Covid 19 Vaccines: ಆಗಸ್ಟ್​​ನಲ್ಲಿ ಭಾರತ ತಲುಪಲಿವೆ 40 ಲಕ್ಷ ಡೋಸ್​ಗಳಷ್ಟು ಫೈಜರ್​, ಮಾಡೆರ್ನಾ ಲಸಿಕೆಗಳು..

ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್​ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್​ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ.

Covid 19 Vaccines: ಆಗಸ್ಟ್​​ನಲ್ಲಿ ಭಾರತ ತಲುಪಲಿವೆ 40 ಲಕ್ಷ ಡೋಸ್​ಗಳಷ್ಟು ಫೈಜರ್​, ಮಾಡೆರ್ನಾ ಲಸಿಕೆಗಳು..
ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Lakshmi Hegde

Updated on:Jul 08, 2021 | 5:27 PM

ದೆಹಲಿ: ಕೊರೊನಾ ಮೂರನೇ ಅಲೆ ಏಳುವ ಹೊತ್ತಿಗೆ ಹೇಗಾದರೂ ಸರಿ ದೇಶದಲ್ಲಿ ಶೇ.70ರಷ್ಟಾದರೂ ಜನರಿಗೆ ಕೊವಿಡ್​ 19 ಲಸಿಕೆ ನೀಡಿ ಮುಗಿಸಿರಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದೇಶಿ ಲಸಿಕೆಗಳನ್ನು ಭಾರತದಲ್ಲಿ ಬಳಸುವ ಸಂಬಂಧ ಪರೀಕ್ಷೆಗಳು ತ್ವರಿತರಗತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊವ್ಯಾಕ್ಸ್​ ಎಂಬ ಜಾಗತಿಕ ಮಟ್ಟದ ಕೊರೊನಾ ಲಸಿಕೆ ಹಂಚಿಕೆ ಕಾರ್ಯಕ್ರಮದಡಿ ಮೊದಲ ಬಾರಿಗೆ ಭಾರತಕ್ಕೆ ವಿದೇಶಿ ನಿರ್ಮಿತ ಕೊವಿಡ್​ 19 ಲಸಿಕೆಗಳು ತಲುಪಲಿವೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಈ ಕಾರ್ಯಕ್ರಮದಡಿ ಭಾರತಕ್ಕೆ 30-40 ಲಕ್ಷದಷ್ಟು ಫೈಜರ್​ ಹಾಗೂ ಮಾಡೆರ್ನಾ ಲಸಿಕೆಗಳು ಆಗಸ್ಟ್​ನಲ್ಲಿ ತಲುಪಲಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಲಸಿಕೆ ಮತ್ತು ರೋಗನಿರೋಧಕಗಳ ಜಾಗತಿಕ ಒಕ್ಕೂಟ (GAVI)ದ ವಕ್ತಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಲಸಿಕೆ ಹಂಚಿಕೆ ಕೊವ್ಯಾಕ್ಸ್ ಕಾರ್ಯಕ್ರಮದಡಿ ಅಮೆರಿಕ ನೀಡಲಿರುವ ಲಸಿಕೆಯ ಡೋಸ್​ಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿವೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆಯ ಅತಿದೊಡ್ಡ ಉತ್ಪಾದಕ ದೇಶ ಭಾರತ ಏಪ್ರಿಲ್​ವರೆಗೂ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು ಕೊವ್ಯಾಕ್ಸ್ ಪ್ರೋಗ್ರಾಂನಡಿ ವಿವಿಧ ದೇಶಗಳಿಗೆ ನೀಡಿದೆ. ಆದರೆ ಏಪ್ರಿಲ್​ನಲ್ಲಿ ನಮ್ಮ ದೇಶದಲ್ಲಿಯೇ ಲಸಿಕೆ ಕೊರತೆ ಉಂಟಾದಾಗ ಅನಿವಾರ್ಯವಾಗಿ ನಿಲ್ಲಿಸಿದೆ. ಈಗ ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದ್ದು, ಮೂರನೇ ಅಲೆ ಶುರುವಾಗುವುದಕ್ಕೂ ಮೊದಲು ಲಸಿಕೆ ನೀಡಿ ಮುಗಿಯಬೇಕಿದೆ. ಸದ್ಯ ಭಾರತದಲ್ಲಿ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳು ಬಳಕೆಯಾಗುತ್ತಿದೆ. ಅದರಲ್ಲೂ ದೇಶಾದ್ಯಂತ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಸದ್ಯ ಕೊವಿಶೀಲ್ಡ್ ಎರಡು ಡೋಸ್​ಗಳ ಲಸಿಕೆ.

ಇದನ್ನೂ ಓದಿ: K Annamalai: ಮೋದಿ ಸಂಪುಟ ವಿಸ್ತರಣೆ ಎಫೆಕ್ಟ್; ಅಣ್ಣಾಮಲೈಗೆ ಒಲಿದು ಬರುತ್ತದಾ ಆ ಅದೃಷ್ಟ!?

India May Receive Pfizer, Moderna COVID 19 Vaccine By August

Published On - 12:56 pm, Thu, 8 July 21