G20 Meeting Calender: ಭಾರತದಲ್ಲಿ ಜಿ20 ಸಭೆಗಳು; ಇಲ್ಲಿದೆ ಪೂರ್ತಿ ಕ್ಯಾಲೆಂಡರ್
2022ರ ಡಿಸೆಂಬರ್ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ.
ನವದೆಹಲಿ: ಜಿ20 ಸದಸ್ಯ ರಾಷ್ಟ್ರಗಳ (G20 Nations) ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡ ಬಳಿಕ ದೇಶದಲ್ಲಿ ಈಗಾಗಲೇ ಅನೇಕ ಸಭೆಗಳು ನಡೆದಿವೆ. ಕೆಲವು ದಿನಗಳ ಹಿಂದಷ್ಟೇ ಜಿ20 ದೇಶಗಳ ವಿದೇಶಾಂಗ ಸಚಿವರ ಶೃಂಗಸಭೆ ದೆಹಲಿಯಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿಯೂ ಅನೇಕ ಸಭೆಗಳು ನಡೆಯಲಿವೆ. ಈ ವಿಚಾರವಾಗಿ ಪರಿಷ್ಕೃತ ಹಾಗೂ ವಿಸ್ತೃತ ವೇಳಾಪಟ್ಟಿಯನ್ನು ಜಿ20 ಆಡಳಿತ ಬಿಡುಗಡೆ ಮಾಡಿದೆ. 2022ರ ಡಿಸೆಂಬರ್ನಿಂದ ಭಾರತವು ಜಿ20 ಅಧ್ಯಕ್ಷತೆ ವಹಿಸಿಕೊಂಡಿದ್ದು, ಆ ನಂತರ ಬೆಂಗಳೂರು, ಮುಂಬೈ, ನವದೆಹಲಿ, ಗುರುಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲಾಗಿತ್ತು. ಈವರೆಗೆ (ಮಾರ್ಚ್ 6) ಒಟ್ಟಾರೆಯಾಗಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 35 ಸಭೆಗಳು ನಡೆದಿವೆ ಎಂದು ಪ್ರಕಟಣೆ ತಿಳಿಸಿದೆ.
ಈ ಪೈಕಿ 2 ಸಭೆಗಳು ಬೆಂಗಳೂರಿನಲ್ಲಿ ಫೆಬ್ರುವರಿ 24 ಹಾಗೂ 25ರಂದು, ನವದೆಹಲಿಯಲ್ಲಿ ಮಾರ್ಚ್ 1 ಹಾಗೂ 2ರಂದು ವಿದೇಶಾಂಗ ಸಚಿವರ ಸಭೆ ನಡೆದಿದೆ. 1 ಶೆರ್ಪಾ ಮೀಟಿಂಗ್, 19 ಕಾರ್ಯಕಾರಿ ಸಭೆಗಳು, ಯುರೋಪಿಯನ್ ಯೂನಿಯನ್ಗೆ ಸಂಬಂಧಿಸಿದ 12 ಸಭೆಗಳು 1 ಕರ್ಟನ್ ರೈಸರ್ ಸಭೆ ನಡೆದಿದೆ. ಮಾರ್ಚ್ 6ರ ನಂತರ 19 ಸಭೆಗಳು ನಡೆಯಲಿದೆ. ಏಪ್ರಿಲ್ನಲ್ಲಿ 16 ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಹಣಕಾಸು ವಿಚಾರದಲ್ಲಿ ಜಾಗತಿಕ ಸಹಭಾಗಿತ್ವಕ್ಕೆ ಸಂಬಂಧಿಸಿದ ಸಭೆ ಮಾರ್ಚ್ 6-7ರಂದು ಹೈದರಾಬಾದ್ನಲ್ಲಿ ನಡೆಯುತ್ತಿದೆ.
- ಎಸ್ಎಐ 20 ಇನ್ಸೆಪ್ಷನ್ ಮೀಟಿಂಗ್ ಮಾರ್ಚ್ 13ರಿಂದ 15ರ ವರೆಗೆ ಗುವಾಹಟಿಯಲ್ಲಿ ನಡೆಯಲಿದೆ.
- 2ನೇ ಶೈಕ್ಷಣಿಕ ಕಾರ್ಯಕಾರಿ ಸಮಿತಿ ಸಭೆಯು ಮಾರ್ಚ್ 15ರಿಂದ 17ರ ವರೆಗೆ ಅಮೃತಸರದಲ್ಲಿ ನಡೆಯಲಿದೆ.
