AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ ಮಾಧವರಾವ್​ ಸಿಂಧಿಯಾ ನಿಭಾಯಿಸಿದ್ದ ನಾಗರಿಕ ವಿಮಾನಯಾನ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ; ಅಂದು ಅವರು ವಿಫಲರಾಗಿದ್ದರು..

ಮಾಧವರಾವ್​ ಮೂಲತಃ ಜನಸಂಘ (ಈಗಿನ ಬಿಜೆಪಿ..ಸ್ಥಾಪನೆಯಾಗುವಾಗ ಜನಸಂಗ ಎಂಬ ಹೆಸರಿತ್ತು)ದ ನಾಯಕ. ಆದರೆ ನಂತರ ಇಂದಿರಾ ಗಾಂಧಿ ಆಡಳಿತವಿದ್ದಾಗಲೇ ಕಾಂಗ್ರೆಸ್ ಸೇರ್ಪಡೆಯಾದರು.

ಅಪ್ಪ ಮಾಧವರಾವ್​ ಸಿಂಧಿಯಾ ನಿಭಾಯಿಸಿದ್ದ ನಾಗರಿಕ ವಿಮಾನಯಾನ ಖಾತೆಯನ್ನೇ ಪಡೆದ ಜ್ಯೋತಿರಾದಿತ್ಯ ಸಿಂಧಿಯಾ; ಅಂದು ಅವರು ವಿಫಲರಾಗಿದ್ದರು..
ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಾಧವರಾವ್​ ಸಿಂಧಿಯಾ
TV9 Web
| Updated By: Lakshmi Hegde|

Updated on:Jul 08, 2021 | 11:34 AM

Share

ಕೊರೊನಾ ಸಾಂಕ್ರಾಮಿಕದ ಪ್ರಾರಂಭದ ಹೊತ್ತಲ್ಲೇ ಮಧ್ಯಪ್ರದೇಶದವನ್ನು ಬಿಜೆಪಿ ಮಡಿಲಿಗೆ ಹಾಕಿಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್​ ಕೊಟ್ಟಿದ್ದಾರೆ. ಅಂತೂ ಕೇಂದ್ರ ಸಂಪುಟ ವಿಸ್ತರಣೆ ಹೊತ್ತಲ್ಲಿ ಕ್ಯಾಬಿನೆಟ್​ ದರ್ಜೆಯ ಮಂತ್ರಿಗಿರಿ ಅವರ ಪಾಲಿಗೆ ದೊರೆತಿದೆ. ಖಾತೆ ಹಂಚಿಕೆಯನ್ನೂ ಮಾಡಲಾಗಿದ್ದು, ನಾಗರಿಕ ವಿಮಾನಯಾನ ಇಲಾಖೆಯ ಜವಾಬ್ದಾರಿ ಜ್ಯೋತಿರಾದಿತ್ಯ ಸಿಂಧಿಯಾರವರ ಹೆಗಲಿಗೇರಿದೆ.

ಇಷ್ಟುದಿನ ಹರ್ದೀಪ್​ ಸಿಂಗ್​ ಪುರಿ ಕೈಯಲ್ಲಿದ್ದ ಸಿವಿಲ್​ ಏವಿಯೇಶನ್​ ಇಲಾಖೆ ಜ್ಯೋತಿರಾದಿತ್ಯ ಸಿಂಧಿಯಾರಿಗೆ ನೀಡಲಾಗಿದೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ಅದೇನೆಂದರೆ ಸರಿಯಾಗಿ 30ವರ್ಷಗಳ ಹಿಂದೆ, ಪಿ.ವಿ.ನರಸಿಂಹ ರಾವ್​ ಪ್ರಧಾನಮಂತ್ರಿಯಾಗಿದ್ದಾಗ ಈ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿ ಜ್ಯೋತಿರಾದಿತ್ಯ ಸಿಂಧಿಯಾ ತಂದೆ ಮಾಧವರಾವ್​ ಸಿಂಧಿಯಾ ನೇಮಕರಾಗಿದ್ದರು. ಇವರು 1991ರಿಂದ 1993ರವರೆಗೆ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಇಲಾಖೆಗಳ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದನ್ನು ಖಂಡಿತ ಇಲ್ಲಿ ನೆನಪಿಸಿಕೊಳ್ಳಲೇಬೇಕು.

