ಹೂಗ್ಲಿ ಜನವರಿ 19: ನೇಮಕಾತಿ ಪತ್ರ (Appointment letter) ಕೈ ಸೇರಲು ಎಷ್ಟು ವರ್ಷ ಕಾಯಬೇಕು? ಪಶ್ಚಿಮ ಬಂಗಾಳದಲ್ಲಿ (West Bengal) ನಿವೃತ್ತಿ ವಯಸ್ಸು ದಾಟಿದ ನಂತರ ಸರ್ಕಾರದ ನೇಮಕಾತಿ ಪತ್ರ ಕೈಸೇರುತ್ತಿದೆ. ಹೀಗೆ ನೇಮಕಾತಿ ಪತ್ರ ಕೈ ಸೇರುವ ಹೊತ್ತಿಗೆ ಇದರಲ್ಲಿ ಕೆಲವರು ಇಹಲೋಕ ತ್ಯಜಿಸಿರುತ್ತಾರೆ. ಪ್ರಾಥಮಿಕ ಶಿಕ್ಷಕರ (Primary teacher) ಉದ್ಯೋಗಕ್ಕಾಗಿ ಕಾಯುತ್ತಿದ್ದ ಯುವಕರು ಈಗ ಮಧ್ಯ ವಯಸ್ಕರಾಗಿದ್ದಾರೆ. ಅವರಿಗೆ ಸರ್ಕಾರ ನೇಮಕಾತಿ ಪತ್ರ ನೀಡುತ್ತಿದ್ದು, ಇದರಲ್ಲಿ ಹೆಚ್ಚಿನವರ 60 ವರ್ಷಕ್ಕಿಂತ ಮೇಲ್ಪಟ್ಟವರು. ಕೆಲವರಿಗೆ ಅರವತ್ತನಾಲ್ಕು, ಕೆಲವರಿಗೆ ಎಪ್ಪತ್ತೊಂದು ವರ್ಷವಾಗಿದೆ.
ಇತ್ತೀಚೆಗೆ ಹೂಗ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಪರಿಷತ್ತು ಸುಮಾರು 66 ಮಂದಿಯ ಹೆಸರಿಗೆ ನೇಮಕಾತಿ ಪತ್ರ ನೀಡಿದೆ.ಇದರಲ್ಲಿ ನಾಲ್ಕು ಮಂದಿ ಈಗಾಗಲೇ ಮೃತರಾಗಿದ್ದಾರೆ. ಒಂದೆಡೆ ಉದ್ಯೋಗ ನೀಡುವಂತೆ ಯುವಕರ ಗುಂಪೊಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ನಿವೃತ್ತಿ ವಯಸ್ಸು ದಾಟಿದ ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ. ಇದು ಹೂಗ್ಲಿಯ ಶಿಕ್ಷಣ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಈ ವಯಸ್ಸಿನಲ್ಲಿ ನೇಮಕಾತಿ ಪತ್ರ ಯಾಕೆ ಕೊಡ್ತಿದ್ದಾರೆ ಎಂಬುದು ಈ ಹಿರಿಯರಿಗೂ ಅರ್ಥವಾಗುವುದಿಲ್ಲ. ನಿವೃತ್ತಿ ವಯಸ್ಸು ಮೀರಿದೆ, ನಂತರ ಕೆಲಸ ಮಾಡುವುದು ಹೇಗೆ ಈಗಾಗಲೇ ಅನೇಕ ಸಮಸ್ಯೆಗಳು ಇವೆ. ಇನ್ನು ಏನು ಕೆಲಸ ಮಾಡುವುದು ಎಂದು ಇವರು ಕೇಳುತ್ತಿದ್ದಾರೆ. ನೇಮಕಾತಿ ಪತ್ರದಲ್ಲಿ ಶಾಲೆಯ ಹೆಸರನ್ನು ನಮೂದಿಸಲಾಗಿದೆ.
