Union Cabinet Reshuffle: ಪ್ರಧಾನಿ ಮೋದಿ ಸಂಪುಟದಿಂದ ಇಂದು ಹೊರಬಂದವರ ಪಟ್ಟಿ ಇಲ್ಲಿದೆ; ಉನ್ನತ ಖಾತೆಗಳ ಸಚಿವರಿಂದಲೂ ರಾಜೀನಾಮೆ

ಇಂದು ರಾಜೀನಾಮೆ ನೀಡಿದ ಸಚಿವರನ್ನು ಅವಲೋಕಿಸಿದರೆ ಇಲ್ಲಿ ಪ್ರಮುಖವಾಗಿ ಗಮನಸೆಳೆಯುವುದು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ. ಇದೆರಡೂ ಇಲಾಖೆಗಳ ಇಬ್ಬರೂ ಸಚಿವರು ಅಂದರೆ ಕೇಂದ್ರ ಮತ್ತು ರಾಜ್ಯ ಸಚಿವರಿಬ್ಬರೂ ರಾಜೀನಾಮೆ ಸಲ್ಲಿಸಿದ್ದಾರೆ.

Union Cabinet Reshuffle: ಪ್ರಧಾನಿ ಮೋದಿ ಸಂಪುಟದಿಂದ ಇಂದು ಹೊರಬಂದವರ ಪಟ್ಟಿ ಇಲ್ಲಿದೆ; ಉನ್ನತ ಖಾತೆಗಳ ಸಚಿವರಿಂದಲೂ ರಾಜೀನಾಮೆ
ರಾಜೀನಾಮೆ ಸಲ್ಲಿಸಿದ ಡಾ ಹರ್ಷವರ್ಧನ್​ ಮತ್ತು ರಮೇಶ್​ ಪೋಖ್ರಿಯಾಲ್​
Follow us
TV9 Web
| Updated By: Lakshmi Hegde