- ಬಿ20 ಸಭೆ ಮಾರ್ಚ್ 16ರಂದು ಗ್ಯಾಂಗ್ಟಕ್ನಲ್ಲಿ ನಡೆಯಲಿದೆ.
- ಬಿ20 ಸಭೆ ಮಾರ್ಚ್ 17ರಂದು ಸೂರತ್ನಲ್ಲಿ ನಡೆಯಲಿದೆ.
- ಸ್ಟಾರ್ಟಪ್ 20 ಸೈಡ್ ಮೀಟಿಂಗ್ ಮಾರ್ಚ್ 18-19ರಂದು ಗ್ಯಾಂಗ್ಟಕ್ನಲ್ಲಿ ನಡೆಯಲಿದೆ.
- ಲೇಬರ್ 20 ಇನ್ಸೆಪ್ಷನ್ ಮೀಟಿಂಗ್ ಮಾರ್ಚ್ 19-20ರಂದು ಅಮೃತಸರದಲ್ಲಿ ನಡೆಯಲಿದೆ.
- 2ನೇ ಜಂಟಿ ಹಣಕಾಸು ಮತ್ತು ಆರೋಗ್ಯ ಕಾರ್ಯಪಡೆ ಸಭೆ ಮಾರ್ಚ್ 20ರಂದು ನಡೆಯಲಿದ್ದು, ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ.
- ಸಿವಿಲ್ 20 ಇನ್ಸೆಪ್ಷನ್ ಮೀಟಿಂಗ್ ಮಾರ್ಚ್ 21-22ರಂದು ನಾಗ್ಪುರದಲ್ಲಿ ನಡೆಯಲಿದೆ.
- ಸುಸ್ಥಿರ ಹಣಕಾಸು ಕಾರ್ಯಪಡೆಯ 2ನೇ ಸಭೆ ಮಾರ್ಚ್ 21-23ರಂದು ಉದಯಪುರದಲ್ಲಿ ನಡೆಯಲಿದೆ.
- ಮಾರ್ಗಸೂಚಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 24-25ರಂದು ಚೆನ್ನೈಯಲ್ಲಿ ನಡೆಯಲಿದೆ.
- ಆರ್ಐಐಜಿ ಕಾರ್ಯಕ್ರಮ (ಡಿಬಿಟಿ) ಮಾರ್ಚ್ 24-25ರಂದು ದಿಬ್ರೂಗಢ/ಇಟಾನಗರದಲ್ಲಿ ನಡೆಯಲಿದೆ.
- ಪರಿಸರ ಮತ್ತು ಹವಾಮಾನ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 27-29ರಂದು ಗಾಂಧಿನಗರದಲ್ಲಿ ನಡೆಯಲಿದೆ.
- ವ್ಯಾಪಾರ, ಹೂಡಿಕೆ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಮಾರ್ಚ್ 28ರಿಂದ 30ರ ವರೆಗೆ ಮುಂಬೈಯಲ್ಲಿ ನಡೆಯಲಿದೆ.
- ಮೂಲಸೌಕರ್ಯ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 28 ಹಾಗೂ 29ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
- ಕೃಷಿ ಕಾರ್ಯಕಾರಿ ಸಮಿತಿಯ 2ನೇ ಸಭೆ ಮಾರ್ಚ್ 29ರಿಂದ 31ರ ವರೆಗೆ ಚಂಡೀಗಢದಲ್ಲಿ ನಡೆಯಲಿದೆ.
- 2ನೇ ಶೆರ್ಪಾ ಮೀಟಿಂಗ್ ಮಾರ್ಚ್ 30ರಿಂದ ಏಪ್ರಿಲ್ 2ರ ವರೆಗೆ ಕುಮಾರಕಂನಲ್ಲಿ ನಡೆಯಲಿದೆ.
- ವಿಪತ್ತು ನಿರ್ವಹಣಾ ಗ್ರೂಪ್ನ ಮೊದಲ ಸಭೆ ಮಾರ್ಚ್ 30ರಿಂದ ಏಪ್ರಿಲ್ 1ರ ವರೆಗೆ ಗಾಂಧಿನಗರದಲ್ಲಿ ನಡೆಯಲಿದೆ.
- ಫೈನಾನ್ಶಿಯಲ್ ಆರ್ಕಿಟೆಕ್ಚರ್ ವರ್ಕಿಂಗ್ ಗ್ರೂಪ್ನ 2ನೇ ಸಭೆ ಮಾರ್ಚ್ 30 ಹಾಗೂ 31ರಂದು ಪ್ಯಾರಿಸ್ನಲ್ಲಿ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Tue, 7 March 23