2022ರ ಡಿಸೆಂಬರ್ನಿಂದ ಭಾರತವು ಜಿ20 ಅಧ್ಯಕ್ಷತೆ (G20 Presidency)ವಹಿಸಿಕೊಂಡಿದ್ದು ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಿದೆ. 2023ನೇ ಸಾಲಿನ ಜಿ20 ಅಧ್ಯಕ್ಷತೆ ವಹಿಸಿರುವ ಭಾರತ 20 ವಾರಗಳಲ್ಲಿ 100 ಸಭೆಗಳನ್ನು (G20 meetings) ಆಯೋಜಿಸಿದೆ. 26 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಭೆ ನಡೆದಿದ್ದು, ಈ ಪೈಕಿ 2 ಶೆರ್ಪಾ ಸಭೆ, 2 ಸಚಿವರ ಸಭೆ, 34ವರ್ಕಿಂಗ್ ಗ್ರೂಪ್ ಸಭೆಗಳನ್ನು ನಡೆಸಿದೆ. 39 ವರ್ಕಿಂಗ್ ಗ್ರೂಪ್ಗೆ ಸಂಬಂಧಿಸಿದ ಸಭೆ, 22 ಎಂಗೇಜ್ ಮೆಂಟ್ ಗ್ರೂಪ್ಗೆ ಸಂಬಂಧಿಸಿದ ಸಭೆಗಳು, 1 ಜಿ20 ಕರ್ಟನ್ ರೈಸರ್ಸ್, 32 ಯುನಿವರ್ಸಿಟಿ ಕನೆಕ್ಟ್ ಪ್ರೋಗ್ರಾಂ ಮತ್ತು ಜನರು ಭಾಗಿಯಾಗಿರುವ ಹಲವಾರು ಸಭೆಗಳನ್ನು ನಡೆಸಿವೆ. ಇಂದು(ಏಪ್ರಿಲ್ 10)ರ ವರೆಗೆ ಇಷೆಲ್ಲ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಜಿ20 ಭಾರತದ ವಿಶೇಷ ಕಾರ್ಯದರ್ಶಿ ಮುಕ್ತೇಶ್ ಪರ್ದೇಶಿ ಟ್ವೀಟ್ ಮಾಡಿದ್ದಾರೆ.
ಈ ಪೈಕಿ 2 ಸಭೆಗಳು ಬೆಂಗಳೂರಿನಲ್ಲಿ ಫೆಬ್ರುವರಿ 24 ಹಾಗೂ 25ರಂದು ನಡೆದಿದೆ. ನವದೆಹಲಿಯಲ್ಲಿ ಮಾರ್ಚ್ 1 ಹಾಗೂ 2ರಂದು ವಿದೇಶಾಂಗ ಸಚಿವರ ಸಭೆ ನಡೆದಿದೆ. ಹಣಕಾಸು ವಿಚಾರದಲ್ಲಿ ಜಾಗತಿಕ ಸಹಭಾಗಿತ್ವಕ್ಕೆ ಸಂಬಂಧಿಸಿದ ಸಭೆ ಮಾರ್ಚ್ 6-7ರಂದು ಹೈದರಾಬಾದ್ನಲ್ಲಿ ನಡೆದಿದೆ. ಮಾರ್ಚ್ 13ರಿಂದ 15ರ ವರೆಗೆ ಗುವಾಹಟಿಯಲ್ಲಿ ಎಸ್ಎಐ 20 ಇನ್ಸೆಪ್ಷನ್ ಮೀಟಿಂಗ್ ನಡೆದಿದೆ.
