ಸೂರತ್: ಗುಜರಾತಿನಲ್ಲಿ ಕೊರಾನಾವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಸಾವಿನ ಸಂಖ್ಯೆಯೂ ಏರಿಕೆಯಾಗುತ್ತವೇ ಇದೆ. ಇಲ್ಲಿನ ಸೂರತ್ ನಗರದ ಸ್ಮಶಾನದಲ್ಲಿ ಬುಧವಾರ ರಾತ್ರಿ ಒಂದೇ ಚಿತೆಯಲ್ಲಿ 5 ಹೆಣಗಳನ್ನು ಸುಡಲಾಗಿದೆ. ಇಲ್ಲಿನ ಬಹುತೇಕ ಸ್ಮಶಾನಗಳಲ್ಲಿ ಹೆಣಗಳನ್ನಿಟ್ಟು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಕೊವಿಡ್ ನಿಂದ ಮೃತಪಟ್ಟವರ ಬಗ್ಗೆ ಸರ್ಕಾರದ ಅಂಕಿ ಅಂಶಗಳು ಇದೆಲ್ಲಕ್ಕಿಂತ ಭಿನ್ನವಾಗಿದೆ. ಸ್ಮಶಾನಕ್ಕೆ ಬರುವ ಶವಗಳ ಸಂಖ್ಯೆ ಮತ್ತು ಸರ್ಕಾರ ಪ್ರಕಟಿಸಿರುವ ಕೊವಿಡ್ ಮೃತರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಸೂರತ್ ನ ಸ್ಮಶಾನದಲ್ಲಿ ಮೂರು ದೊಡ್ಡ ಚಿತೆ ಸಿದ್ಧಪಡಿಸಿ ಅದರಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಗುಜರಾತಿನ ನಾಲ್ಕು ಪ್ರಮುಖ ನಗರಗಳ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಟಿಸಿದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಪ್ರತಿದಿನ 25 ಸಾವುಗಳು ಸಂಭವಿಸಿದೆ. ಆದರೆ ವಾಸ್ತವದಲ್ಲಿ ಸಾವಿನ ಸಂಖ್ಯೆ ಜಾಸ್ತಿ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಭರೂಚ್ನಲ್ಲಿ ಕಳೆದ 8 ದಿನಗಳಲ್ಲಿ 260 ಶವಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಆದರೆ ಸರ್ಕಾರದ ಪ್ರಕಟಣೆಯಲ್ಲಿರುವ ಸಾವಿನ ಸಂಖ್ಯೆ 36. ಗುಜರಾತಿನ ಅತೀ ದೊಡ್ಡ ಆಸ್ಪತ್ರೆಯಾದ ವಡೋದರದ ಎಸ್ಎಸ್ಜಿ ಆಸ್ಪತ್ರೆಯ ಐಸಿಯುನಲ್ಲಿ ಕಳೆದ 9 ದಿನಗಳಲ್ಲಿ ಕನಿಷ್ಠ 180 ರೋಗಿಗಳು ಸಾವಿಗೀಡಾಗಿದ್ದಾರೆ. ಗೊತ್ರಿಲ್ಲಿರುವ ಜಿಎಂಇಆರ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಸಿಯುನಲ್ಲಿ ಸಾವಿಗೀಡಾದವರ ಸಂಖ್ಯೆಯೂ ಕಡಿಮೆ ಇಲ್ಲ. ಏಪ್ರಿಲ್7ರಿಂದ ಕೊವಿಡ್ ಐಸಿಯುನಲ್ಲಿ 90 ಸಾವು ಸಂಭವಿಸಿದೆ. ಅದೇವೇಳೆ ನಾಲ್ಕು ಮತಿತು 5ನೇ ಮಹಡಿಯಲ್ಲಿರುವ ಐಸಿಯುನಲ್ಲಿ ಪ್ರತಿದಿನ ಕನಿಷ್ಠ 15 ಸಾವುಗಳು ಸಂಭವಿಸಿವೆ ಎಂದು ಮೂಲಗಳು ಹೇಳಿವೆ.