Updated on:Jul 07, 2021 | 3:56 PM

ದೆಹಲಿ: ಇಂದು ಸಚಿವ ಸಂಪುಟ ಪುನರಚನೆ ಆಗುತ್ತಿರುವ ಬೆನ್ನಲ್ಲೇ ಒಂದರ ಬೆನ್ನಿಗೆ ಮತ್ತೊಂದು ಬೆಳವಣಿಗೆ ಆಗುತ್ತಿದೆ. ಹೊಸದಾಗಿ ಯಾರೆಲ್ಲ ಸ್ಥಾನ ಪಡೆಯಬಹುದು ಎಂಬ ಬಗ್ಗೆ ಇರುವಷ್ಟೇ ಕುತೂಹಲ..ಈ ಬಾರಿ ಯಾರೆಲ್ಲ ತಮ್ಮ ಮಂತ್ರಿಸ್ಥಾನ ಕಳೆದುಕೊಳ್ಳಬಹುದು ಎಂಬ ಬಗ್ಗೆಯೂ ಇದೆ. ಅದರಂತೆ ಈಗಾಗಲೇ ಹಲವು ಕೇಂದ್ರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಆರೋಗ್ಯ ಸಚಿವ ಹರ್ಷವರ್ಧನ್​, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​ ನಿಶಾಂಕ್, ​ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ರಾಜ್ಯ ಸಚಿವ ಬಬುಲ್​ ಸುಪ್ರಿಯೋ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್​ಚಂದ್​ ಗೆಹಲೋತ್​, ಪಶುಸಂಗೋಪನೆ- ಹೈನುಗಾರಿಕೆ -ಮೀನುಗಾರಿಕೆ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ರಾಜ್ಯ ಸಚಿವ ಪ್ರತಾಪ್​ ಚಂದ್ರ ಸಾರಂಗಿ, ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ-ಸಬಲೀಕರಣ​ ಇಲಾಖೆ ಸಚಿವ ರತನ್​ಲಾಲ್ ಕಟಾರಿಯಾ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವ ರಾವ್​ ಸಾಹೇಬ್​ ಪಾಟೀಲ್​ ದಾನ್ವೆ, ಕಾರ್ಮಿಕ ಸಚಿವ ಸಂತೋಷ್​ ಗಾಂಗ್ವಾರ್​, ಶಿಕ್ಷಣ ಇಲಾಖೆ ರಾಜ್ಯ ಸಚಿವ ಸಂಜಯ್​ ಧೋತ್ರೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರ ಸಂಪುಟದಲ್ಲಿ ಇವರೆಲ್ಲ ಸೇರಿ 53 ಸಚಿವರು ಇದ್ದರು. ಅದರಲ್ಲಿಂದು ರಾಜೀನಾಮೆ ನೀಡಿದ ಸಚಿವರ ಖಾತೆಯೂ ಬೇರೆ ಹೊಸಬರ ಪಾಲಿಗೆ ಹೋಗಲಿದೆ ಅಥವಾ ಇನ್ನುಳಿದ ಸಚಿವರ ಹೆಗಲಿಗೆ ಪ್ರಮುಖ ಖಾತೆಯನ್ನು ಕೊಟ್ಟು, ಅವರ ಬಳಿ ಇದ್ದ ಖಾತೆಯನ್ನು ಇಂದು ಸೇರ್ಪಡೆಯಾಗುವವರ ಹೆಗಲಿಗೆ ನೀಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು ಇಂದು ರಾಜೀನಾಮೆ ನೀಡಿದ ಸಚಿವರನ್ನು ಅವಲೋಕಿಸಿದರೆ ಇಲ್ಲಿ ಪ್ರಮುಖವಾಗಿ ಗಮನಸೆಳೆಯುವುದು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ. ಇದೆರಡೂ ಇಲಾಖೆಗಳ ಇಬ್ಬರೂ ಸಚಿವರು ಅಂದರೆ ಕೇಂದ್ರ ಮತ್ತು ರಾಜ್ಯ ಸಚಿವರಿಬ್ಬರೂ ರಾಜೀನಾಮೆ ಸಲ್ಲಿಸಿದ್ದಾರೆ. ಇಲ್ಲಿ ಪ್ರಧಾನಿ ಮೋದಿ ಲೆಕ್ಕಾಚಾರ ಅರ್ಥವಾಗುತ್ತಿಲ್ಲ. ಕೊರೊನಾ ಸಮಯದಲ್ಲಿ ತುಂಬ ಮಹತ್ವ ಪಡೆದಿದ್ದ ಇದೆರಡೂ ಖಾತೆಗಳನ್ನು ನಿಭಾಯಿಸಲು ಆಯಾ ಇಲಾಖೆ ಸಚಿವರು ವಿಫಲರಾದರಾ? ಎಂಬುದೊಂದು ಪ್ರಶ್ನೆ ಹುಟ್ಟದೆ ಇರದು. ಅದರಲ್ಲಿ ಥಾವರಚಂದ್ ಗೆಹಲೋತ್​ ನಿನ್ನೆಯೇ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ಇನ್ನು ಸದಾನಂದ ಗೌಡ ರಾಜೀನಾಮೆ ಬಗ್ಗೆ ಆಗಲೇ ಗುಸುಗುಸು ಶುರುವಾಗಿತ್ತು, ಅದೀಗ ನಿಜವಾಯಿತು. ಅವರ ಬದಲಿಗೆ ಕರ್ನಾಟಕದಿಂದ ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿದೆ ಎನ್ನಲಾಗುತ್ತಿದೆ. ಇಂದು ಸಂಜೆ 7 ಗಂಟೆಯಿಂದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶುರುವಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗೇ, ಇಂದು 43 ಸಚಿವರು ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Modi Cabinet Reshuffle Live: ಆರೋಗ್ಯ ಖಾತೆಯ ಇಬ್ಬರೂ ಸಚಿವರ ತಲೆದಂಡ! 

These Union ministers have resigned from the PM Modi Cabinet Today ahead of Cabinet Expansion

Published On - 3:53 pm, Wed, 7 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