#G20India Scorecard
In 20 weeks of @g20org Presidency, ?? has successfully conducted ? G20 meetings covering 26 States/ UTs. Plus numerous #G20UniversityConnect and #JanBhagidari events held across India with the participation of students, youth, women and general public. pic.twitter.com/V1c1Vp7wry
— Muktesh Pardeshi (@MukteshPardeshi) April 10, 2023
ಮಾರ್ಚ್ ತಿಂಗಳಲ್ಲಿ ನಡೆದ ಇತರ ಸಭೆಗಳೆಂದರೆ 2ನೇ ಶೈಕ್ಷಣಿಕ ಕಾರ್ಯಕಾರಿ ಸಮಿತಿ ಸಭೆಯು ಮಾರ್ಚ್ 15ರಿಂದ 17ರ ವರೆಗೆ ಅಮೃತಸರದಲ್ಲಿ, ಮಾರ್ಚ್ 16ರಂದು ಗ್ಯಾಂಗ್ಟಕ್ನಲ್ಲಿ, ಮಾರ್ಚ್ 17ರಂದು ಸೂರತ್ನಲ್ಲಿ ನಡೆದಿದೆ. ಸ್ಟಾರ್ಟಪ್ 20 ಸೈಡ್ ಮೀಟಿಂಗ್ ಮಾರ್ಚ್ 18-19ರಂದು ಗ್ಯಾಂಗ್ಟಕ್ನಲ್ಲಿ, ಲೇಬರ್ 20 ಇನ್ಸೆಪ್ಷನ್ ಮೀಟಿಂಗ್ ಮಾರ್ಚ್ 19-20ರಂದು ಅಮೃತಸರದಲ್ಲಿ ನಡೆದಿದ್ದು, 2ನೇ ಜಂಟಿ ಹಣಕಾಸು ಮತ್ತು ಆರೋಗ್ಯ ಕಾರ್ಯಪಡೆ ಸಭೆ ಮಾರ್ಚ್ 20ರಂದು ನಡೆದಿದೆ. ಸಿವಿಲ್ 20 ಇನ್ಸೆಪ್ಷನ್ ಮೀಟಿಂಗ್ ಮಾರ್ಚ್ 21-22ರಂದು ನಾಗ್ಪುರದಲ್ಲಿ, ಸುಸ್ಥಿರ ಹಣಕಾಸು ಕಾರ್ಯಪಡೆಯ 2ನೇ ಸಭೆ ಮಾರ್ಚ್ 21-23ರಂದು ಉದಯಪುರದಲ್ಲಿ, ಮಾರ್ಗಸೂಚಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 24-25ರಂದು ಚೆನ್ನೈಯಲ್ಲಿ ನಡೆದಿದೆ.
ಮಾರ್ಚ್ 24-25ರಂದು ದಿಬ್ರೂಗಢ/ಇಟಾನಗರದಲ್ಲಿ ಆರ್ಐಐಜಿ ಕಾರ್ಯಕ್ರಮ (ಡಿಬಿಟಿ), ಪರಿಸರ ಮತ್ತು ಹವಾಮಾನ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 27-29ರಂದು ಗಾಂಧಿನಗರದಲ್ಲಿ ನಡೆದಿದೆ. ವ್ಯಾಪಾರ, ಹೂಡಿಕೆ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಾರ್ಚ್ 28ರಿಂದ 30ರ ವರೆಗೆ ಮುಂಬೈಯಲ್ಲಿ ನಡೆದಿದ್ದು ಮೂಲಸೌಕರ್ಯ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 28 ಹಾಗೂ 29ರಂದು ವಿಶಾಖಪಟ್ಟಣದಲ್ಲಿ ನಡೆದಿದೆ.
ಕೃಷಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 29ರಿಂದ 31ರ ವರೆಗೆ ಚಂಡೀಗಢದಲ್ಲಿ ನಡೆದಿದೆ. ಮೊದಲ ಶೆರ್ಪಾ ಮೀಟಿಂಗ್ ರಾಜಸ್ಥಾನದ ಉದಯಪುರದಲ್ಲಿ ನಡೆದರೆ, 2ನೇ ಶೆರ್ಪಾ ಮೀಟಿಂಗ್ ಮಾರ್ಚ್ 30ರಿಂದ ಏಪ್ರಿಲ್ 2ರ ವರೆಗೆ ಕೇರಳದ ಕುಮರಕಂನಲ್ಲಿ ನಡೆದಿತ್ತು.
ಇದನ್ನೂ ಓದಿ: Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು
ವಿಪತ್ತು ನಿರ್ವಹಣಾ ಗ್ರೂಪ್ನ ಮೊದಲ ಸಭೆ ಮಾರ್ಚ್ 30ರಿಂದ ಏಪ್ರಿಲ್ 1ರ ವರೆಗೆ ಗಾಂಧಿನಗರದಲ್ಲಿ ನಡೆದಿದೆ. ಏಪ್ರಿಲ್ 17 ರಿಂದ 19 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೃಷಿ ಕಾರ್ಯ ಗುಂಪಿನ ಸಭೆ ನಡೆಯಲಿದ್ದು, ಇದರಲ್ಲಿ ಜಿ20 ಸದಸ್ಯ ರಾಷ್ಟ್ರಗಳ ಮುಖ್ಯ ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