ಪನೆಯನ್ನು ಕೊಲೆ ಮಾಡುವ ಯಾರೇ ಆದರೂ ರಾಷ್ಟ್ರೀಯವಾದಿಯಾಗಲು ಸಾಧ್ಯವಿಲ್ಲ..ಭಾರತವನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ರಾಹುಲ್ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sat, 12 August 23