ನೇಮಕಾತಿ ಪತ್ರ ಪಡೆದ 62 ಜನರ ಪಟ್ಟಿಯಲ್ಲಿ 64 ವರ್ಷದ ದೀನಬಂಧು ಭಟ್ಟಾಚಾರ್ಯ ಕೂಡ ಇದ್ದಾರೆ. ಅವರು ಪಾಂಡುವ ಸರ್ಕಲ್ ಆಫೀಸಿಗೆ ಹೋಗಿದ್ದಾರೆ. ವಿಚಾರಣೆ ನಡೆಸಿದಾಗ ಅವರ ನೇಮಕಾತಿ ಇವತ್ತಲ್ಲ ಎಂಬುದು ಗೊತ್ತಾಯಿತು. ಇವರು ತರಬೇತಿ ಪಡೆದಿದ್ದರೂ ಕೆಲಸ ಸಿಕ್ಕಿಲ್ಲ. ನಂತರ ಮೆರಿಟ್ ಕೂಡಾ ರದ್ದುಗೊಳಿಸಲಾಯಿತು. ನಂತರ ನ್ಯಾಯಾಲಯದ ಪ್ರಕರಣ ಬಹಳ ಕಾಲ ನಡೆಯಿತು. ಆಮೇಲೆ ಎಷ್ಟೋ ವರ್ಷ ಅರವತ್ತು ವರ್ಷಗಳು ಕಳೆದ ಮೇಲೆ ಶಿಕ್ಷಣ ಪರಿಷತ್ತಿನಿಂದ ಅವರಿಗೆ ನೇಮಕಾತಿ ಪತ್ರ ಬಂದಿತ್ತು.
71 ವರ್ಷದ ಅಚಿಂತ್ಯ ಅಡಕ್ ಅವರ ಕೈಗೂ ನೇಮಕಾತಿ ಪತ್ರ ಬಂದಿದೆ. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. 1983ರಲ್ಲಿ ಅರ್ಜಿ ಸಲ್ಲಿಸಿದ್ದೆವು. ಈಗ ಕೆಲಸ ಸಿಕ್ಕಿದೆ. ಅರವತ್ತು ವರ್ಷದಲ್ಲಿ ನಿವೃತ್ತಿ,. ಈ ವಯಸ್ಸಿನಲ್ಲಿ ನಾನು ಹೇಗೆ ಕೆಲಸ ಮಾಡವುದು ಎಂದು ಅವರು ಪ್ರಶ್ನಿಸುತ್ತಾರೆ.
ನೇಮಕಾತಿ ಪತ್ರದಲ್ಲಿ ಹೂಗ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷೆ ಶಿಲ್ಪಾ ನಂದಿ ಅವರ ಸಹಿ ಇದೆ ಎಂದು 60 ವರ್ಷ ವಯಸ್ಸಿನ ಹಿರಿಯ ಉದ್ಯೋಗಾಕಾಂಕ್ಷಿಗಳು ಹೇಳುತ್ತಾರೆ. ಈ ವಿಚಾರವಾಗಿ ಟಿವಿ9 ಬಾಂಗ್ ಶಿಲ್ಪಾ ನಂದಿ ಅವರನ್ನೂ ಸಂಪರ್ಕಿಸಲಾಗಿತ್ತು. ಆದರೆ ಅವರು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಹೂಗ್ಲಿ ಜಿಲ್ಲಾ ಪರಿಷತ್ ಶಿಕ್ಷಣಾಧಿಕಾರಿ ಸುಬೀರ್ ಮುಖೋಪಾಧ್ಯಾಯ ಅವರನ್ನೂ ಸಂಪರ್ಕಿಸಲಾಗಿದೆ. ‘‘ನ್ಯಾಯಾಲಯ ನೀಡಿದ ತೀರ್ಪು ಜಾರಿಯಾಗಿದೆ. ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿ. ಇಲಾಖೆ ಅಧಿಕಾರಿಗಳು ಅದನ್ನೇ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ಜಿಲ್ಲೆಯ ಶಿಕ್ಷಣ ವಲಯದಲ್ಲಿ ಅಲ್ಲೋಲ ಕಲ್ಲೋಲ ಎದ್ದಿದೆ. ಎಬಿಪಿಟಿಎ ಕೇಂದ್ರ ಅಧ್ಯಕ್ಷ ಮೋಹನ್ ಪಂಡಿತ್ ಮಾತನಾಡಿ, ಇದೊಂದು ಭಯಂಕರ ಘಟನೆ. 1983ರಲ್ಲಿ ತರಬೇತಿ ಪಡೆದು ಕೆಲಸ ಸಿಗದವರ ಮೇಲೆ 2014ರಿಂದ ನಾನಾ ಪ್ರಕರಣಗಳು ದಾಖಲಾಗಿವೆ ಎಂಬ ಮಾತು ಕೇಳಿಬರುತ್ತಿದೆ. ಮೂರು ಬಾರಿ ಮೊಕದ್ದಮೆ ಹೂಡಿ ತೀರ್ಪು ಪಡೆದರು. ಅವರ ಪ್ರಯೋಜನಗಳು 2014 ರಿಂದ ಜಾರಿಗೆ ಬರುತ್ತವೆ. ಒಂದು ವೇಳೆ ಅವರು ಕೆಲಸಕ್ಕೆ ಸೇರಿದರು ಅಂತಿಟ್ಟುಕೊಳ್ಳಿ, ಸೇರಿದ ಕೂಡಲೇ ಅವರು ನಿವೃತ್ತರಾಗುತ್ತಾರೆ. ಅವರು ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದ ಹೇಳಿದ್ದಾರೆ.
