India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 17 ಸಾವಿರ ಕೇಸ್ ಪತ್ತೆ
ಭಾರತದ ಕೊವಿಡ್ ಒಟ್ಟು ಸಂಖ್ಯೆ 1,42,91,917 ಏರಿಕೆಯಾಗಿದೆ. ಕಳೆದ ವಾರ ಭಾರತವು ಒಟ್ಟು ಕೊರೊನಾ ಪ್ರಕರಣದಲ್ಲಿ ಬ್ರೆಜಿಲ್ ಅನ್ನು 2 ನೇ ಅತಿ ಹೆಚ್ಚು ಕೊರೊನಾಗೆ ತುತ್ತಾದ ರಾಷ್ಟ್ರವಾಗಿ ಬದಲಾಯಿಸಿತು, ಆದ್ರೆ ಈಗ ಇದು ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
ದೆಹಲಿ: ಮಹಾಮಾರಿ ಕೊರೊನಾ ಎರಡನೇ ಅಲೆ ಆರ್ಭಟ ದೇಶವನ್ನೇ ಬೆಚ್ಚಿಬೀಳಿಸುತ್ತಿದೆ. ಏಪ್ರಿಲ್ 15ರಂದು ಭಾರತದಲ್ಲಿ 24 ಗಂಟೆಯಲ್ಲಿ 2,00,739 ಹೊಸ ಕೊರೊನಾ ಕೇಸ್ಗಳು ಪತ್ತೆಯಾಗಿದ್ದವು. ದೇಶದಲ್ಲಿ ಇಂದು ಒಂದು ಹೆಜ್ಜೆ ಮುಂದೆ ಹೋಗಿ 2,17,353 ಮಂದಿಯಲ್ಲಿ ಕೊರೊನಾ ಪತ್ತೆಯಾಗಿ ನಿನ್ನೆಯ ದಾಖಲೆಯನ್ನು ಮುರಿದು ಮುಂದೆ ಸಾಗುತ್ತಿದೆ. ಆ ಮೂಲಕ ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ ಇಷ್ಟೊಂದು ಕೊರೊನಾ ಕೇಸ್ಗಳು ಪತ್ತೆಯಾಗಿವೆ. ಇದರಿಂದ ಕೊರೊನಾದ ಎರಡನೇ ಅಲೆ ಶರವೇಗದಲ್ಲಿ ಸಾಗುತ್ತಿದೆ. ನಿನ್ನೆಗಿಂತ ಇಂದು ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ಗಮನಿಸಿದರೆ ಮುಂದಿನ ಹತ್ತು ದಿನಗಳಲ್ಲಿ ನಿತ್ಯದ ಕೊರೊನಾ ಕೇಸ್ ದ್ವಿಗುಣವಾಗುವ ಸಾಧ್ಯತೆ ಹೆಚ್ಚಿದೆ. ದಿನಕ್ಕೆ ನಾಲ್ಕು ಲಕ್ಷ ಕೊರೊನಾ ಕೇಸ್ಗಳು ಪತ್ತೆಯಾಗುವ ಸಾಧ್ಯತೆ ಇದೆ.
ಇದರೊಂದಿಗೆ ಭಾರತದ ಕೊವಿಡ್ ಒಟ್ಟು ಸಂಖ್ಯೆ 1,42,91,917 ಏರಿಕೆಯಾಗಿದೆ. ಕಳೆದ ವಾರ ಭಾರತವು ಒಟ್ಟು ಕೊರೊನಾ ಪ್ರಕರಣದಲ್ಲಿ 2ನೇ ಸ್ಥಾನದಲ್ಲಿದ್ದ ಬ್ರೆಜಿಲ್ ದೇಶಕ್ಕೆ ಪೈಪೋಟಿ ನೀಡಿತ್ತು. ಆದರೆ ಈಗ ಇದು ಎರಡನೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ ದೇಶ ಎಂದು ಗುರುತಿಸಿಕೊಂಡಿದೆ. ಒಂದೇ ದಿನದಲ್ಲಿ ಕೊವಿಡ್ಗೆ 1,185 ಸಾವುಗಳು ಸಂಭವಿಸಿವೆ. ಇದರಿಂದ ಮಾರಣಾಂತಿಕ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 1,74,308 ಆಗಿದೆ. ಕೊರೊನಾ ಸೋಂಕಿನಿಂದ 1,25,47,866 ಜನರು ಗುಣಮುಖರಾಗಿದ್ದಾರೆ. 15,69,743 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ 11,72,23,509 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ.
India reports 2,17,353 new #COVID19 cases, 1,18,302 discharges and 1,185 deaths in the last 24 hours, as per Union Health Ministry
Total cases: 1,42,91,917 Total recoveries: 1,25,47,866 Active cases: 15,69,743 Death toll: 1,74,308
Total vaccination: 11,72,23,509 pic.twitter.com/dQYtH8QCN6
— ANI (@ANI) April 16, 2021
ಮಹಾರಾಷ್ಟ್ರದಲ್ಲಿ 61,695 ಹೊಸ ಕೊರೊನಾ ಕೇಸ್ಗಳು ಪತ್ತೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 349 ಜನ ಬಲಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 6,769 ಹೊಸ ಕೇಸ್ಗಳು ಮತ್ತೆಯಾಗಿವೆ. ಮತ್ತು ದೆಹಲಿಯಲ್ಲಿ 16,699 ಪ್ರಕರಣಗಳು ದಾಖಲಾಗಿವೆ. ದೆಹಲಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಏರಿಕೆ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯ ಗುರುವಾರ ತನ್ನ ಕಾರ್ಯದರ್ಶಿಗಳು ಅಂಡರ್ ಸೆಕ್ರೆಟರಿ ಹಂತದವರೆಗೆ ಮನೆಯಿಂದ ಕೆಲಸ ಮಾಡಬಹುದು ಮತ್ತು ಕೇವಲ 50 ಪ್ರತಿಶತದಷ್ಟು ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗಬೇಕಿದೆ ಎಂದು ಸೂಚಿಸಿದೆ.
ಒಟ್ಟು ಕೊವಿಡ್ ಪ್ರಕರಣಗಳಲ್ಲಿ ಐದು ರಾಜ್ಯಗಳು ಹೆಚ್ಚು ಸೋಂಕಿಗೆ ಒಳಗಾಗಿವೆ. ಮಹಾರಾಷ್ಟ್ರ (35,78,160), ಕೇರಳ (11,89,175), ಕರ್ನಾಟಕ (10,94,912), ತಮಿಳುನಾಡು (9,54,948), ಮತ್ತು ಆಂಧ್ರಪ್ರದೇಶ (9,37,049) ರಾಜ್ಯಗಳಲ್ಲಿ ಅತ್ಯಧಿಕ ಸೋಂಕು ದಾಖಲಾಗಿವೆ.
(India Corona Cases India Reports Nearly 2 Lakh 16 thousand Fresh Corona Cases on April 16)
ಇದನ್ನೂ ಓದಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಯಂತ್ರಣ ತಪ್ಪಿದ ಕೊರೊನಾ; ಸಮುದಾಯಕ್ಕೆ ಹರಡಿದ ಶಂಕೆ
Published On - 8:15 am, Fri, 16 April 21