ತಂದೆ-ಮಗನ ನಡುವಿನ ಸಾಮ್ಯತೆ ಮಾಧವರಾವ್​ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಹಲವು ಸಾಮ್ಯತೆಗಳು ಗೋಚರಿಸುತ್ತವೆ. ಇವರಿಬ್ಬರೂ ನಾಗರಿಕ ವಿಮಾನಯಾನ ಸಚಿವರಾಗುವುದಕ್ಕೂ ಮೊದಲು ಕೇಂದ್ರ ಮಂತ್ರಿಗಳಾಗಿ ಬೇರೆ ಬೇರೆ ಇಲಾಖೆಯನ್ನು ನಿಭಾಯಿಸಿದ್ದರು. ಮಾಧವರಾವ್​ ಅವರು ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಸಿವಿಲ್​ ಏವಿಯೇಶನ್​ ಸಚಿವರಾಗುವುದಕ್ಕೂ ಮೊದಲು ರಾಜೀವ್​ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಹಾಗೇ ಜ್ಯೋತಿರಾದಿತ್ಯ ಸಿಂಧಿಯಾ ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ನಾವಿಲ್ಲಿ ಮತ್ತೊಂದು ಮಹತ್ವದ ಅಂಶವನ್ನು ಪರಿಗಣಿಸಬಹುದು. ಮಾಧವರಾವ್​ ಮೂಲತಃ ಜನಸಂಘ (ಈಗಿನ ಬಿಜೆಪಿ..ಸ್ಥಾಪನೆಯಾಗುವಾಗ ಜನಸಂಘ ಎಂಬ ಹೆಸರಿತ್ತು)ದ ನಾಯಕ. ಆದರೆ ನಂತರ ಇಂದಿರಾ ಗಾಂಧಿ ಆಡಳಿತವಿದ್ದಾಗಲೇ ಕಾಂಗ್ರೆಸ್ ಸೇರ್ಪಡೆಯಾದರು. ಹಾಗೇ, ಕಾಂಗ್ರೆಸ್​ನಲ್ಲಿಯೇ ಇದ್ದ ಜ್ಯೋತಿರಾದಿತ್ಯ ಸಿಂಧಿಯಾ ಗಾಂಧಿ ಕುಟುಂಬದ ಆಡಳಿತ, ನಿರ್ಲಕ್ಷ್ಯ ಮನೋಭಾವದಿಂದ ಬೇಸರಗೊಂಡು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇನ್ನು ಮಾಧವರಾವ್ ಸಿಂಧಿಯಾ​ ಅವರು ನಾಗರಿಕ ವಿಮಾನಯಾನ ಖಾತೆಯ ಜವಾಬ್ದಾರಿ ಹೊತ್ತ ಬಳಿಕ ಅದನ್ನು ನಿರ್ವಹಿಸಲು ಕಷ್ಟವಾಯಿತು. ರೈಲ್ವೆ ಸಚಿವರಾಗಿ ತುಂಬ ಹೆಸರುಗಳಿಸಿದ್ದ ಅವರಿಗೆ ವಿಮಾನಯಾನ ಖಾತೆ ಅಷ್ಟು ಒಗ್ಗಿರಲಿಲ್ಲ. ಕೊನೆಗೂ ಒಂದು ವಿಮಾನ ಅಪಘಾತದ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡಲೇಬೇಕಾಯಿತು. ಇದೀಗ ಜ್ಯೋತಿರಾದಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಇಲಾಖೆ ಹೊಣೆ ಹೊತ್ತಿದ್ದಾರೆ. ಇವರಿಗೂ ಇದು ಸುಲಭದಲ್ಲಿ ಇಲ್ಲ. ಈ ಕ್ಷೇತ್ರ ತುಂಬ ತೊಂದರೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ಸಾಂಕ್ರಾಮಿಕ. ಅಂದು ಮಾಧವರಾವ್​​ ಸಿಂಧಿಯಾ ಈ ಖಾತೆ ನಿಭಾಯಿಸಲು ವಿಫಲರಾದರು..ಆದರೆ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಪೂರ್ಣಗೊಳಿಸಲಿ..

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಎರಡು ಹೆಬ್ಬಾವು ಸೆರೆ; ಒಂದು ಕುರಿ ಮರಿ ತಿಂದು ಮಲಗಿತ್ತು, ಮತ್ತೊಂದು ಬೇಟೆಗೆ ಸಿದ್ಧವಾಗಿತ್ತು

Jyotiraditya Scindia heads Civil Aviation ministry his father Madhavrao held

Published On - 11:20 am, Thu, 8 July 21

ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?