ವಡೋದರದಲ್ಲಿರುವ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 350ರಷ್ಟಿದೆ. ಆದರೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಕೊವಿಡ್ ಸಾಂಕ್ರಾಮಿಕ ಆರಂಭವಾದಂದಿನಿಂದ ಇಲ್ಲಿಯವರೆಗೆ ವಡೋದರ ಜಿಲ್ಲೆಯಲ್ಲಿ ಕೇವಲ 300 ಸಾವು ಸಂಭವಿಸಿದೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತಿವೆ.ಭರೂಚ್ನಲ್ಲಿ ಏಪ್ರಿಲ್ 7ರಿಂದ ಕನಿಷ್ಠ 260 ಕೊವಿಡ್ ರೋಗಿಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಅಲ್ಲಿನ ಸ್ಮಶಾನದಲ್ಲಿ ದಾಖಲಿಸಿರುವ ಮಾಹಿತಿಗಳು ತೋರಿಸುತ್ತಿವೆ. ಆದರೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷದಿಂದ ಈವರೆಗೆ ಭರೂಚ್ ನಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 36.
ನರ್ಮದಾ ನದಿ ತೀರದಲ್ಲಿ ಅಂತ್ಯ ಸಂಸ್ಕಾರ ಮಾಡುವ ಧರ್ಮೇಶ್ ಸೋಲಂಕಿ ಅವರ ಪ್ರಕಾರ, ಕಳೆದ 1 ವಾರದಿಂದ ಇಲ್ಲಿ ಪ್ರತಿ ದಿನ 22-25 ಕೊವಿಡ್ ರೋಗಿಗಳ ಮೃತದೇಹದ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕಾಗಿ ಪ್ರತಿದಿನ ಇಲ್ಲಿ ಸುಮಾರು 7,500 ಕೆಜಿಯಷ್ಟು ಕಟ್ಟಿಗೆ ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Total #COVID19 Cases in India (as on April 16, 2021)
⏹️ સક્રિય કેસ : 15,69,743
⏹️ સાજા થયા : 1,25,47,866
⏹️ મૃત્યુ : 1,74,308#IndiaFightsCorona #Unite2FightCorona #COVID19 pic.twitter.com/41FFVWTb7Q— PIB in Gujarat (@PIBAhmedabad) April 16, 2021
ಅಹಮದಾಬಾದ್ನಲ್ಲಿ ಕಳೆದ ನಾಲ್ಕು ದಿನಗಳಿಂದ 10 ಚಿತಾಗಾರ ಮತ್ತು ಸ್ಮಶಾನ ಭೂಮಿಯಲ್ಲಿ 100 ಶವಗಳ ಅಂತ್ಯ ಸಂಸ್ಕಾರ ನಡೆದಿದೆ. ಕಳೆದ ಒಂದು ವಾರದಲ್ಲಿ ಕನಿಷ್ಠ 50 ಕೊವಿಡ್ ರೋಗಿಗಳ ಮೃತದೇಹವನ್ನು ಅವರವರ ಕುಟುಂಬಗಳಿಗೆ ಒಪ್ಪಿಸಲಾಗಿದೆ. ಕಳೆದೆರಡು ದಿನಗಳಲ್ಲಿ ಸಾವಿನ ಸಂಖ್ಯೆ 100 ದಾಟಿದೆ. 147 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಹೀಗಿರುವಾಗ ಕಳೆದ ಮೂರು ದಿನಗಳಲ್ಲಿ ಅಹಮದಾಬಾದ್ ನಲ್ಲಿ 30 ಕೊವಿಡ್ ರೋಗಿಗಳು ಮಾತ್ರ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತಿರುವುದು ಸಂದೇಹವನ್ನುಂಟು ಮಾಡುತ್ತದೆ ಎಂದು ಉನ್ನತ ಮೂಲವೊಂದು ಹೇಳಿದೆ.
