ರವಿಶಂಕರ್ ಪ್ರಸಾದ್ ಔಟ್, ಅಶ್ವಿನಿ ವೈಷ್ಣವ್ ಇನ್; ವಿವಾದಗಳು ಸುತ್ತಿಕೊಂಡಿರುವ ಐಟಿ ಸಚಿವಾಲಯದ ಮುಂದಿದೆ ಹೊಸ ಸವಾಲು

Ashwini Vaishnaw: ಐಟಿ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಅವರ ಸ್ಥಾನಕ್ಕೆ ವೈಷ್ಣವ್ ಬಂದಿದ್ದಾರೆ. ನೂತನ ಸಚಿವರ ಮುಂದೆ ಪರಿಹರಿಸಬೇಕಾದ ಹಲವಾರು ಸವಾಲುಗಳು ಇವೆ. ಕೇಂದ್ರ ಸರ್ಕಾರ ಮತ್ತು ಟೆಕ್ ದೈತ್ಯ ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ನಡುವೆ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ವಾಗ್ವಾದಗಳು ನಡೆಯುತ್ತಿದೆ.

ರವಿಶಂಕರ್ ಪ್ರಸಾದ್ ಔಟ್, ಅಶ್ವಿನಿ ವೈಷ್ಣವ್ ಇನ್; ವಿವಾದಗಳು ಸುತ್ತಿಕೊಂಡಿರುವ ಐಟಿ ಸಚಿವಾಲಯದ ಮುಂದಿದೆ ಹೊಸ ಸವಾಲು
ರವಿಶಂಕರ್ ಪ್ರಸಾದ್- ಅಶ್ವಿನಿ ವೈಷ್ಣವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 08, 2021 | 2:09 PM

ನರೇಂದ್ರ ಮೋದಿ  ನೇತೃತ್ವದ ಸಚಿವ ಸಂಪುಟ ಪುನಾರಚನೆಯಾಗಿದ್ದು ಐಟಿ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ವಹಿಸಿಕೊಂಡಿದ್ದಾರೆ.  ಈ ಹಿಂದೆ ಐಟಿ  ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಕಾಲಾವಧಿಯಲ್ಲಿ ಅನೇಕ ವಿವಾದಗಳು ಈ  ಸಚಿವಾಲಯಕ್ಕೆ ಸುತ್ತಿಕೊಂಡಿದೆ. ರಾಜಕಾರಣಿ ಅಶ್ವಿನಿ  ವೈಷ್ಣವ್ ಐಟಿ ಮತ್ತು ರೈಲ್ವೆ  ಸಚಿವಾಲಯದ ಸಾರಥ್ಯ ವಹಿಸಿದ್ದು ಅವರ ಕಿರುಪರಿಚಯ ಹಾಗೂ  ಮಾಜಿ ಐಟಿ ಸಚಿವರ ವಿವಾದಗಳ ಬಗ್ಗೆ ಕಿರುನೋಟ ಇಲ್ಲಿದೆ.

ಮಾಜಿ ಐಎಎಸ್ ಅಧಿಕಾರಿ, ಐಐಟಿ-ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ವಾರ್ಟನ್ ಬ್ಯುಸಿನೆಸ್ ಸ್ಕೂಲ್, ಉದ್ಯಮಿ, ಒಡಿಶಾದ ರಾಜ್ಯಸಭಾ ಸಂಸದರಾಗಿರುವ ಅಶ್ವಿನಿ ವೈಷ್ಣವ್ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 1970 ರಲ್ಲಿ ಜೋಧ್‌ಪುರದಲ್ಲಿ ಜನಿಸಿದ ವೈಷ್ಣವ್ ಬಾಲಸೋರ್ ಮತ್ತು ಕಟಕ್‌ನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  1999 ರಲ್ಲಿ ವಿನಾಶಕಾರಿ ಸೂಪರ್ ಚಂಡಮಾರುತದ ನಂತರ ಪುನರ್ವಸತಿ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರವಹಿಸಿದವರು ಇವರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರ ಕಚೇರಿಯಲ್ಲಿಯೂ ಕೆಲಸ ಮಾಡಿದ ಅನುಭವ. 2004 ರಲ್ಲಿ ಎನ್​ಡಿಎ ಪರಾಭವಗೊಂಡ ನಂತರ ವಾಜಪೇಯಿ ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡರು.