ಏತನ್ಮಧ್ಯೆ ಎಬಿಪಿಟಿಎ ಕೇಂದ್ರ ಅಧ್ಯಕ್ಷರು ಸರ್ಕಾರದ ನಿಯಮಗಳ ಪ್ರಕಾರ ಕನಿಷ್ಠ 10 ವರ್ಷ ನಿರಂತರ ಸೇವೆ ಸಲ್ಲಿಸಬೇಕು. ಆಗ ಮಾತ್ರ ಪಿಂಚಣಿ ಸಿಗುತ್ತದೆ. ಒಂದು ದಿನ ಕಡಿಮೆಯಾದರೂ ಪಿಂಚಣಿ ಸಿಗುವುದಿಲ್ಲ. ಆ ಸಂದರ್ಭದಲ್ಲಿ ನೀವು ಗ್ರಾಚ್ಯುಟಿಯನ್ನು ಪಡೆಯುತ್ತೀರಿ. ಈ ವಿಚಾರವಾಗಿ ಜಿಲ್ಲೆಯ ವಿವಿಧೆಡೆ ಗೊಂದಲ ಉಂಟಾಗಿದೆ ಎಂದರು. ಇಡೀ ಘಟನೆಯಲ್ಲಿ ಏನು ನಡೆಯುತ್ತಿದೆ ಎಂಬ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:‘ಒಂದು ರಾಷ್ಟ್ರ, ಒಂದು ಚುನಾವಣೆ; ಕಲ್ಪನೆ ತಿರಸ್ಕರಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಬಿಜೆಪಿಯ ರಾಜ್ಯ ಸಮಿತಿ ಸದಸ್ಯ ಸ್ವಪನ್ ಪಾಲ್ ಅವರು ಇಡೀ ವಿಚಾರದಲ್ಲಿ ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ. ನೇಮಕಾತಿ ಪತ್ರ ಪಡೆಯುತ್ತಿದ್ದವರಲ್ಲಿ ಹಲವರು ಮೃತಪಟ್ಟಿದ್ದಾರೆ. ಉಳಿದವರಲ್ಲಿ ಹಲವರು 65-70 ವರ್ಷ ವಯಸ್ಸಿನವರು. ರಾಜ್ಯದಲ್ಲಿ ಅಸಮರ್ಥ ಸರ್ಕಾರ ನಡೆಯುತ್ತಿದೆ. ಸಾವಿಗೀಡಾದವರ ಮಾಹಿತಿಯನ್ನು ಸರ್ಕಾರ ನವೀಕರಿಸಲಾಗಿಲ್ಲ. ನ್ಯಾಯಾಲಯದಲ್ಲಿರುವ ಶಿಕ್ಷಣ ಮಂಡಳಿಯ ವಕೀಲರು ನವೀಕರಣವನ್ನು ನೀಡಲು ಸಾಧ್ಯವಿಲ್ಲವೇ?
ಜಿಲ್ಲಾ ಪ್ರಾಥಮಿಕ ಶಿಕ್ಷಣ ಸಂಸದ್ ಮೂಲಗಳಿಂದ ತಿಳಿದಿದ್ದರೂ, 20 ಡಿಸೆಂಬರ್ 2023 ರಂದು, ಹೈಕೋರ್ಟ್ ಅಭ್ಯರ್ಥಿಗಳನ್ನು ನೇಮಿಸಲು ತೀರ್ಪು ನೀಡಿತು. ಅದೇ ರೀತಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಪರಿಷತ್ತಿನಿಂದ 66 ಮಂದಿಯ ನೇಮಕಾತಿ ಪತ್ರ ಬಿಡುಗಡೆಗೊಳಿಸಲಾಯಿತು. ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