ಇನ್ನು ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಗತ್ಯವಿರುವುದಿಲ್ಲ: ಅಮಿತ್ ಶಾ

| Updated By: ರಶ್ಮಿ ಕಲ್ಲಕಟ್ಟ

Updated on: Mar 19, 2022 | 7:58 PM

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಕೇಂದ್ರ ಪಡೆಗಳು "ನಿರ್ಣಾಯಕ ನಿಯಂತ್ರಣ" ತೆಗೆದುಕೊಂಡಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಗೃಹ ಸಚಿವರು ಹೇಳಿದರು.

ಇನ್ನು ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಗತ್ಯವಿರುವುದಿಲ್ಲ: ಅಮಿತ್ ಶಾ
ಅಮಿತ್ ಶಾ
Follow us on

ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಥವಾ ದೇಶದ ಅತಿದೊಡ್ಡ ಅರೆಸೇನಾ ಪಡೆ ಸಿಆರ್‌ಪಿಎಫ್ (CRPF) ಅನ್ನು ಶ್ಲಾಘಿಸಿದ ಗೃಹ ಸಚಿವ ಅಮಿತ್ ಶಾ (Amit Shah) ಇನ್ನು ಕೆಲವೇ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ಮತ್ತು ಈಶಾನ್ಯ ರಾಜ್ಯಗಳಲ್ಲಿ  ಪಡೆಗಳ ಅಗತ್ಯವಿಲ್ಲ ಎಂದು ಶನಿವಾರ ಹೇಳಿದ್ದಾರೆ. ಕಾಶ್ಮೀರದಲ್ಲಿ ಬೃಹತ್ ಭದ್ರತಾ ನಿಯೋಜನೆಯನ್ನು ತೆಗೆದುಹಾಕಲು ಉನ್ನತ ಮಟ್ಟದಲ್ಲಿ ಸರ್ಕಾರ ಸೂಚಿಸಿರುವುದು ಇದೇ ಮೊದಲ ಬಾರಿ ಆಗಿದ್ದು ಕೆಲವೇ ವರ್ಷಗಳಲ್ಲಿ ಅದನ್ನು ಸಾಧಿಸುವ ಸಮಯವನ್ನು ನಿಗದಿಪಡಿಸಿದೆ.  “ಕಾಶ್ಮೀರ, ನಕ್ಸಲ್ ಪ್ರದೇಶಗಳು ಮತ್ತು ಈಶಾನ್ಯದಲ್ಲಿ ಸಿಆರ್‌ಪಿಎಫ್ ಕೆಲಸ ಮಾಡುತ್ತಿದ್ದು ಮುಂದಿನ ಕೆಲವು ವರ್ಷಗಳಲ್ಲಿ ಎಲ್ಲಾ ಮೂರು ಪ್ರದೇಶಗಳಲ್ಲಿ, ನಮಗೆ ಸಿಆರ್‌ಪಿಎಫ್ ನ ಅಗತ್ಯವಿಲ್ಲ. ಮೂರು ಪ್ರದೇಶಗಳಲ್ಲಿ ಸಂಪೂರ್ಣ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ನನಗೆ ವಿಶ್ವಾಸವಿದೆ. ಅದು ಸಂಭವಿಸಿದಲ್ಲಿ, ಸಂಪೂರ್ಣ ಕ್ರೆಡಿಟ್ ಸಿಆರ್‌ಪಿಎಫ್‌ಗೆ ಸಲ್ಲುತ್ತದೆ ಎಂದು ಶಾ ಹೇಳಿದ್ದಾರೆ. ಶನಿವಾರ ಶ್ರೀನಗರದ ಮೌಲಾನಾ ಆಜಾದ್ ಕ್ರೀಡಾಂಗಣದಲ್ಲಿ ಸಿಆರ್‌ಪಿಎಫ್‌ನ 83 ನೇ ರೈಸಿಂಗ್ ಡೇ ಪರೇಡ್‌ನಲ್ಲಿ ಉದ್ದೇಶಿಸಿ ಮಾತನಾಡುತ್ತಿದ್ದರವರು. ಕಾಶ್ಮೀರದಲ್ಲಿ ಸಿಆರ್‌ಪಿಎಫ್‌ನ ದೊಡ್ಡ ನಿಯೋಜನೆ ಇದೆ. ಉಗ್ರಗಾಮಿಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಎದುರಿಸಲು ಅದರ ಒಟ್ಟು ಮಾನವಶಕ್ತಿಯ ಸುಮಾರು ನಾಲ್ಕನೇ ಒಂದು ಭಾಗವನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.


ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಸಿಆರ್‌ಪಿಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲೀಸರಲ್ಲದೆ ಸೇನೆ, ಬಿಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿ ಸಹ ನಿಯೋಜಿಸಲಾಗಿದೆ.

ದೆಹಲಿಯ ಸಿಆರ್‌ಪಿಎಫ್ ಪ್ರಧಾನ ಕಚೇರಿಯ ಹೊರಗೆ ಪರೇಡ್ ನಡೆಸುತ್ತಿರುವುದು ಇದೇ ಮೊದಲು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಕೇಂದ್ರ ಪಡೆಗಳು “ನಿರ್ಣಾಯಕ ನಿಯಂತ್ರಣ” ತೆಗೆದುಕೊಂಡಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಗೃಹ ಸಚಿವರು ಹೇಳಿದರು.

“370 ರದ್ದತಿ ನಂತರದ ದೊಡ್ಡ ಸಾಧನೆಯೆಂದರೆ ಭದ್ರತಾ ಪಡೆಗಳು ಭಯೋತ್ಪಾದನೆಯ ಮೇಲೆ ನಿರ್ಣಾಯಕ ನಿಯಂತ್ರಣವನ್ನು ಹೊಂದಿರುವುದು” ಎಂದು ಶಾ ಹೇಳಿದರು.  ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370ನ್ನು ಆಗಸ್ಟ್ 5, 2019 ರಂದು ಕೇಂದ್ರವು ಹಿಂತೆಗೆದುಕೊಂಡಿದ್ದು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.

ಈ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಗೃಹ ಸಚಿವರು ಹೇಳಿದರು. ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ₹ 33,000 ಕೋಟಿ ಹೂಡಿಕೆ ಬಗ್ಗೆ ಮಾತನಾಡಿದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ಆಡಳಿತದ ಪ್ರಯತ್ನಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದನ್ನು ಅವರು ಸ್ವಾಗತಿಸಿದರು.

ಇದನ್ನೂ ಓದಿ: ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ವಿಶೇಷ ಸಾಮಾಜಿಕ ಮಾಧ್ಯಮ ನಿಗಾ ಕೇಂದ್ರ ಆರಂಭಿಸಲಿದೆ ತಮಿಳುನಾಡು ಸರ್ಕಾರ