2008 ರಲ್ಲಿ ಎಂಬಿಎ ಪೂರ್ಣಗೊಳಿಸಿದ ವೈಷ್ಣವ್ ಜಿಇ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕರಾದರು. ಲೋಕೋಮೋಟಿವ್‌ಗಳ ಉಪಾಧ್ಯಕ್ಷರು ಮತ್ತು ಸೀಮೆನ್ಸ್‌ನಲ್ಲಿ ನಗರ ಮೂಲಸೌಕರ್ಯ ಕಾರ್ಯತಂತ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. 2012ರಲ್ಲಿ ಅವರು ಗುಜರಾತ್‌ನಲ್ಲಿ ತ್ರೀ ಟೀ ಆಟೋ ಲಾಜಿಸ್ಟಿಕ್ಸ್ ಮತ್ತು ವೀ ಗೀ ಆಟೋ ಕಾಂಪೊನೆಂಟ್ಸ್ ಎಂಬ ಎರಡು ಆಟೋಮೋಟಿವ್ ಘಟಕಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರು, 2019 ರಲ್ಲಿ ಬಿಜೆಪಿಗೆ ಸೇರಿದ ಅವರು ಬಿಜೆಡಿಯ ಬೆಂಬಲದೊಂದಿಗೆ ರಾಜ್ಯಸಭಾ ಸಂಸದರಾದರು.

ಬುಧವಾರ ಟ್ವೀಟ್ ಮಾಡಿ ವೈಷ್ಣವ್ ಕೇಂದ್ರ ಸಚಿವರಾಗಿ ರಾಷ್ಟ್ರ ಸೇವೆ ಮಾಡಲು ನನಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನ ಮಂತ್ರಿಯವರ ಕನಸು ಸಾಕಾರಾಗೊಳಿಸಲು“ನಾಳೆ ಅಧಿಕಾರ ವಹಿಸಿಕೊಳ್ಳುತ್ತೇನೆ ಮತ್ತು ಛಲದಿಂದ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ. “ಒಡಿಶಾದ ಜನರಿಗೆ ಸೇವೆ ಸಲ್ಲಿಸಲು ನಾನು ಭಗವಾನ್ ಜಗನ್ನಾಥನ ಆಶೀರ್ವಾದವನ್ನು ಬಯಸುತ್ತೇನೆ” ಎಂದಿದ್ದಾರೆ ಅವರು.

ಐಟಿ ಸಚಿವಾಲಯದ ಮುಂದಿದೆ ಹಲವು ಸವಾಲು ಐಟಿ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಅವರ ಸ್ಥಾನಕ್ಕೆ ವೈಷ್ಣವ್ ಬಂದಿದ್ದಾರೆ. ನೂತನ ಸಚಿವರ ಮುಂದೆ ಪರಿಹರಿಸಬೇಕಾದ ಹಲವಾರು ಸವಾಲುಗಳು ಇವೆ. ಕೇಂದ್ರ ಸರ್ಕಾರ ಮತ್ತು ಟೆಕ್ ದೈತ್ಯ ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ನಡುವೆ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ವಾಗ್ವಾದಗಳು ನಡೆಯುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಆರೋಪದಲ್ಲಿ ಪೊಲೀಸರು ಟ್ವಿಟರ್ ಕಚೇರಿಯಲ್ಲಿ ಶೋಧ ಕಾರ್ಯವನ್ನೂ ನಡೆಸಿದ್ದರು. ಜನವರಿ 31 ರಂದು ಭಾರತದಲ್ಲಿ 257 ಖಾತೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವಂತೆ ಐಟಿ ಸಚಿವಾಲಯ ಟ್ವಿಟರ್​ಗೆ ನೋಟಿಸ್ ನೀಡುವ ಮೂಲಕ ಪ್ರಸಾದ್ ಸುದ್ದಿಯಾಗಿದ್ದರು.