ರಾಜ್ಕೋಟ್ ಜಿಲ್ಲೆಯಲ್ಲಿ ಏಪ್ರಿಲ್ 8ರಿಂದ ಏಪ್ರಿಲ್ 14ರವರೆಗೆ ವಿವಿಧ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ 298ಕ್ಕಿಂತಲೂ ಅಧಿಕ ಆಗಿದೆ. ಆದಾಗ್ಯೂ, ಕೊವಿಡ್ ನಿಂದ ಸಾವಿಗೀಡಾದವರ ಸಂಖ್ಯೆ 57 ಅಂತಿದೆ ಸರ್ಕಾರಿ ಮೂಲಗಳು. ಗುರುವಾರ ಇದೇ ಜಿಲ್ಲೆಯಲ್ಲಿ 82 ಮಂದಿ ಸಾವಿಗೀಡಾಗಿದ್ದರು. ಸೂರತ್ ನಲ್ಲಿರುವ ಎರಡು ದೊಡ್ಡ ಚಿತಾಗಾರದಲ್ಲಿನ ಮಾಹಿತಿಯನ್ನು ಟೈಮ್ಸ್ ಆಫ್ ಇಂಡಿಯಾ ಕಲೆ ಹಾಕಿದ್ದು, ಇಲ್ಲಿ ಪ್ರತಿದಿನ ಸುಮಾರು 80 ಕೊವಿಡ್ ರೋಗಿಗಳ ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಏಪ್ರಿಲ್ 5ರಿಂದ ಏಪ್ರಿಲ್ 13ರ ವರೆಗೆ ಮೂರು ಹೊಸ ಚಿತಾಗಾರಗಳು ಇಲ್ಲಿ ನಿರ್ಮಾಣವಾಗಿದ್ದು, ಇಲ್ಲಿ ಅಂತ್ಯಸಂಸ್ಕಾರ ಮಾಡಿದ ಮೃತದೇಹಗಳ ಪೈಕಿ ಹೆಚ್ಚಿನದ್ದು ಕೊವಿಡ್ ರೋಗಿಗಳದ್ದಾಗಿದೆ . ಹೊಸತಾಗಿ ನಿರ್ಮಾಣವಾದ ಪಾಲ್ ಚಿತಾಗಾರದಲ್ಲಿ ಪ್ರತಿದಿನ ಕನಿಷ್ಠ 20 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಯುತ್ತದೆ.
ಗುರುವಾರ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 25. ಈ ಬಗ್ಗೆ ಕೊವಿಡ್ ಆಸ್ಪತ್ರೆಗಳ ಹಿರಿಯ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳ ಜತೆ ಮಾತನಾಡಿದಾಗ ಹೆಚ್ಚಿ ಸಂಖ್ಯೆಯಲ್ಲಿ ಕೊವಿಡ್ ರೋಗಿಗಳು ಸಾಯುತ್ತಿದ್ದಾರೆ ಎಂದು ಹಿರಿಯ ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ ಸಾವಿಗೀಡಾದ ಕೋವಿಡ್ ಸಂತ್ರಸ್ತರನ್ನು ಪಟ್ಟಿ ಜತೆ ಅಸ್ವಸ್ಥ ರೋಗಿಗಳ ಸಾವಿನ ಪಟ್ಟಿಯನ್ನೂ ಮಾಡುತ್ತವೆ ಆದರೆ ಸರ್ಕಾರ ಪ್ರಕಟಿಸಿದ ಸಾವಿನ ಸಂಖ್ಯೆಯಲ್ಲಿ ಈ ಇದನ್ನು ಸೇರಿಸಿಲ್ಲ ಎಂದು ಅವರು ಹೇಳಿದ್ದಾರೆ.
