Coronavirus cases in India: 45,892 ಹೊಸ ಕೊರೊನಾವೈರಸ್ ಪ್ರಕರಣ ಪತ್ತೆ, 817 ಮಂದಿ ಸಾವು

| Updated By: ರಶ್ಮಿ ಕಲ್ಲಕಟ್ಟ

Updated on: Jul 08, 2021 | 10:35 AM

Covid 19: ದೇಶದ ಸಾಪ್ತಾಹಿಕ ಸಕಾರಾತ್ಮಕ ದರವು ಶೇ 2.37ಕ್ಕೆ ಇಳಿದಿದೆ ಮತ್ತು ದೈನಂದಿನ ಸಕಾರಾತ್ಮಕ ದರವು ಶೇ 2.42ರಷ್ಟಿದೆ. ಇದು ಸತತ 17 ನೇ ದಿನಕ್ಕೆ ಶೇ 3 ಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Coronavirus cases in India: 45,892 ಹೊಸ ಕೊರೊನಾವೈರಸ್ ಪ್ರಕರಣ ಪತ್ತೆ, 817 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 45,892 ಹೊಸ ಕೊರೊವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಮತ್ತು 817 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಕೊವಿಡ್ ಪ್ರಕರಣಗಳ ಸಂಖ್ಯೆ 3,07,09,557 ಕ್ಕೆ ಏರಿದ್ದು ರ ಸಾವಿನ ಸಂಖ್ಯೆ 4,05,028 ಕ್ಕೆ ತಲುಪಿದೆ . ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,60,704 ಕ್ಕೆ ಇಳಿದಿದೆ.

ಒಟ್ಟು ಪ್ರಕರಣಗಳ ಪೈಕಿ ಶೇ 1.50 ಸಕ್ರಿಯ ಪ್ರಕರಣ, ಚೇತರಿಕೆ ಪ್ರಮಾಣ ಶೇ 97.18 ಕ್ಕೆ ಏರಿಕೆ
ಭಾರತದಲ್ಲಿ ಒಟ್ಟು 4,60,704 ಕೊರೊನಾವೈರಸ್ ಪ್ರಕರಣಗಳಿದ್ದು ಈ ಪೈಕಿ ಸಕ್ರಿಯ ಪ್ರಕರಣಗಳು ಕೇವಲ 1.5 ಪ್ರತಿಶತದಷ್ಟಿದೆ. ಏತನ್ಮಧ್ಯೆ, ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ ಚೇತರಿಕೆ ಪ್ರಮಾಣವು ಶೇಕಡಾ 97.18 ಕ್ಕೆ ಏರಿದೆ. ಭಾರತದ ದೈನಂದಿನ ಸಕಾರಾತ್ಮಕ ದರವು ಶೇಕಡಾ 2.42 ರಷ್ಟಿದ್ದು, ಸತತ 17 ದಿನಗಳವರೆಗೆ ಶೇಕಡಾ 3 ಕ್ಕಿಂತಲೂ ಕಡಿಮೆಯಾಗಿದೆ.


ದೇಶದ ಸಾಪ್ತಾಹಿಕ ಸಕಾರಾತ್ಮಕ ದರವು ಶೇ 2.37ಕ್ಕೆ ಇಳಿದಿದೆ ಮತ್ತು ದೈನಂದಿನ ಸಕಾರಾತ್ಮಕ ದರವು ಶೇ 2.42ರಷ್ಟಿದೆ. ಇದು ಸತತ 17 ನೇ ದಿನಕ್ಕೆ ಶೇ 3 ಕ್ಕಿಂತ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಮತ್ತು ಈವರೆಗೆ 42.52 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.


ಏತನ್ಮಧ್ಯೆ, ಕೊವಿಡ್ -19 ವಿರುದ್ಧದ ಒಟ್ಟು ವ್ಯಾಕ್ಸಿನೇಷನ್ 36,48,47,549 ತಲುಪಿದ್ದು, ಬುಧವಾರ 33,81,671 ಜನರಿಗೆ ಲಸಿಕೆ ನೀಡಲಾಗಿದೆ. ದೇಶದ ಎರಡನೆ ಅಲೆ ಕಡಿಮೆಯಾದಂತೆ, ಆಗಸ್ಟ್‌ನಲ್ಲಿ ಬರುವ ಮೂರನೇ ಅಲೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಯ ವರದಿಯ ಪ್ರಕಾರ, ಭಾರತವು ಆಗಸ್ಟ್‌ನಿಂದ ಮೂರನೇ ಅಲೆ ನೋಡಬಹುದು ಮತ್ತು ಸೆಪ್ಟೆಂಬರ್‌ನಲ್ಲಿ ಅದು ಗರಿಷ್ಠ ಮಟ್ಟವನ್ನು ತಲುಪುತ್ತದೆ.

ದೇಶದಲ್ಲಿ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ ದಾಟಿದೆ , ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ.  ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಗಳ ಭೀಕರ ಮೈಲಿಗಲ್ಲು ದಾಟಿತ್ತು.

ಇದನ್ನೂ ಓದಿ:  ಬೆಂಗಳೂರು: ಕೊವಿಡ್ ಸುರಕ್ಷಾ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಶೇ 169ರಷ್ಟು ಏರಿಕೆ, ಜೂನ್ ಕೊನೇ ವಾರ ಸಂಗ್ರಹವಾಗಿದ್ದು ₹5.3ಲಕ್ಷ ದಂಡ

(In India active case dropped 45,892 new coronavirus cases and 817 deaths in the last 24 hours )

 

 

Published On - 10:27 am, Thu, 8 July 21