ಈ ಖಾತೆಗಳು, ರೈತರ ಪ್ರತಿಭಟನೆಯ ಬಗ್ಗೆ “ತಪ್ಪು ಮಾಹಿತಿ ಹರಡುತ್ತಿವೆ”, ಇದು “ದೇಶದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸನ್ನಿಹಿತ ಹಿಂಸಾಚಾರಕ್ಕೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಟಿ ಸಚಿವಾಲಯ ಹೇಳಿತ್ತು.

ಒಂದು ವಾರದ ನಂತರ 1,150 ಕ್ಕೂ ಹೆಚ್ಚು ಖಾತೆಗಳಿಗೆ ಭಾರತದಲ್ಲಿ ಪ್ರವೇಶವನ್ನು ನಿರ್ಬಂಧಿಸುವ ವಿನಂತಿಯೊಂದಿಗೆ ಹೊಸ ಪಟ್ಟಿಯನ್ನು ಐಟಿ ಸಚಿವಾಲಯ ಟ್ವಿಟರ್‌ಗೆ ಕಳಿಸಿತು. ಟ್ವಿಟರ್ ಆರಂಭದಲ್ಲಿ ನಿರಾಕರಿಸಿದರೂ ಶೀಘ್ರದಲ್ಲೇ ಔಪಚಾರಿಕ ಸಂವಾದವನ್ನು ಬಯಸಿತು. ಅಷ್ಟೇ ಅಲ್ಲದೆ ಅದರ ಉದ್ಯೋಗಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಆದರೆ ಫೆಬ್ರವರಿ 10 ರಂದು ಟ್ವಿಟರ್ ಅಧಿಕಾರಿಗಳೊಂದಿಗೆ ಎರಡು ಗಂಟೆಗಳ ಕಾಲ ನಡೆದ ಸಭೆಯ ನಂತರ, ಪ್ರಸಾದ್ ನೇತೃತ್ವದ ಸಚಿವಾಲಯವು ಸರ್ಕಾರವು ಎತ್ತಿದ ದೂರುಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿತು.

ಆ ಜಗಳ ಟ್ವಿಟರ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಮತ್ತು ಡಿಜಿಟಲ್ ನ್ಯೂಸ್ ಚಾನೆಲ್‌ಗಳಿಗೆ ಮಾರ್ಗಸೂಚಿಗಳನ್ನು ಸೂಚಿಸುವ ಹೊಸ ಐಟಿ ನಿಯಮಗಳ ಫೆಬ್ರುವರಿ ಪ್ರಕಟಣೆಯ ನಂತರ, ಸಚಿವಾಲಯವು ಟೆಕ್ ಸಂಸ್ಥೆಗಳ ಮೇಲೆ “ಧಿಕ್ಕಾರ” ಎಂದು ದಾಳಿ ಮಾಡಿತು.

ನಿಯಮಗಳನ್ನು ಸಮರ್ಥಿಸಿ ಮಾರ್ಚ್ ತಿಂಗಳಲ್ಲಿ ದಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಪ್ರಸಾದ್ ಸರ್ಕಾರವು “ಇಂಟರ್ನೆಟ್ ಸಾಮ್ರಾಜ್ಯಶಾಹಿಯನ್ನು” “ಆಯ್ದ ಕೆಲವರ” ಮೂಲಕ ಸ್ವೀಕರಿಸುವುದಿಲ್ಲ. ಸ್ಥಳೀಯ ವಿಚಾರಗಳು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾವನೆಗಳನ್ನು ಗೌರವಿಸುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಮೇ ತಿಂಗಳಲ್ಲಿ ಕೊವಿಡ್ ಪರಿಸ್ಥಿತಿಯ ಬಗ್ಗೆ “ಮೋದಿ ಸರ್ಕಾರ ಮತ್ತು ದೇಶದ ವಿವಿಧ ಬಿಜೆಪಿ ಸರ್ಕಾರಗಳನ್ನು ಹೇಗೆ ಮೂಲೆಗುಂಪಾಗಿಸುವುದು” ಎಂಬುದರ ಕುರಿತು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಪಕ್ಷದ ತಂತ್ರಜ್ಞರಿಗೆ ಸೂಚನೆಗಳೊಂದಿಗೆ ಆನ್‌ಲೈನ್ “ಟೂಲ್‌ಕಿಟ್” ಅನ್ನು ರಚಿಸಿದೆ ಎಂದು ಆಡಳಿತ ಬಿಜೆಪಿ ಆರೋಪಿಸಿದೆ.