Total #COVID19 Cases in India (as on April 16, 2021)
⏹️ સક્રિય કેસ : 15,69,743
⏹️ સાજા થયા : 1,25,47,866
⏹️ મૃત્યુ : 1,74,308#IndiaFightsCorona #Unite2FightCorona #COVID19 pic.twitter.com/41FFVWTb7Q— PIB in Gujarat (@PIBAhmedabad) April 16, 2021
ಗುಜರಾತಿನಲ್ಲಿ ಕೊವಿಡ್ನಿಂದಾಗಿ ಸಾವಿಗೀಡಾದವರ ಸಂಖ್ಯೆಯನ್ನು ಸರ್ಕಾರ ಮರೆ ಮಾಡುತ್ತಿದೆ ಎಂಬ ಆರೋಪವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಿರಾಕರಿಸಿದ್ದಾರೆ. ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾರ್ಗಸೂಚಿ ಪ್ರಕಾರ ಅಸ್ವಸ್ಥರಾರಿಗಿರುವ ರೋಗಿ ಸತ್ತರೆ ಆ ರೋಗಿಯ ಸಾವಿಗೆ ಕಾರಣ ಏನು ಎಂಬುದನ್ನು ತಜ್ಞರ ಸಮಿತಿ ಪತ್ತೆ ಮಾಡುತ್ತದೆ. ಒಂದು ವೇಳೆ ರೋಗಿಯ ಸಾವಿಗೆ ಪ್ರಧಾನ ಕಾರಣ ಹೃದಯಾಘಾತ ಎಂಬುದು ಪತ್ತೆಯಾದರೆ, ಆ ರೋಗಿಗೆ ಕೊರೊನಾ ಸೋಂಕು ತಗಲಿದ್ದರೂ ಆತನ ಸಾವನ್ನು ಕೊವಿಡ್ ಸಾವಿನ ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೊವಿಡ್ನಿಂದಾಗಿ ಮೃತಪಟ್ಟ ಶೇ 60 ರಷ್ಟು ಮಂದಿಗೆ ಬೇರೆ ರೋಗಗಳೂ ಇರುವುದರಿಂದ ಇದು ಸಾವಿನ ಪಟ್ಟಿಯಲ್ಲಿ ಗಣನೆಗೆ ಬರುವುದಿಲ್ಲ. ರಾಜ್ಯದಲ್ಲಿ ಒಟ್ಟು ಇಂತಿಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬ ಸ್ಪಷ್ಟ ಮಾಹಿತಿ ನೀಡಿದರೆ ಜನರು ಭಯಗೊಳ್ಳುತ್ತಾರೆ. ಹಾಗಾಗಿ ವಾಸ್ತವ ಸಂಗತಿಗಳನ್ನು ಮುಚ್ಚಿಟ್ಟರೆ ಜನರ ಭೀತಿ ಕಡಿಮೆಯಾಗುತ್ತದೆ ಎಂದು ಸರ್ಕಾರ ಭಾವಿಸಿದೆ. ಆದರೆ ಈ ರೀತಿ ತಪ್ಪು ಭಾವನೆ ಸೃಷ್ಟಿಸುವದು ಸರಿಯಲ್ಲ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಸೂರತ್ನಲ್ಲಿ 18 ಅಡಿ ಎತ್ತರ 8 ಅಡಿ ಅಗಲದ ಚಿತೆ ನಿರ್ಮಿಸಿ ಒಂದೇ ಹೊತ್ತಿಗೆ ಮೂರು ಅಡಿ ಅಂತರದಲ್ಲಿ 5 ಶವಗಳನ್ನು ಒಟ್ಟಿಗೆ ಸಂಸ್ಕಾರ ಮಾಡಲಾಗುತ್ತದೆ . ಇದು ಕಾಯುವಿಕೆಯ ಸಮಯವನ್ನು ಕಡಿಮೆ ಮಾಡುವುದಲ್ಲದೆ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿದಂತಾಗುತ್ತದೆ. ಶವ ಸಂಸ್ಕಾರ ಅಧಿಕವಿದ್ದರೆ ನಾವು ಒಂದೇ ಚಿತೆಯಲ್ಲಿ 5 ಶವಗಳ ಸಂಸ್ಕಾರ ಮಾಡುತ್ತೇವೆ ಎಂದು ಕೈಲಾಶ್ ಮೋಕ್ಷ್ ಧಾಮ್ ಚಿತಾಗಾರದ ಟ್ರಸ್ಟಿ ಪ್ರವೀಣ್ ಪಟೇಲ್ ಹೇಳಿದ್ದಾರೆ.
(In Gujarat Covid Toll rises five bodies Cremated on a single makeshift pyre to speed up the disposal)
ಇದನ್ನೂ ಓದಿ: India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 17 ಸಾವಿರ ಕೇಸ್ ಪತ್ತೆ