ಡಾಕ್ಯುಮೆಂಟ್ “ನಕಲಿ” ಎಂದು ಕಾಂಗ್ರೆಸ್ ಹೇಳಿದ್ದರಿಂದ, ಪೊಲೀಸರು ಟ್ವಿಟರ್ ಕಚೇರಿಗಳಲ್ಲಿ ಶೋಧ ನಡೆಸಿದರು. ಸರ್ಕಾರದ ಈ ಕ್ರಮವನ್ನು “ಬೆದರಿಕೆ ತಂತ್ರಗಳು” ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ “ಸಂಭಾವ್ಯ ಬೆದರಿಕೆ” ಎಂದು ಟ್ವಿಟರ್ ಆರೋಪಿಸಿದ್ದು, ಪ್ರಸಾದ್ ಈ ಆರೋಪ ನಿರಾಕರಿಸಿದ್ದರು.

ತಿಂಗಳ ನಂತರ ಫೇಸ್‌ಬುಕ್ ಒಡೆತನದ ವಾಟ್ಸ್ ಆಪ್ ದೆಹಲಿ ಹೈಕೋರ್ಟ್‌ಗೆ ಸಂಪರ್ಕಿಸಿ, ಮಾಹಿತಿಯ ಮೊದಲ ಮೂಲವನ್ನು ಗುರುತಿಸುವ ಬಗ್ಗೆ ಐಟಿ ಸಚಿವಾಲಯದ ಮಾನದಂಡಗಳು ಗೂಢ ಲಿಪೀಕರಣವನ್ನು ಉಲ್ಲಂಘಿಸುತ್ತವೆ  ಎಂದು ಹೇಳಿತ್ತು. ಅಪರಾಧವನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು end-to-end encryption ಮಾಡಲಾದ ತ್ವರಿತ ಸಂದೇಶ ವೇದಿಕೆಗಳಿಂದ “ಸೀಮಿತ” ದತ್ತಾಂಶವನ್ನು ಪ್ರವೇಶಿಸಲು ನಿಯಂತ್ರಕ ಕಾರ್ಯವಿಧಾನವನ್ನು ಬಯಸುವ ಏಕೈಕ ದೇಶ ಭಾರತವಲ್ಲ ಎಂದು ಪ್ರಸಾದ್ ಪ್ರತಿಕ್ರಿಯಿಸಿದರು.

ಜೂನ್ 25 ರಂದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ತನ್ನ ಖಾತೆಯಿಂದ ಅಮೆರಿಕಾದ ಹಕ್ಕುಸ್ವಾಮ್ಯ ಕಾನೂನು ಉಲ್ಲಂಘನೆಯ ನೋಟೀಸ್ ಸ್ವೀಕರಿಸಿದ ಆರೋಪದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ತನ್ನ ಅಧಿಕೃತ ಟ್ವಿಟರ್ ಖಾತೆ ಲಾಕ್ ಮಾಡಲಾಗಿದೆ ಎಂದು ಪ್ರಸಾದ್ ಹೇಳಿದಾಗ ಈ ಜಗಳ ಮತ್ತಷ್ಟು ತೀವ್ರವಾಯಿತು.

ಕಳೆದ ವರ್ಷ ಪ್ರಸಾದ್ ಅವರ ಟೆಲಿಕಾಂ ಸಚಿವಾಲಯವು ಚೀನಾದ ಗಡಿ ಆಕ್ರಮಣ ಸರ್ಕಾರದ ಪ್ರತಿಕ್ರಿಯೆಯ ಮುಖವಾಯಿತು. ಚೀನಾ ಸಂಘರ್ಷದ ಬೆನ್ನಲ್ಲೇ ಜೂನ್ 29, 2020 ರಂದು ಚೀನಾ ಮಾಲೀಕತ್ವವನ್ನು ಹೊಂದಿರುವ ಅಥವಾ ಚೀನಾಕ್ಕೆ ಕೆಲವು ಸಂಪರ್ಕಗಳನ್ನು ಹೊಂದಿರುವ 59 ಅಪ್ಲಿಕೇಶನ್‌ಗಳನ್ನು ಸಚಿವಾಲಯ ನಿಷೇಧಿಸಿತು.

ಈ ಅಪ್ಲಿಕೇಶನ್‌ಗಳು ರಕ್ಷಣಾ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯಲ್ಲಿ “ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುವಂತದ್ದು”. ಎಂದು ಸಚಿವಾಲಯ ಹೇಳಿತ್ತು. ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಗಡಿ ವಿವಾದದ ಮಧ್ಯೆ ಈ ಕ್ರಮವು ಪ್ರತೀಕಾರದ ಹೆಜ್ಜೆಯಾಗಿ 2020 ಜೂನ್ 15 ರಂದು ಚೀನಾ ದಾಳಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದರು.

ಪ್ರಸಾದ್ ಅವರು ಕಾನೂನು ಸಚಿವರೂ ಆಗಿದ್ದು ಇಲ್ಲಿಯೂ ವಿವಾದಗಳು ಉಂಟಾಗಿತ್ತು. 2014 ರಲ್ಲಿ ಕಾನೂನು ಮಂತ್ರಿಯಾಗಿ ನೇಮಕಗೊಂಡ ನಂತರ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ NJAC (NJAC) ಮೂಲಕ ನ್ಯಾಯಾಂಗ ನೇಮಕಾತಿಗಳ ಪರಿಶೀಲನೆ ಮಾಡಿದ್ದು ಅವರ ಮೊದಲ ಕಾರ್ಯ ಆಗಿತ್ತು. ಆದರೆ ಅವರ ಈ ಕಾರ್ಯ ಎರಡು ವರ್ಷಗಳ ಕಾಲ ನ್ಯಾಯಾಧೀಶರ ನೇಮಕವನ್ನು ಸ್ಥಗಿತಗೊಳಿಸಿತು.

ಅಕ್ಟೋಬರ್ 2015 ರಲ್ಲಿ ಸುಪ್ರೀಂ ಕೋರ್ಟ್ ಎನ್‌ಜೆಎಸಿಯನ್ನು ಅಸಂವಿಧಾನಿಕ ಎಂದು ತಳ್ಳಿಹಾಕಿತು. ತೀರ್ಪಿನ ಹೊರತಾಗಿಯೂ, ನ್ಯಾಯಾಧೀಶರನ್ನು ನೇಮಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಸಮಾನ ಪಾಲುದಾರ ಎಂದು ಪ್ರಸಾದ್ ಒತ್ತಾಯಿಸಿದರು.

ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಸಮಸ್ಯೆಗಳನ್ನು ಉಲ್ಲೇಖಿಸಿ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ಬಡ್ತಿ ಕುರಿತು 2018 ರಲ್ಲಿ ಕಾನೂನು ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತು. ನ್ಯಾಯಮೂರ್ತಿ ಜೋಸೆಫ್, ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, 2016 ರಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸುವ ಕೇಂದ್ರದ ಆದೇಶವನ್ನು ರದ್ದುಗೊಳಿಸಿದರು. ಅಂತಿಮವಾಗಿ, ಸಚಿವಾಲಯವು ಕೊಲೀಜಿಯಂನ ಶಿಫಾರಸನ್ನು ನೀಡಿತು.

ಪ್ರಸಾದ್ ಅವರು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದು ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಮಸೂದೆ ಮುಂದಿಟ್ಟರು. ರಾಜ್ಯಸಭೆಯಲ್ಲಿ ಎರಡು ಬಾರಿ ಈ ಕಾನೂನು ಸ್ಥಗಿತಗೊಂಡಿತು ಮತ್ತು ಅಂತಿಮವಾಗಿ 2019 ರಲ್ಲಿ ಅಂಗೀಕರಿಸಲ್ಪಟ್ಟಿತು.

ಇದನ್ನೂ ಓದಿ:  Union Cabinet Reshuffle: ಪ್ರಧಾನಿ ಮೋದಿ ಸಂಪುಟದಿಂದ ಇಂದು ಹೊರಬಂದವರ ಪಟ್ಟಿ ಇಲ್ಲಿದೆ; ಉನ್ನತ ಖಾತೆಗಳ ಸಚಿವರಿಂದಲೂ ರಾಜೀನಾಮೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್